G.M. Rajashekhar urges CM Siddaramaiah to provide facilities to real journalists in rural areas.

ಬೇಂಗಳೂರು: ಬೆಂಗಳೂರಿನ ವಾರ್ತಾ ಭವನದ ಸಭಾಂಗಣದಲ್ಲಿ ಇಂದು ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ಧರಾಮಯ್ಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಧರ್ಭದಲ್ಲಿ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ವತಿಯಿಂದ ಸಂಘದ ಅಧ್ಯಕ್ಷರಾದ ಜಿ.ಎಂ.ರಾಜಶೇಖರ್ ಮತ್ತು ಪದಾಧಿಕಾರಿಗಳು, ಪತ್ರಕರ್ತರ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಸಲ್ಲಿಸಿದರು.

ಸರ್ಕಾರದ ಜನ ಕಲ್ಯಾಣ ಶಕ್ತಿ ಯೋಜನೆಯಲ್ಲಿ ಕೆಲವು ನಿಮಗಳಿಂದ ನಗರ ಹಾಗೂ ಗ್ರಾಮೀಣ ಭಾಗದ ನೈಜ ಪತ್ರಕರ್ತರಿಗೆ ಸಮಸ್ಯೆ ಉಂಟಾಗಿದ್ದು, ಕೆಲವು ಮಾನದಂಡಗಳಿಂದ ವಿನಾಯಿತಿ ನೀಡಬೇಕು. ತಮ್ಮ ಅವಧಿಯಲ್ಲಿ ಪತ್ರಕರ್ತರ ಅನೇಕ ಸಮಸ್ಯೆಗಳಿಗೆ ಸ್ಪಂಧನೆ ನೀಡಿದ್ದೀರಿ. ನೀವು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಪತ್ರಕರ್ತರಿಗೆ ಹಲವು ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದು,
ಇದೀಗ ಶಕ್ತಿ ಯೋಜನೆಯಡಿ ಗ್ರಾಮೀಣ ಭಾಗದ ಪತ್ರಕರ್ತರಿಗೆ ಬಸ್ ಪಾಸ್ ನೀಡುವ ವಿಚಾರದಲ್ಲಿ ರೂಪಿಸಲಾಗಿರುವ ಮಾನದಂಡಗಳಲ್ಲಿ ಶಕ್ತಿ ಯೋಜನೆಯಲ್ಲಿರುವಂತೆ ಪತ್ರಕರ್ತರಿಗೂ ಸರಳ ನಿಯಮದಡಿಯಲ್ಲಿ ರಾಜ್ಯಾದ್ಯಂತ ಸಂಚರಿಸಲು ಅನುವು ಮಾಡಿಕೊಟ್ಟು ದಾಖಲೆಗಳ ಆಧಾರದ ಮೇಲೆ(ಆರ್ ಎನ್ ಐ) ನೈಜ ಪತ್ರಕರ್ತರಿಗೆ ಸೌಲಭ್ಯ ದೊರಕಲು ಅನುಕೂಲ ಮಾಡಿಕೊಡಬೇಕೆಂದು ಸಂಘದ ಅಧ್ಯಕ್ಷರು ಮನವಿ ಮಾಡಿದರು.
ಸಂಘದ ವತಿಯಿಂದ ನೀಡಿದ ಮನವಿಗೆ ಸಿಎಂ ಸಿದ್ಧರಾಮಯ್ಯ ಅವರು ಸಕಾರಾತ್ಮಕವಾಗಿ ಸ್ಪಂಧನೆ ನೀಡಿದ ಅವರು, ಗ್ರಾಮೀಣ ಭಾಗದಲ್ಲಿನ ಪತ್ರಕರ್ತರ ಹಿತದೃಷ್ಠಿಯಿಂದ ಬಸ್ ಪಾಸ್ ನೀಡಬೇಕೆಂಬುದು ಹಲವು ವರ್ಷಗಳ ಬೇಡಿಕೆಯಾಗಿತ್ತು. ಇದನ್ನು ಮನಗಂಡು ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಇದೀಗ ದೇಶದಲ್ಲಿಯೇ ಪ್ರಥಮವಾಗಿ ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ನೀಡಲಾಗಿದ್ದು,
ಬಸ್ ಪಾಸ್ ಪಡೆಯಲು ಈಗಿರುವ ಕೆಲವು ಮಾನದಂಡಗಳನ್ನು ಸಡಿಲಗೊಳಿಸುವ ಬಗ್ಗೆ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ಅಧ್ಯಕ್ಷರು ಮಾಡಿರುವ ಮನವಿಯನ್ನು ಪರಿಶೀಲನೆ ನಡೆಸಲಾಗುವುದು ಎಂದರು.
ಮಾಧ್ಯಮ ಪಟ್ಟಿಯಲ್ಲಿರುವ ಪತ್ರಕರ್ತರ ಕುಟುಂಬದ ಆರೋಗ್ಯ ರಕ್ಷಣೆಗೆ ಮುಖ್ಯಮಂತ್ರಿಗಳ ಮಾಧ್ಯಮ ಸಂಜೀವಿನಿ ಜಾರಿಗೊಳಿಸಲಾಗಿದ್ದು, ಇದರಿಂದ ೫ ಲಕ್ಷದವರೆಗೆ ನಗದು ರಹಿತ ಚಿಕಿತ್ಸೆ ದೊರೆಯಲಿದೆ ಎಂದು ಹೇಳಿದರು.
ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಬಂಗಾರಪ್ಪ, ಖಜಾಂಚಿ ಮಂಜು ಎಂ.ಹೊಸಹಳ್ಳಿ, ಉಪಾಧ್ಯಕ್ಷರಾದ ಕೃಷ್ಣನ್, ರವೀಂಧ್ರಶೆಟ್ಟಿ, ರಾಜ್ಯ ಪದಾಧಿಕಾರಿಗಳಾದ ರೂಪೇಶ್ ಕುಮಾರ್, ಮಲ್ಲಿಕಾರ್ಜುನ್, ಸದಸ್ಯರಾದ ಮಂಡ್ಯ ಅನಂತರಾಜು, ಮೈಸೂರು ರಘು, ಕನಕಪುರ ಜಗದೀಶ್, ಹೆಚ್.ಡಿ.ಕೋಟೆ ಸೋಮಶೇಖರ್, ರಘುರಾಂ, ರಮೇಶ್ ಕೋಟಿ ಸೇರಿದಂತೆ ಹಲವು ಜಿಲ್ಲೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.