Fans celebrated the birthday of Cha Nagar MP Sunil Bose in a grand manner.

ವರದಿ: ಬಂಗಾರಪ್ಪ .ಸಿ.
ಹನೂರು :ಉತ್ತಮ ಸಮಾಜ ಸೇವೆಯನ್ನು ಮಾಡುವ ಉದ್ದೇಶದಿಂದ ನಮ್ಮ ಪ್ರೀತಿಯ ನಾಯಕರು ಸಂಸದರಾಗಿ ಆಯ್ಕೆಯಾಗಿದ್ದಾರೆ, ಅವರ ಹುಟ್ಟು ಹಬ್ಬವನ್ನು ಇಂದು ಆಚರಿಸುತ್ತಿರುವುದು ನಮ್ಮೆಲ್ಲರ ಹೆಮ್ಮೆಯ ವಿಷಯ ಹಾಗೂ ನಮ್ಮ ಸಂಸದರು ದೇಶದ ನಂ 1 ಸಂಸದರಾಗಿ ಕಾರ್ಯನಿರ್ವಹಿಸಲಿ, ಅಲ್ಲದೆ ಮಾಜಿ ಶಾಸಕರಾದ ಆರ್ ನರೇಂದ್ರ ರವರ ಸಹಕಾರದೊಂದಿಗೆ ನೀರಾವರಿ ಯೋಜನೆ ,ರಸ್ತೆ ಅಭಿವೃದ್ಧಿ ಸೇರಿದಂತೆ ಇನ್ನಿತರ ಕೆಲಸ ಕಾರ್ಯಗಳನ್ನು ಸರ್ಕಾರದಿಂದ ಅನುಧಾನವನ್ನು ತಂದು ಹನೂರು ಕ್ಷೇತ್ರದ ಸರ್ವತೋಮುಖ ಬೆಳವಣಿಗೆಗೆ ಕಾರಣಿಕರ್ತರಾಗಿ ಮುಂದಿನ ದಿನಗಳಲ್ಲಿ ಸಚಿವರಾಗಿ ಮುಖ್ಯಮಂತ್ರಿಯಾಗಿ ಅಧಿಕಾರ ಮಾಡಿ ಬಡವರ ಏಳಿಗೆಗಾಗಿ ದುಡಿಯುವಂತಾಗಲಿ ಎಂದು ರಾಮಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ವಿಭಾಗದ ಉಪಾಧ್ಯಕ್ಷರಾದ ಗುರುದೇವ ತಿಳಿಸಿದರು .
ಹನೂರು ತಾಲೂಕಿನ ಕೌದಳ್ಳಿಯ ಕರುಣಭವನದ ವೃದ್ಧಶ್ರಮದಲ್ಲಿ ಚಾಮರಾಜನಗರ ಲೋಕಸಭಾ ಸದಸ್ಯರಾದ ಶ್ರೀ ಯುತ ಸುನಿಲ್ ಬೋಸ್ ರವರ 44ನೇ ಹುಟ್ಟಹಬ್ಬವನ್ನು ಮಾಧರಿಯಾಗಿ ಆಚರಿಸಬೇಕೇಂದು ತಿರ್ಮಾನಿಸಿದ್ದೆವೆ ಎಂದು ಇದೇ ಸಂದರ್ಭದಲ್ಲಿ ರಾಮಪುರ ಬ್ಲಾಕ್ ಕಾಂಗ್ರೆಸ್ ನ ಪರಿಶಿಷ್ಟ ವಿಭಾಗದ ಅದ್ಯಕ್ಷ ರಾದ
ರಾಮಲಿಂಗಮ್ ಮಾತನಾಡಿ ಬೋಸ್ ರವರ 44ನೇ ಹುಟ್ಟುಹಬ್ಬವನ್ನು ಅಭಿಮಾನಿಗಳ ಸೇರಿದಂತೆ ಹಲವಾರು ಕಾರ್ಯಕರ್ತರು ಕೌದಳ್ಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣುಹಂಪಲುಗಳನ್ನು ಉಚಿತವಾಗಿ ನೀಡಿ ಹುಟ್ಟಿದ ಹಬ್ಬವನ್ನು ಆಚರಿಸಲು ತಿರ್ಮಾನಿಸಲಾಗಿದೆ ಹಾಗೂ ಕೌದಳ್ಳಿಯ ಕರುಣಭವನದಲ್ಲಿರುವ ವೃದ್ಧ ರಿಗೆ ಊಟವನ್ನು ನೀಡುತ್ತಿದ್ದೆವೆ ಎಂದರು.
ಸಂಸದರ ಹುಟ್ಟು ಹಬ್ಬದ ಪ್ರಯುಕ್ತ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹುಟ್ಟುಹಬ್ಬವನ್ನು ಹಣ್ಣು ಹಂಪಲುಗಳನ್ನು ನೀಡುವ ಮೂಲಕ ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ಬಂಡಳ್ಳಿ ಶಿವಕುಮಾರ್ ಆತ್ಮತೃಪ್ತಿ ಟ್ರಸ್ಟ್ ನ ಕಾರ್ಯದರ್ಶಿಗಳಾದ ಪ್ರಿಯದರ್ಶಿನಿ . ಬಂಗಾರಪ್ಪ . ಪೊನ್ನಾಚಿ ಸತೀಶ್ , ಸಮನ್ಸ್ ರವರು , ರಾಮ ,ಶ್ರೀನಿವಾಸ್ ,ಜೀವಾನಂದ ,ಮುನಿಯಮ್ಮ ,ಅರುಣ,ಗೋವಿಂದರಾಜು ಶ್ರೀನಿವಾಸ ದೇವಿ ಮುತ್ತುಮಾದ ,ಚಿನ್ನದೊರೆ ಸೇರಿದಂತೆ ಇನ್ನಿತರ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.