Breaking News

ತಾಲೂಕಿನಲ್ಲಿ ಎಗ್ಗಿಲ್ಲದೆ ಸಾಗಿದೆ ಮಟ್ಕಾ ಇಸ್ಪೀಟ್ ದಂಧೆ. ಕಡಿವಾಣ ಯಾವಾಗ! ಬಗ್ಗುಬಡಿಯಬೇಕಿದೆ ಪೊಲೀಸ್ ಇಲಾಖೆಬಗ್ಗು ಬಡಿಯ ಬೇಕಾದ ಪೋಲೀಸ್‌ ಇಲಾಖೆ ಸುಮ್ಮನಿದೆ ಏಕೆ !!! ???

The Matka and Ispeet racket is running rampant in the taluk. When will it be curbed! The police department needs to be punished. The police department needs to be punished. Why is it silent!!! ?

ಜಾಹೀರಾತು

ಗಂಗಾವತಿ: ಚೆನ್ನಾಗಿ ಮಳೆಯಾಗಿ, ಒಳ್ಳೆಯ ಬೆಳೆ ಬೆಳೆದರು, ಸರಿಯಾದ ಬೆಂಬಲ ಬೆಲೆ ಸಿಗದೇ ಬರ ಪರಿಸ್ಥಿತಿಯುಂಟಾಗುತ್ತಿರುವ ಈ ಸಂದರ್ಭದಲ್ಲಿ ಇಸ್ಪೀಟ್, ಮಟ್ಕಾ ಆಡಿಸುವವರ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದೆ. ಜೂಜಾಟದಲ್ಲಿ ತೊಡಗುವ ಬಹುತೇಕರು ಇಸ್ಪೀಟ್, ಮಟ್ಕಾ ಚಟಕ್ಕೆ ಬಿದ್ದು ಮೈಕ್ರೋ ಫೈನಾನ್ಸ್ಗಳಲ್ಲಿ ಸಾಲ ಮಾಡಿ ಕುಟುಂಬಗಳನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದ್ದಾರೆ ಎಂದು ದಲಿತ ಸಂಘಟನಾ ಸಮಿತಿ ಭೀಮ ಘರ್ಜನೆ ಸಂಘಟನೆಯ ಕೊಪ್ಪಳ ಜಿಲ್ಲಾಧ್ಯಕ್ಷರಾದ ಅಜಯಕುಮಾರ ಚಲುವಾದಿ ಪ್ರಕಟಣೆಯಲ್ಲಿ ಖೇದ ವ್ಯಕ್ತಪಡಿಸಿದರು.


ಅವರು ಅಕ್ರಮ ಜೂಜಾಟಗಳ ಕಡೆಗೆ ಪೊಲೀಸ್ ಇಲಾಖೆಯ ಮೇಲಾಧಿಕಾರಿಗಳು ಗಮನಹರಿಸಿ, ಕಡಿವಾಣ ಹಾಕಬೇಕೆಂದು ಒತ್ತಾಯಿಸಿ ಮಾತನಾಡಿದರು. ಗಂಗಾವತಿ ಕನಕಗಿರಿ ಮತ್ತು ಕಾರಟಗಿ ತಾಲೂಕುಗಳ ನಗರ, ಪಟ್ಟಣ, ಹಳ್ಳಿಗಳು ಸೇರಿದಂತೆ ಆಯಕಟ್ಟಿನ ಸ್ಥಳಗಳಲ್ಲಿ ಪ್ರಮುಖ ವ್ಯಕ್ತಿಗಳ ಕಣ್ಗಾವಲಲ್ಲಿ ಇಸ್ಪೀಟ್ ಜೂಜಾಟ ಆಡಿಸುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಗಂಗಾವತಿ ತಾಲೂಕಿನ ಕಲ್ಕುಡಿ, ಮರಳಿ, ಸಂಗಾಪುರ, ವೆಂಕಟಗಿರಿ, ಗಡ್ಡಿ, ಉಡುಮಕಲ್ಲು, ಸಿದ್ದಿಕೇರಿ, ಎಪಿಎಂಸಿ ಇಷ್ಟೇ ಅಲ್ಲದೆ ಆಯ್ದ ಹೊಲಗಳಲ್ಲಿ ಶೆಡ್ಡುಗಳನ್ನು ಹಾಕಿ ಅಂದರ್ ಬಾಹರ್ ಜೂಜಾಟ ಆಡಿಸುತ್ತಿರುವ ಆರೋಪ ಕೇಳಿಬರುತ್ತಿದೆ. ಪ್ರಮುಖ ಲಾಡ್ಜ್ಗಳನ್ನು ಸಹ ಇಸ್ಪೀಟ್ ಜೂಜಾಟಕ್ಕೆ ಬಳಕೆ ಮಾಡಿಕೊಂಡು ಪ್ರತಿದಿನವೂ ಲಕ್ಷಾಂತರ ಹಣ ಜೂಜಾಟ ನಡೆಯುತ್ತಿದೆ.

ಇಸ್ಪೀಟ್ ಆಟದ ಅಡ್ಡೆಗೆ ಪ್ರವೇಶಿಸುವವರಿಗೆ ಒಂದು ಸಾವಿರ ರೂಪಾಯಿ ಎಂಟ್ರಿ ಫೀಸ್ ನಿಗದಿ ಮಾಡಲಾಗಿದೆ. ಇತ್ತೀಚೆಗಷ್ಟೇ ಪೊಲೀಸ್ ಇಲಾಖೆಯ ದಾಳಿಯ ಭಯದಿಂದ ಕೆಲ ಇಸ್ಪೀಟ್ ಅಡ್ಡೆಗಳನ್ನು ಮುಚ್ಚಲಾಗಿದೆಯಾದರೂ, ಇನ್ನುಳಿದವರು ಯಾವ ಭಯವೂ ಇಲ್ಲದೇ ರಾಜಾರೋಷವಾಗಿ ಇಸ್ಪೀಟ್ ಆಡಿಸುತ್ತಿದ್ದಾರೆ. ನಗರದ ಪ್ರತಿಷ್ಠಿತ ವ್ಯಕ್ತಿಗಳು ಕೂಡ ಈ ದಂಧೆಯಲ್ಲಿ ತೊಡಗಿರುವುದು ಎಲ್ಲೆಡೆ ಅಚ್ಚರಿ ಮೂಡಿಸಿದೆ. ಪೊಲೀಸ್ ಇಲಾಖೆ ಅಧಿಕಾರಿಗಳ ಕಣ್ತಪ್ಪಿಸಿ ಮಟ್ಕಾ ಬುಕ್ಕಿಗಳು ಆಟ ನಡೆಸಿದ್ದಾರೆ. ಬಸಾಪಟ್ಟಣ, ದಾಸನಾಳ, ಸಂಗಾಪುರ, ಮುಸ್ಟೂರು, ಡಣಾಪುರ, ಆನೆಗುಂದಿ, ವಡ್ಡರಹಟ್ಟಿ, ಗಂಗಾವತಿಯಲ್ಲಿ ಮಟ್ಕಾ ಬುಕ್ಕಿಗಳು ಬರೆದ ಹಣವನ್ನು ಪಡೆಯುವ ದೊಡ್ಡ ಬುಕ್ಕಿಗಳು ಇದ್ದಾರೆ ಎನ್ನಲಾಗಿದೆ.

ಆನ್‌ಲೈನ್‌ನಲ್ಲಿ ಮಟ್ಕಾ ಕುರಿತ ಎಲ್ಲಾ ಮಾಹಿತಿ ಲಭ್ಯವಾಗುತ್ತಿರುವುದರಿಂದ ಕಲ್ಯಾಣಿ, ಶ್ರೀದೇವಿ, ಮಧುರೈ ಡೇ, ಮೇನ್‌ಬಜಾರ್, ಕಲ್ಯಾಣನೈಟ್ ಸೇರಿದಂತೆ ಬಗೆಬಗೆಯ ಜೂಜಾಟದಲ್ಲಿ ಜನತೆ ತೊಡಗಿದ್ದಾರೆ. ಇದರಿಂದ ಬಡ ಕುಟುಂಬಗಳು ಬೀದಿಗೆ ಬರುತ್ತಿವೆ. ಈ ಅಕ್ರಮಕ್ಕೆ ಕಡಿವಾಣ ಇಲ್ಲದಾಗಿದೆ. ಜೂಜಾಟ ನಡೆದಿರುವ ಕುರಿತಂತೆ ಸಂಬಂಧಿಸಿದ ಇಲಾಖೆಗಳು ಗಮನಹರಿಸಿ ಅಕ್ರಮಕ್ಕೆ ಮುಂದಾಗಬೇಕು ಎಂದು

ದಲಿತ ಸಂಘಟನಾ ಸಮಿತಿ ಭೀಮ ಘರ್ಜನೆ ಕೊಪ್ಪಳ ಜಿಲ್ಲಾಧ್ಯಕ್ಷರು, ಅಜಯಕುಮಾರ ಚಲುವಾದಿ ಒತ್ತಾಯಿಸಿದ್ದಾರೆ.

About Mallikarjun

Check Also

7fb12b34 362f 47b5 8ab2 4bfd3372a83e

ಕುಕನೂರ್ ತಾಲೂಕಿನಲ್ಲಿ ಅಪಾರ ಮಳೆ ಜನಜೀವನ ಅಸ್ತವ್ಯಸ್ತ

Heavy rain in Kukanur taluk has disrupted people’s lives ಕೊಪ್ಪಳ: ಜೀಲ್ಲೆ ಕುಕನೂರ್ ತಾಲೂಕಿನ ಕುಕನೂರಿನಲ್ಲಿ ಮೂರು …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.