Breaking News

ಕೊಪ್ಪಳದ ಜಿಲ್ಲಾಸ್ಪತ್ರೆಯಲ್ಲಿ ಚೀಟಿಗಾಗಿ ಗಂಟೆಗಟ್ಟಲೆ ನಿಲ್ಲುವ ರೋಗಿಗಳ ಪರಿಸ್ಥಿತಿ.

The situation of patients who wait for hours for tickets in the district hospital of Koppal.

ಜಾಹೀರಾತು
Screenshot 2025 02 11 16 31 32 67 E307a3f9df9f380ebaf106e1dc980bb6

ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಗಂಟೆಗಟ್ಟಲೆ ರೋಗಿಗಳು ಚೀಟಿಗಾಗಿ ನಿಲ್ಲುವ ಪರಿಸ್ಥಿತಿ ಬಗೆಹರಿದಿಲ್ಲ.
ಕೊಪ್ಪಳ ಜಿಲ್ಲಾಸ್ಪತ್ರೆಗೆ ದಿನ ನಿತ್ಯ ರೋಗಿಗಳನ್ನು ಕರೆದುಕೊಂಡು ಜಿಲ್ಲೆಯ ಜನ ತಮ್ಮ ಸಂಬAದಿಕರನ್ನುನ್ನು ಕರೆದುಕೊಂಡು ಬರುತ್ತಾರೆ.
ಆದರೆ ಒಂದು ಚೀಟಿ ಮಾಡುಸುವಸ್ಟೊತ್ತಿಗೆ ಹೈರಾಣಗುತ್ತಾರೆ. ಒಂದು ಕಡೆ ರೋಗಿ ಗೋಳು ಇನ್ನೊಂದು ಕಡೆ ಚೀಟಿಗಾಗಿ ಗಂಟೆಗಟ್ಟಲೆ ನಿಲ್ಲುವುದು.
ವಯೋವೃದ್ದರು, ಆಸ್ವಸ್ತ ರೋಗಿಗಳ ಗೋಳು ಕೇಳುವವರೇ ಇಲ್ಲಾ.
ಚೀಟಿ ಮಾಡಿಸುವುದು ಜಾತ್ರೆ ಸಾಲಾಗಿದೆ.ಚೀಟಿ ಮಾಡಿಸಲು ಸಮಯವಾದರೆ ವೈದ್ಯರು ಸಿಗುವುದು ಯಾವಾಗ. ಹೆಚ್ಚುವರಿ ಚೀಟಿ ಕೌಂಟರ್ ಮಾಡಿ ರೋಗಿಗಳಿಗೆ ಅನುಕೂಲ ಮಾಡಬೇಕು.
ಇಷ್ಟೆಲ್ಲ ಸಮಸ್ಯೆ ಕಣ್ಮುಂದೆ ಇದ್ದರೂ ಅರೋಗ್ಯ ಇಲಾಖೆ ಕಣ್ಮುಚ್ಚಿ ಕುಳಿತ್ತಿರುವುದು ಬಡ ಜನರ ಬಗ್ಗೆ ಇರುವ ಅಧಿಕಾರಿಗಳ ನಿರ್ಲಕ್ಷ್ಯ ವೆ ಕಾರಣ.
ಚೀಟಿ ಮಾಡಿದಮೇಲೆ ,ರಕ್ತ ಪರೀಕ್ಷೆ,ಯೂರಿನ್ ಪರೀಕ್ಷೆ ರಿಪೋರ್ಟ್ ಬರಲು ದಿನಗಟ್ಟಲೆ ಕಾಯಬೇಕು.ಎಂಸಿ ಎಚ್ ಆಸ್ಪತ್ರೆಯಿಂದ ಜಿಲ್ಲಾ ಆಸ್ಪತ್ರೆಗೆ, ಜಿಲ್ಲಾ ಆಸ್ಪತ್ರೆಯಿಂದ ಎಂ ಸಿ ಎಚ್ ಆಸ್ಪತ್ರೆಗೆ ಗರ್ಭಿಣಿಯರು ಯೂರಿನ್ ಇನ್ನಿತರ ಟೆಸ್ಟ್ ಮಾಡಿಸಲು ತಿರಾಗಬೇಕಾಗಿದೆ.ಸಿಟಿ ಸ್ಕ್ಯಾನಿಂಗ್ ಎಕ್ಷರೆ ಪರೀಕ್ಷೆ ಮಾಡಿಸಲು ವಾರಗಟ್ಟೆಲೆಗಟ್ಟೆಲೆ ಬಡ ರೋಗಿಗಳು ಕಾಯುವಂತ ಗೋಲಾಟ ಯಾವ ಜನಪತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಗಮನ ಹರಿಸದೆ ಇರುವುದು ಸಾಮಾನ್ಯ ಜನರ ಬಗ್ಗೆ ಇರುವ ನಿಷ್ಕಾಳಜಿ ಅಲ್ಲದೆ ಇನ್ನೇನು?
ಜನ ತಮನ್ನೆ ಬೈದು ಕೊಂಡು ಜನಪ್ರಧೀನಿದಿಗಳಿಗೆ, ಅಧಿಕಾರಿಗಳಿಗೆ ಚೀಮಾರಿ ಹಾಕುತ್ತಿದ್ದಾರೆ.
ಇಷ್ಟೆಲ್ಲ ಸಮಸ್ಯೆ ಬಗೆಹರಿಸದೆ ಜಾಣ ಮೌನವಾಗಿರುವುದು ಯಾರ ಹಿತಾಸಕ್ತಿಗಾಗಿ?
ಈಗಾಗಲೇ ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದ ನೇತೃತ್ವದಲ್ಲಿ ದಿನಾಂಕ ೦೩/೦೨/೨೦೨೫ ರಂದು ಪ್ರತಿಭಟನೆ ಮಾಡಿ ೫ ಸಾವಿರಕ್ಕೂ ಹೆಚ್ಚು ಜನರ ಸಹಿ ಸಂಗ್ರಹ ಮಾಡಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸದರು ಯಾವುದೇ ಪರಿಹಾರ ಕ್ರಮ ಕೈಗೊಂಡಿಲ್ಲ.
ಕೂಡಲೇ ಸಮಸ್ಯೆ ಬಗೆಹರಿಸಿದಿದ್ದರೆ ಮುಂದಿನ ಹಂತದ ಹೋರಾಟಕ್ಕೆ ಜನರನ್ನು ಸಂಘತಿಸಲಾಗುವುದು ಎಂದು ಪಕ್ಷದ ಜಿಲ್ಲಾ ಮುಖಂಡ ಶರಣು ಗಡ್ಡಿ ಕರೆ ನೀಡಿದ್ದಾರೆ.

About Mallikarjun

Check Also

screenshot 2025 10 23 18 09 37 81 6012fa4d4ddec268fc5c7112cbb265e7.jpg

ಹನೂರು ಪಟ್ಟಣದಲ್ಲಿ ಪ್ರಚಾರದ ಪ್ಲೆಕ್ಸ್ ಗಳಿಗಿಲ್ಲ ತಡೆ ಸರ್ಕಾರದ ಅಪಾರ ಪ್ರಮಾಣದ ಹಣ ಬೊಕ್ಕಸಕ್ಕೆ ನಷ್ಟ

The lack of a ban on campaign plexes in Hanur town is a huge loss …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.