ರೈತರು ಯಾರು ಬಡವರಲ್ಲಾ : ಕಳಕಪ್ಪ ಕಂಬಳಿ,,

Farmers are not poor: Kalakappa Kambali

ವರದಿ : ಪಂಚಯ್ಯ ಹಿರೇಮಠ.
ಕಲ್ಯಾಣಸಿರಿ ವಾರ್ತೆ ಕೊಪ್ಪಳ.
ಕುಕನೂರು : ಅನ್ನ ನೀಡುವ ರೈತರು ಯಾರು ಬಡವರಲ್ಲಾ, ಮುಂದೊಂದು ದಿನ ರೈತನ ಬೆಲೆ ಜಗತ್ತಿಗೆ ತಿಳಿಯುತ್ತದೆ. ರೈತರು ಕೇವಲ ವ್ಯವಸಾಯ ಒಂದನ್ನೇ ಅವಲಂಬಿಸದೇ ಎಲ್ಲಾ ರಂಗಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು ಮುಂದೆ ಬರಬೇಕು ಎಂದು ಮಾಜಿ ತಾಲೂಕ ಪಂಚಾಯತ್ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಕರೆ ನೀಡಿದರು.

ಮಂಗಳವಾರದಂದು ಪಟ್ಟಣದ ಅನ್ನದಾನೀಶ್ವರ ಶಾಖಾಮಠದಲ್ಲಿ ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನಾ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ರೈತ ಸಂಘಟನೆಗಳು ಜನ ಪ್ರತಿನಿಧಿಗಳ ಮರಳು ಮಾತಿಗೆ ಬಲಿಯಾಗದೇ ಮುಗ್ದ ರೈತರ ಕಣ್ಣಿರು ಒರೆಸುವ ಸಂಘಟನೆಗಳಾಗಬೇಕು, ಕೆಲವೊಂದೆಡೆ ರೈತರು ಪ್ರತಿಭಟನೆಗೆ ನಿಂತರೇ ಸರಕಾರ ನಡುಗುವಂತಹ ಪ್ರತಿಭಟನೆಗಳು ಈ ಹಿಂದೆ ನಡೆದಿವೆ ಎಂದರು.

ಇಂದಿನ ದಿನಗಳಲ್ಲಿ ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಇಲ್ಲದಿರುವುದು ಹಾಗೂ ಸರಕಾರ ಸರಿಯಾದ ಸಮಯಕ್ಕೆ ಬೆಂಬಲ ಬೆಲೆ ನೀಡದಿರುವುದು ರೈತರ ಪಾಲಿನ ದುರಂತವಾಗಿದೆ. ಇದರ ಲಾಭವನ್ನು ದಲ್ಲಾಳಿಗಳು ಪಡೆಯುಂತಾಗಿದೆ ಎಂದರು.

ಸರಕಾರದ ಯಾವ ಯೋಜನೆಗಳು ರೈತರಿಗೆ ಸಮರ್ಪಕವಾಗಿ ತಲುಪುತ್ತಿಲ್ಲಾ, ಈ ಹಿಂದೆ ರೈತ ಮುಖಂಡ ನಂಜುಂಡ ಸ್ವಾಮಿಯವರ ರೈತ ಪರ ಹೋರಾಟದ ಮೂಲಕ ರೈತರಿಗೆ ಅನೇಕ ಯೋಜನೆಗಳನ್ನು ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ ಆದ್ದರಿಂದ
ರೈತರು ಬಲಿಷ್ಠ ಹೋರಾಟಗಳ ಮೂಲಕ ಸಂಘಟನೆಗಳನ್ನು ಬಲಪಡಿಸಿ ರೈತರ ಶ್ರೇಯೋಭಿವೃದ್ದಿಗೆ ಶ್ರಮಿಸಬೇಕು
ಎಂದು ತಿಳಿಸಿದರು.

ಈ ವೇಳೆ ಕುಷ್ಟಗಿಯ ರೈತ ಮುಖಂಡ ಸಿ.ಕೆ ಪಾಟೀಲ್ ಮಾತನಾಡಿ ರೈತರು ಕೇವಲ ರೈತರಾಗಿರದೇ ಉದ್ಯಮಿಗಳಾಗಿ ವ್ಯವಸಾಯದ ಜೊತೆಗೆ ಹೈನುಗಾರಿಕೆ, ಕುರಿ ಸಾಕಾಣಿಕೆ, ದಾಳಿಂಬೆ ಬೆಳೆ ಹೀಗೆ ವಿವಿಧ ಬೆಳೆಗಳನ್ನು ಬೆಳೆದು ಮುಂದೆ ಬರಬೇಕು ಎಂದರು.

ನಂತರ ರೈತ ಮುಖಂಡರಾದ ಪಚ್ಚೆ ನಂಜುಂಡ ಸ್ವಾಮಿ ಮಾತನಾಡಿ ನಮಗೆ ಅನ್ನ ನೀಡುವ ರೈತ ಇಂದು ಹಲವಾರು ರೀತಿಯ ಸಂಕಷ್ಟದಲ್ಲಿದ್ದರು ಯಾವ ಸರಕಾರವು ರೈತರ ಕಣ್ಣಿರು ಒರೆಸುವ ಕೆಲಸ ಮಾಡುತ್ತಿಲ್ಲಾ, ಕೇವಲ ಚುನಾವಣೆ ಸಂದರ್ಭದಲ್ಲಿ ನೀಡಿದ ಆಶ್ವಾಸನೆಗಳು ಆಶ್ವಾಸನೆಗಳಾಗಿಯೇ ಉಳಿಯುತ್ತವೆ ಎಂದು ಬೇಸರ ವ್ಯಕ್ತ ಪಡಿಸಿ ಮಾತನಾಡಿದರು.

ದೇಶದಲ್ಲಿ ಸಾಲದ ಸೂಳಿಗೆ ಸಿಲುಕಿ ಸಾವಿರಾರು ರೈತರು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ಯಾವ ಜನ ಪ್ರತಿ ನಿಧಿಗಳಾಗಲಿ ಯಾವ ರಾಜಕಾರಣಿಗಳಾಗಲಿ ಸಾಲದ ಸೂಳಿಗೆ ಸಿಲುಕಿ ಆತ್ಮ ಹತ್ಯೆ ಮಾಡಿಕೊಂಡಿದ್ದು ಇದೆಯೇ,,? ರೈತರು ತಮ್ಮ ವ್ಯವಸಾಯಕ್ಕೆ ಮೈಕ್ರೋ ಪೈನಾನ್ಸ್ ಗಳಲ್ಲಿ ಸಾಲ ಸೂಲ ಮಾಡಿಕೊಂಡಿದ್ದು, ಹಣ ಮರು ಪಾವತಿಸಲಾಗದೇ ಕೇಲವೊಂದಿಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡರೇ ಇನ್ನಷ್ಟು ರೈತರು ಕುಟುಂಬ ಸಮೇತ ಊರು ಬಿಟ್ಟು ಓಡಿ ಹೋದ ಪ್ರಸಂಗಗಳು ಜರುಗಿವೆ ಇದಕ್ಕೆಲ್ಲಾ ಕಡಿವಾಣ ಹಾಕಲು ರೈತ ಸಂಘಟನೆಗಳು ಬಲಿಷ್ಠಗೊಂಡು ಸರಕಾರದ ಗಮನ ಸೆಳೆಯಬೇಕಿದೆ ಎಂದು ತಿಳಿಸಿದರು.

ತದ ನಂತರ ಮುಖಂಡರಾದ ಸುರೇಶ ಭೂಮರಡ್ಡಿ, ರಾಮಣ್ಣ ಭಜೇಂತ್ರಿ, ಭಾಗ್ಯರಾಜು ಹೆಚ್ ಮಾತನಾಡಿದರು.

ನಂತರದಲ್ಲಿ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ನೌಕರರಿಗೆ, ಮುಖಂಡರಿಗೆ ಸನ್ಮಾನಿಸಲಾಯಿತು.

ವೇದಿಕೆಯ ಸಾನಿಧ್ಯವನ್ನು ಅನ್ನದಾನೀಶ್ವರ ಮಠದ ಮಹಾದೇವ ಸ್ವಾಮಿಗಳು ವಹಿಸಿದ್ದರು. ಈ ಸಂದರ್ಭದಲ್ಲಿ ಮುಖಂಡರಾದ ಅರವಿಂದಗೌಡ ಪಾಟೀಲ್, ಅಂದಪ್ಪ ಜವಳಿ, ಶರಣಪ್ಪ ದೊಡ್ಮನಿ, ಬಶೀರ್ ಅಹ್ಮದ್ ಮುಲ್ಲಾ, ಜೀವನ್ ಸಾಬ ಬಿನ್ನಾಳ ಸೇರಿದಂತೆ ಸಂಘದ ಪದಾಧಿಕಾರಿಗಳು ಅನೇಕ ಗಣ್ಯರು ಮುಖಂಡರು ವೇದಿಕೆಯಲ್ಲಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ರಾಣಿ ಹಳ್ಳಿ ನೆರವೇರಿಸಿದರು.

ಅಂಬಿಗರ ಚೌಡಯ್ಯ ನಿಷ್ಠೂರವಾದಿ ಶರಣ

Ambigar Choudaiah is a hardline surrenderer


ಗಂಗಾವತಿ: ಪ್ರಾಪಂಚಿಕ ಡಂಬಾರಚಾರಗಳನ್ನು ಕಟುವಾಗಿ ಖಂಡಿಸುತ್ತಿದ್ದ ನಿಜ ಶರಣ ಅಂಬಿಗರ ಚೌಡಯ್ಯ ನಿಷ್ಠೂರವಾದಿ ಶರಣ ಎಂದು
ನಗರ ಘಟಕ ಅಧ್ಯಕ್ಷ ಹನುಮೇಶ್ ಕುರುಬರು ಹೇಳಿದರು.
ಅವರು ಶ್ರೀ ದುರ್ಗಾದೇವಿ ದೇವಸ್ಥಾನದ ಬಳಿಯ ಶ್ರೀ ಅಂಬಿಗರ ಚೌಡಯ್ಯ ವೃತ್ತದಲ್ಲಿನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದರು.
ಸಾಮಾನ್ಯ ಜನರಲ್ಲಿದ್ದ ಮೇಲು ಕೀಳು ಮುಂತಾದ ವಿಷಯಗಳನ್ನು ತಮ್ಮದೇ ಆದ ಶೈಲಿಯಲ್ಲಿ ಮುಖಕ್ಕೆ ಹೊಡೆದಂತೆ ಹೇಳುತ್ತಿದ್ದ ಶರಣ, ಜಗತ್ತಿನ ಅಂಕುಡೊAಕು ತಮ್ಮದೇ ಆದ ಕಟು ಶಬ್ದಗಳು, ಟೀಕಾ ವಚನಗಳ ಮೂಲಕ ತಿದ್ದುತ್ತಿದ್ದರು. ಬಸವಣ್ಣ ನ ಕಾಲದ ಶರಣರಲ್ಲೇ ಅತಿ ನಿಷ್ಟೂರ ಮತ್ತು ನೇರ ನೆಡೆನುಡಿಯ ಉಗ್ರ ಶರಣ ಎನ್ನಬಹುದು ಎಂದರು.
೧೨ ನೇ ಶತಮಾನದಲ್ಲಿದ್ದ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆಯುತ್ತಿಲ್ಲ, ಈಗಿನ ಸಮಾಜಕ್ಕೆ ದಾರಿ ತೋರಿಸಲು ಮತ್ತೆ ನಿಜ ಶರಣರಂಥ ಶರಣರ ಅಗತ್ಯವಿದೆ ಎಂದು ನುಡಿದರು. ಈ ಸಂದರ್ಭದಲ್ಲಿ ಯುವ ಘಟಕ ಅಧ್ಯಕ್ಷ ಸುನಿಲ್ ಕುಲಕರ್ಣಿ, ತಾಲೂಕು ಪ್ರಧಾನ ಕಾರ್ಯದರ್ಶಿ ಪವನ್ ಕುಮಾರ್ ಗಡ್ಡಿ, ಕುಷ್ಟಗಿ ನಗರ ಘಟಕ ಉಪಾಧ್ಯಕ್ಷ ಮುತ್ತುರಾಜ್. ಗೌರವಾಧ್ಯಕ್ಷ ಹುಲಿಯಪ್ಪ ಅರೇಗಾರ್, ಯುವ ಘಟಕ ಉಪಾಧ್ಯಕ್ಷರು ಮಾರುತಿ, ಉಪಾಧ್ಯಕ್ಷರು ಕೊಟ್ರೇಶ್ ಕುಂಬಾರ್, ಆಟೋ ಚಾಲಕರು ಅಧ್ಯಕ್ಷರು ಎಲ್ಲಪ್ಪ. ತಾಲೂಕ ಆಟೋ ಚಾಲಕರ ಉಪಾಧ್ಯಕ್ಷ ಹಾಗು ತಾಲೂಕ ಆಟೋ ಚಾಲಕರ ಕಾರ್ಯದರ್ಶಿ ಗಿಡ್ಡಪ್ಪ ಪರಸುರಾಮ್ ಇತರರಿದ್ದರು.

ರಾಷ್ಟ್ರಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರ್ಥ್ಮೆಟಿಕ್ ಸ್ಪರ್ಧೆಯ ಫಲಿತಾಂಶ

National Level Abacus and Mental Arithmetic Competition Result



ಗಂಗಾವತಿ: ಇತ್ತೀಚೆಗೆ ಕಲಬುರ್ಗಿಯಲ್ಲಿ ೬ನೇ ರಾಷ್ಟ್ರಮಟ್ಟದ ಅಬಾಕಸ್ & ಮೆಂಟಲ್ ಅರ್ಥಮೆಟಿಕ್ ಸ್ಪರ್ಧೆ ನಡೆಯಿತು. ಈ ಸ್ಪರ್ಧೆಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ಸುಮಾರು ೧೨೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅದರಲ್ಲಿ ಗಂಗಾವತಿ ನಗರದ ಜೀನಿಯಸ್ ಅಬಾಕಸ್ ಸೆಂಟರ್‌ನ ೪೫ ವಿದ್ಯಾರ್ಥಿಗಳು ಭಾಗವಹಿಸಿದ್ದು, ೧೦ ವಿದ್ಯಾರ್ಥಿಗಳು ಸೂಪರ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಕುಶಿತ್ ಆರಾಧ್ಯ ಯು., ಪ್ರಥಮ್, ಆಯುಷ್ ಎನ್., ಫಾತಿಮ ತು ಜೋರಾ, ಅಮತು ರೆಹಮಾನ್, ಸೋನುಶ್ರೀ ಎ.ಟಿ., ನಿರೀಕ್ಷಾ, ರೋಜಾ ಯು., ರಿತಿಕಾ ಐಲಿ ಮತ್ತು ಶಿವಾಂಶ್ ಕೌಟಿ ಇವರುಗಳು ಪಡೆದುಕೊಂಡಿರುತ್ತಾರೆ.
ಗಡಿನ್ ಹೆಚ್.ಡಿ., ಮೊಹಮ್ಮದ್ ಅಯಾನ್, ಕೃತಿಕಾ ಎಸ್.ಹೆಚ್., ಪ್ರಿಯಾಶ್ರೀ, ಸಾತ್ವಿಕಾ ಆರ್., ಸನಾತನಿ ಹಿರೇಮಠ, ಯಶೋಧರೆ ಧಾನಿ ಈ ಏಳು ವಿದ್ಯಾರ್ಥಿಗಳು ಚಾಂಪಿಯನ್ ಪ್ರಶಸ್ತಿಯನ್ನು ಪಡೆದಿರುತ್ತಾರೆ.
ಉಳಿದ ವಿದ್ಯಾರ್ಥಿಗಳು ರನ್ನರ್ ಅಪ್ ಪ್ರಶಸ್ತಿ ಪಡೆದಿದ್ದು ಹಾಗೂ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ನೋಬಲ್ ವರ್ಲ್ಡ್ ರೆಕಾರ್ಡ್ ಪ್ರಮಾಣ ಪತ್ರ ನೀಡಲಾಗಿದೆ.
ಈ ಎಲ್ಲಾ ವಿದ್ಯಾರ್ಥಿಗಳಿಗೂ ಹಾಗೂ ಸಹಕರಿಸಿದ ಪಾಲಕರಿಗೂ ಜೀನಿಯಸ್ ಅಬಾಕಸ್ ಸೆಂಟರ್‌ನ ಮುಖ್ಯಸ್ಥರಾದ ಶ್ರೀಮತಿ ಶೈಲಜಾ ಮತ್ತು ಆಡಳಿತಾಧಿಕಾರಿಯಾದ ಬಿ.ಎಸ್ ಪ್ರಕಾಶರವರು ಅಭಿನಂದನೆಗಳನ್ನು ತಿಳಿಸಿದ್ದಾರೆ.

ಜ.27ರಂದು ನಿಧಿ ಆಪ್ಕೆ ನಿಕತ್ ಕಾರ್ಯಕ್ರಮ

Nidhi Apke Nikat program on 27th Jan



ರಾಯಚೂರು ಜ.21,(ಕರ್ನಾಟಕ ವಾರ್ತೆ): ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ ವತಿಯಿಂದ ನಿಧಿ ಆಪ್ಕೆ ನಿಕತ್2.0 ಕಾರ್ಯಕ್ರಮವು ಜ.27ರಂದು ನಗರದ ಮುನ್ನಾರ್ ಕಾಪು ಶಿಕ್ಷಣ ಸಂಸ್ಥೆ ಶಾಲೆಯಲ್ಲಿ ನಡೆಸಲು ನಿರ್ಧರಿಸಲಾಗಿದ್ದು, ಪಿಂಚಣಿದಾರರು, ಇಪಿಎಫ್ ಚಂದಾದಾರರು ಮತ್ತು ಉದ್ಯೋಗದಾತರು ಈ ಅವಕಾಶವನ್ನು ಪಡೆಯಬಹುದಾಗಿದೆ.
ನಿಧಿ ಆಪ್ಕೆ ನಿಕತ್ ಎಂಬುದು ಇಪಿಎಫ್ ಮತ್ತು ಎಂಪಿ ಕಾಯ್ದೆ, 1952ರ ನಿಬಂಧನೆಗಳನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಮಧ್ಯಸ್ಥಗಾರರು, ಸದಸ್ಯರು ಮತ್ತು ಉದ್ಯೋಗದಾತರು ಮತ್ತು ಇಪಿಎಫ್‌ಒ ನಡುವೆ ನಿಕಟ ಸಂವಹನಕ್ಕಾಗಿ ಜಿಲ್ಲಾ ಜಾಗೃತಿ ಶಿಬಿರ ಮತ್ತು ಗ್ರಾಹಕ ಔಟೀಚ್ ಕಾರ್ಯಕ್ರಮವಾಗಿದೆ. ಇದು ಕುಂದುಕೊರತೆಗಳು / ಪ್ರಶ್ನೆಗಳ ಸ್ಥಳದಲ್ಲೇ ಪರಿಹಾರಗಳನ್ನು ಸಹ ಸುಗಮಗೊಳಿಸುತ್ತದೆ. ಇದು ಭವಿಷ್ಯನಿಧಿ, ಪಿಂಚಣಿ ಇತ್ಯಾದಿಗಳಿಗೆ ಸಂಬಂಧಿಸಿದ ಕುಂದುಕೊರತೆಗಳು, ಪ್ರಶ್ನೆಗಳನ್ನು ಪರಿಹರಿಸುವ ನಿರಂತರ ಪ್ರಯತ್ನಗಳ ಒಂದು ಹೆಜ್ಜೆಯಾಗಿದೆ ಮತ್ತು ಪ್ರತಿ ತಿಂಗಳು ನಡೆಯುತ್ತದೆ.
ಈಗ, ಜಂಟಿ ನಿಧಿ ಆಪೈ ನಿಕತ್ 2.0 ಕಾರ್ಯಕ್ರಮವನ್ನು ಪ್ರತಿ ತಿಂಗಳು ಇಪಿಎಫ್‌ಒ ಮತ್ತು ಇಎಸ್‌ಐಸಿ ನಡೆಸಲು ನಿರ್ಧರಿಸಲಾಗಿದೆ. ಎರಡೂ ಸಂಸ್ಥೆಗಳು ಪ್ರತಿ ತಿಂಗಳು ಪರ್ಯಾಯವಾಗಿ ಜಂಟಿಯೇತರ ಶಿಬಿರಗಳನ್ನು ಆಯೋಜಿಸಲಾಗಿದೆ ಎಂದು ಪ್ರಾದೇಶಿಕ ಪಿಎಫ್-2ನೇ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೇತ್ರ ಸಹಾಯಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

Application Invitation for Ophthalmic Assistant Posts


ರಾಯಚೂರು ಜ.21,(ಕರ್ನಾಟಕ ವಾರ್ತೆ): ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ರಾಷ್ಟೀಯ ಆರೋಗ್ಯ ಅಭಿಯಾನದಡಿ ರಾಷ್ಟೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ ಹಾಗೂ ಆಯುಷ್ ವಿಭಾಗದಡಿಯಲ್ಲಿ 2024-25ನೇ ಸಾಲಿಗೆ ಮಂಜೂರಾಗಿ ಖಾಲಿ ಇರುವ ಹುದ್ದೆಗಳನ್ನು ರಾಷ್ಟೀಯ ಆರೋಗ್ಯ ಅಭಿಯಾನದ ನಿಯಮಾನುಸಾರ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ ; ನೇತ್ರ ಸಹಾಯಕರು – 5 ಹುದ್ದೆಗಳು. ಈ ಗುತ್ತಿಗೆ ಆಧಾರದ ನೇಮಕಾತಿಯನ್ನು ರಾಷ್ಟೀಯ ಆರೋಗ್ಯ ಅಭಿಯಾನದ ನಿಯಮಾನುಸಾರ ಮೇರಿಟ್ ಕಮ್ ರೋಷ್ಟರ್ ಆಧಾರದ ಮೇಲೆ ಮಾಡಿಕೊಳ್ಳಲಾಗುವುದು. ಅರ್ಹ ವಿದ್ಯಾರ್ಹತೆಯುಳ್ಳ ಅಭ್ಯರ್ಥಿಗಳು ದಿನಾಂಕ: 22-01-2025 ರಿಂದ 05.02.2025ರವರೆಗೆ ವೆಬ್‌ಸೈಟ್: https://raichur.nic.in ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಕೊನೆಯ ದಿನಾಂಕದ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಆನ್‌ಲೈನ್ ಹೊರತುಪಡಿಸಿ ಇತರೆ ಯಾವುದೇ ಮೂಲಗಳಿಂದ ಸಲ್ಲಿಸುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಈ ಗುತ್ತಿಗೆ ಆಧಾರದ ನೇಮಕಾತಿಯು ಎನ್.ಹೆಚ್.ಎಂ. ನಿಯಮಾವಳಿಯ ಷರತ್ತು ಮತ್ತು ನಿಬಂಧನೆಗಳಿಗೆ ಒಳಪಟ್ಟಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಯೋಜನಾ ನಿರ್ವಹಣಾ ಘಟಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಲಯ ರಾಯಚೂರು ಕಚೇರಿ ಅವಧಿಯಲ್ಲಿ ಮಾಹಿತಿಯನ್ನು ಪಡೆಯಬಹುದಾಗಿದೆ ಅಥವಾ ದೂರವಾಣಿ ಸಂಖ್ಯೆ:9449843121ಗೆ ಅಥವಾ ಕಚೇರಿಯ ಸೂಚನಾ ಫಲಕವನ್ನು ನೋಡಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತರಬೇತಿ ಶಿಬಿರಗಳಿಗೆ ಅರ್ಜಿ ಆಹ್ವಾನ

Application Invitation for Training Camps


ರಾಯಚೂರು ಜ.21,(ಕರ್ನಾಟಕ ವಾರ್ತೆ): ಇಲ್ಲಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 2024-25ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಉಪ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಯುವಜನರಿಗೆ ತರಬೇತಿ ಶಿಬಿರಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
15 ದಿನಗಳ ಜಿಮ್/ ಪಿಟ್ನೆಸ್ ತರಬೇತಿ ಶಿಬಿರವು 27.01.2025 ರಿಂದ 10.02.2025ರವರೆಗೆ ನಡೆಯಲಿದ್ದು, ದ್ವಿತೀಯ ಪಿ.ಯು.ಸಿ ಪಾಸ್ ಅಥವಾ ಫೇಲ್ ಆದ ಕನಿಷ್ಟ 16 ವರ್ಷ ಗರಿಷ್ಟ 40 ವರ್ಷದ ಅಭ್ಯರ್ಥಿಗಳಿಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಆಸಕ್ತರು ಭಾಗವಹಿಸಬಹುದಗಿದೆ.
08 ದಿನಗಳ ನಿರೂಪಣಾ ಮತ್ತು ವಾರ್ತಾ ವಾಚಕ ತರಬೇತಿ ಶಿಬಿರವನ್ನು 11.02.2025 ರಿಂದ 18.02.2025ರವರೆಗೆ ದ್ವಿತೀಯ ಪಿ.ಯು.ಸಿಯ ಕನಿಷ್ಟ 18 ವರ್ಷ ಗರಿಷ್ಟ 40 ವರ್ಷದ ಅಭ್ಯರ್ಥಿಗಳಿಗೆ ಬೆಂಗಳೂರಿನ ಯುವನೀಕ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದು, ಆಸಕ್ತರು ಭಾಗವಹಿಸಬಹುದಗಿದೆ.
ತರಬೇತಿ ಶಿಬಿರಗಳಿಗೆ ಹಾಜರಾಗಲು ಆಸಕ್ತಿಯುಳ್ಳ ಶಿಬಿರಾರ್ಥಿಗಳು ಸಹಾಯಕ ನಿರ್ದೇಶಕರ ಕಾರ್ಯಾಲಯ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣ, ರಾಯಚೂರು ಜಿಲ್ಲಾ ಕಚೇರಿಯಲ್ಲಿ ಅರ್ಜಿ ಪಡೆದು 23-01-2025 ರೊಳಗಾಗಿ ಕಚೇರಿ ಅವಧಿಯಲ್ಲಿ ಈ ಕಚೇರಿಗೆ ಸಲ್ಲಿಸಬಹುದಾಗಿದೆ.
ಈ ಶಿಬಿರದಲ್ಲಿ ಹಾಜರಾಗುವ ಯುವಜನರಿಗೆ ಊಟೋಪಹಾರ, ಪ್ರಮಾಣ ಪತ್ರ ಹಾಗೂ ಸಾಮಾನ್ಯ ವಸತಿ ವ್ಯವಸ್ಥೆ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಾರ್ಯಾಲಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣ, ರಾಯಚೂರು ಇಲಿಗ್ಲೆ ಕಚೇರಿ ಅವಧಿಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂಬಿಗರ ಚೌಡಯ್ಯನವರ ವಚನಗಳು ದಾರಿದೀಪ; ಜಿಲ್ಲಾಧಿಕಾರಿ ನಿತೀಶ್ ಕೆ.

Ambigar Choudaiya’s words are a beacon; District Collector Nitish K.



ರಾಯಚೂರು ಜ.21,(ಕರ್ನಾಟಕ ವಾರ್ತೆ): ನಿಜಶರಣ ಅಂಬಿಗರ ಚೌಡಯ್ಯನವರ ವಚನಗಳು ನಮಗೆ ದಾರಿದೀಪವಾಗಿದ್ದು, ಅವರ
ಆದರ್ಶಗಳನ್ನು ಪಾಲಿಸಿ ಸನ್ಮಾರ್ಗದಲ್ಲಿ ನಡೆಯೋಣ ಎಂದು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಹೇಳಿದರು.
ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಜನವರಿ 21ರ ಮಂಗಳವಾರ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅಂಬಿಗರ ಚೌಡಯ್ಯನವರು ವಚನಗಳ ಮೂಲಕ ನೇರ ನಿಷ್ಠುರವಾಗಿ ಮಾತನಾಡಿ ಸಮಾಜದಲ್ಲಿನ ಜಾತಿ ವ್ಯವಸ್ಥೆ, ಶೋಷಣೆ, ಮೂಢನಂಬಿಕೆ, ಹೋಗಲಾಡಿಸಲು ಶ್ರಮಿಸಿದರು.
ಅವರು ರಚಿಸಿದ ವಚನಗಳು ಉತ್ತಮ ಬದುಕಿಗೆ ಹಿತನುಡಿಗಳಂತಾಗಿವೆ ಎಂದರು.
ನಮ್ಮ ಸಮಾಜದ ಜನರಲ್ಲಿ ಮೂಢನಂಬಿಕೆಗಳು ಬೇರೂರಿದ್ದು, ಇದನ್ನು ತೊಲಗಿಸಲು ಜ್ಞಾನ ಮತ್ತು ಶಿಕ್ಷಣವೇ ನಮಗೆ
ರಾಮಬಾಣ ಎಂದರು.
ಈ ದಿಶೆಯಲ್ಲಿ ಪ್ರತಿಯೊಬ್ಬರು ಶಿಕ್ಷಣವಂತರಾಗದಾಗ ಮಾತ್ರ ಮೌಡ್ಯತೆ, ನಿರ್ಮೂಲನೆ ಸಾಧ್ಯ ಎಂದು ತಿಳಿಸಿದರು.
ಮಕ್ಕಳಿಗೆ ಆರಂಭದಿಂದಲೇ ಉತ್ತಮವಾದ ವಿದ್ಯಾಭ್ಯಾಸ ಕೊಡಿಸಬೇಕು. ಸಮಾಜದಲ್ಲಿನ ಜ್ವಲಂತ ಸಮಸ್ಯೆಗಳ ಬಗ್ಗೆ ಯುವ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಸಮಾಜದಲ್ಲಿ ಸರ್ವ ಸಮುದಾಯದ ಜನರ
ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಪ್ರಗತಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಎಂದರು.
ನಗರದಲ್ಲಿ ಕೆರೆಗಳು ಉತ್ತಮವಾಗಿ ನಿರ್ಮಾಣವಾಗಿ
ಮೀನುಗಾರಿಕೆಗೆ ಅನಕೂಲವಾಗಬೇಕಿದೆ. ಈ ದಿಶೆಯಲ್ಲಿ ಕೆರೆಗಳ ಅಭಿವೃದ್ಧಿ ಕಾರ್ಯ ಆರಂಭವಾಗಿದೆ ಎಂದರು. ಕೃಷ್ಣ ಮತ್ತು ತುಂಗಭದ್ರಾ ನದಿಯಲ್ಲಿ ಸಹ ಮೀನುಗಾರಿಕೆ ಮಾಡಲು ಉತ್ತೇಜನ ನೀಡಲಾಗುವುದು ಎಂದರು.
ನರಸೀಪುರದ ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠದ ಉಪಾಧ್ಯಕ್ಷರಾದ ಕೆ.ಶಾಂತಪ್ಪ ಅವರು ಉಪನ್ಯಾಸ ನೀಡಿ, ಶರಣರ ತತ್ವಸಿದ್ದಾಂತಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು. ಅಂಬಿಗರ ಚೌಡಯ್ಯನವರು ಕೇವಲ ಒಂದು ಸಮಾಜಕ್ಕೆ ಮಾತ್ರ ಸೀಮಿತವಲ್ಲ, ಇಡೀ ಮನುಕುಲಕ್ಕೆ ದಾರಿ ದೀಪವಾಗಿದ್ದವರು. ತಮ್ಮ ವಚನಗಳ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ ಎಂದರು.
ಕಾಯಕದಲ್ಲಿ ಮೇಲು ಕೀಳೆಂಬುದಿಲ್ಲ:
ದೋಣಿ ನಡೆಸುವ ಹಾಗೂ ಮೀನು ಹಿಡಿಯುವ ಅಂಬಿಗರ ಕಾಯಕದಲ್ಲಿ ಮೇಲುಕೀಳು ಎಂಬುದಿಲ್ಲ. ಮನುಷ್ಯ ಮನುಷ್ಯರ ನಡುವೆ ತಾರತಮ್ಯ ಇರಬಾರದು. ಕಾಯಕ ಆಧರಿಸಿ ಮೇಲು ಕೀಳು ಎಂದು ತಾರತಮ್ಯ ಮಾಡಿದ್ದರ ವಿರುದ್ಧ ಬಸವಾದಿ ಶರಣರು ಹೋರಾಟ ಮಾಡಿದರು. ಈ ಸಾಲಿನಲ್ಲಿ ಅಂಬಿಗರ ಚೌಡಯ್ಯ ಮೊದಲನೇ ಸಾಲಿನಲ್ಲಿ ನಿಲ್ಲುತ್ತಾರೆ. ಅದಕ್ಕೆ ಬಸವಣ್ಣನವರು ಇವರಿಗೆ ನಿಜಶರಣ ಎಂದು ಕರೆದರು ಎಂದು ವಿವರಿಸಿದರು.
ನೇರ, ನಿಷ್ಠುರವಾದಿ:
ಹನ್ನೆರಡನೇ ಶತಮಾನದ ಶರಣರಲ್ಲಿ ಪ್ರಮುಖರಾಗಿರುವ ಅಂಬಿಗರ ಚೌಡಯ್ಯನವರು ನೇರ, ನಿಷ್ಠುರಿಯಾಗಿದ್ದರು. ಅವರ ವ್ಯಕ್ತಿತ್ವ ಎಂತಹದ್ದು ಎನ್ನುವುದಕ್ಕೆ ಅವರ ವಚನಗಳೇ ಸಾಕ್ಷಿ. ನಾಡಿನ ಚರಿತ್ರೆಯಲ್ಲಿ ಹನ್ನೆರಡನೇ ಶತಮಾನಕ್ಕೆ ವಿಶೇಷ ಮಹತ್ವ ಇದೆ. ಆ ಕಾಲಘಟ್ಟದಲ್ಲಿ ಬಸವಣ್ಣನವರ ಸಾಮಾಜಿಕ ಕ್ರಾಂತಿಯಲ್ಲಿ ಚೌಡಯ್ಯನವರು ಭಾಗಿಯಾಗಿದ್ದರು. ನೇರ, ನಿಷ್ಠುರ ಮಾತುಗಳು, ಖಂಡಿಸುವ ಗುಣದಿಂದಲೇ ನಿಜಶರಣ ಎಂಬ ಬಿರುದು ಹೊಂದಿದ್ದರು. ವಚನಗಳ ಮೂಲಕ ತಮ್ಮ ಕಾಯಕವನ್ನು ಎತ್ತಿ ಹಿಡಿದಿದ್ದರು. ಜೊತೆಗೆ ಸ್ತ್ರೀ ಸಮಾನತೆಗೂ ಮಹತ್ವ ಕೊಟ್ಟಿದ್ದರು ಎಂದು ಉಪನ್ಯಾಸನದಲ್ಲಿ ವಿವರಿಸಿದರು.
ಇದೇ ಸಂದರ್ಭದಲ್ಲಿ ರಾಯಚೂರು ಮಹಾನಗರ ಪಾಲಿಕೆಯ ಅಧ್ಯಕ್ಷರಾದ ನರಸಮ್ಮ ನರಸಿಂಹಲು ಮಾಡಗಿರಿ, ರಾಯಚೂರು ಗ್ರೇಡ್-2 ತಹಶೀಲ್ದಾರ್ ಭೀಮರಾಯ, ನೇತಾಜಿ ನಗರ ಪೊಲೀಸ ಠಾಣೆಯ ಪಿಎಸ್‌ಐ ಲಕ್ಷ್ಮಿ, ಸಮಾಜದ ಮುಖಂಡರಾದ ಶರಣಪ್ಪ ಕಡಗೋಳ, ಶಿವರಾಂ, ಕಡಗೋಳ, ಆಂಜೀನೆಯ, ಶರಣಪ್ಪ, ರಾಜೇಶ್ವರಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಇದ್ದರು.

ಗಾಂಧಿ ಭಾರತ ಮರು ನಿರ್ಮಾಣ ಪ್ರಕಟಣೆಗಳ ಬಿಡುಗಡೆ

Release of Gandhi Bharat Rebuilding Publications

ಬೆಳಗಾವಿ (ಕರ್ನಾಟಕ ವಾರ್ತೆ) ಜ.21: 1924 ರಲ್ಲಿ ಬೆಳಗಾವಿಯಲ್ಲಿ ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಸಂದರ್ಭದಲ್ಲಿ ಕೈಗೊಂಡ ನಿರ್ಣಯಗಳು,ಅಧ್ಯಕ್ಷೀಯ ಭಾಷಣ ಮತ್ತಿತರ ಮಾಹಿತಿಗಳು ಹಾಗೂ ಅಪರೂಪದ ಛಾಯಾಚಿತ್ರಗಳನ್ನು ಒಳಗೊಂಡು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಿಸಿರುವ “ಗಾಂಧಿ ಭಾರತ ಮರು ನಿರ್ಮಾಣ” ಹಾಗೂ Reclaiming Gandhi Bharath ಕನ್ನಡ ಹಾಗೂ ಆಂಗ್ಲ ಪುಸ್ತಕಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ,ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಬಿಡುಗಡೆ ಮಾಡಿದರು.

ಸುವರ್ಣ ಸೌಧದ ಆವರಣದಲ್ಲಿ ಸ್ಥಾಪಿಸಿರುವ ಬೃಹತ್ ಗಾಂಧಿ ಪುತ್ಥಳಿ ಅನಾವರಣ ಸಮಾರಂಭದಲ್ಲಿ ಈ ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು.

1924 ರ ಕಾಂಗ್ರೆಸ್ ಅಧಿವೇಶನದ ನಿರ್ಣಯಗಳು,ಕೊಲ್ಕತ್ತಾ ಒಪ್ಪಂದ ಮತ್ತು ನೇಯ್ಗೆಯ ಮತಾಧಿಕಾರ,ಸರೋಜಿನಿ ನಾಯ್ಡು ಅವರ ವಿದೇಶಾಂಗ ಸೇವೆ,ಅಕಾಲಿಗಳಿಗೆ ಅಭಿನಂದನೆ,ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳು, ಬರ್ಮಾದ ಜನರಿಗೆ ಸಹಾನುಭೂತಿ, ಕೋಹತ್ ಹಾಗೂ ಗುಲಬರ್ಗಾ ಗಲಭೆಗಳು,ಅಸ್ಪೃಶ್ಯತೆ ನಿವಾರಣೆ,ಅಧಿವೇಶನದ ಲೆಕ್ಕಪರಿಶೋಧನೆ ಸೇರಿದಂತೆ ಐತಿಹಾಸಿಕ ಮಾಹಿತಿಗಳು ಹಾಗೂ ಛಾಯಾಚಿತ್ರಗಳನ್ನು ಈ ಪುಸ್ತಕಗಳು ಒಳಗೊಂಡಿವೆ

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ,ವಿಧಾನಸಭಾಧ್ಯಕ್ಷ ಯು.ಟಿ.ಖಾದರ್,ಉಪಮುಖ್ಯಮಂತ್ರಿ ಡಿ‌.ಕೆ.ಶಿವಕುಮಾರ್, ಸಂಸದರಾದ ಪ್ರಿಯಾಂಕಾ ಗಾಂಧಿ,ಕೆ.ಸಿ.ವೇಣುಗೋಪಾಲ,ರಣದೀಪ್‌ಸಿಂಗ್ ಸುರ್ಜೇವಾಲಾ,ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ,ಸಚಿವರಾದಎಚ್.ಕೆ.ಪಾಟೀಲ,ಡಾ.ಜಿ.ಪರಮೇಶ್ವರ, ಸತೀಶ ಜಾರಕಿಹೊಳಿ ಮತ್ತಿತರ ಗಣ್ಯರು ವೇದಿಕೆಯಲ್ಲಿದ್ದರು.

ಸುವರ್ಣ ವಿಧಾನಸೌಧ ಆವರಣದಲ್ಲಿ ಮಹಾತ್ಮಾ ಗಾಂಧೀಜಿ ಬೃಹತ್ ಪುತ್ಥಳಿಅನಾವರಣ”ಗಾಂಧೀ ಭಾರತ ನಿರ್ಮಾಣದ ಕನಸು”

Mahatma Gandhi statue unveiled at Suvarna Vidhana Soudha premises “Gandhi’s Dream of Building India”




ಬೆಳಗಾವಿ, ಜ.21(ಕರ್ನಾಟಕ ವಾರ್ತೆ): ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ 1924ರಲ್ಲಿ ಬೆಳಗಾವಿಯಲ್ಲಿ ಜರುಗಿದ ಕಾಂಗ್ರೆಸ್ ಅಧೀವೇಶನದ ಶತಮಾನೋತ್ಸವದ ಸವಿನೆನಪಿಗಾಗಿ‌ ಬೆಳಗಾವಿಯ ಸುವರ್ಣ ವಿಧಾನಸೌಧದ ಆವರಣದಲ್ಲಿ ರಾಜ್ಯಸಭೆ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಮಹಾತ್ಮಾ ಗಾಂಧೀಜಿಯವರ ಬೃಹತ್ ಪುತ್ಥಳಿಯನ್ನು ಚರಕವನ್ಮು ತಿರುಗಿಸುವ ಮೂಲಕ ಮಂಗಳವಾರ (ಜ.21) ಅನಾವರಣಗೊಳಿಸಿದರು.
ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದ ಮಲ್ಲಿಕಾರ್ಜುನ‌ ಖರ್ಗೆ ಅವರು, ಬೆಳಗಾವಿ ಸುವರ್ಣ ವಿಧಾನಸೌಧದ ಎದುರು ಗಾಂಧೀಜಿಯವರ ಪುತ್ಥಳಿಯ ಸ್ಥಾಪನೆಯಿಂದ ಈ ಭಾಗಕ್ಕೆ ಮಾತ್ರವಲ್ಲ; ಇಡೀ‌ ಕರ್ನಾಟಕಕ್ಕೆ‌ ಗೌರವ ತಂದಿದೆ ಎಂದು ಅಭಿಪ್ರಾಯಪಟ್ಟರು.
ಸಂವಿಧಾನ ಹಾಗೂ ಪ್ರಜಾತಂತ್ರ ಇಲ್ಲದಿದ್ದರೆ‌ ದೇಶದಲ್ಲಿ ಅರಾಜಕತೆ ಉಂಟಾಗುತ್ತಿತ್ತು. ಗಾಂಧೀಜಿವರು ದೇಶಕ್ಕೆ ನೀಡಿದ ಕೊಡುಗೆಯನ್ನು‌ ಈಗ ಎಲ್ಲರೂ ಸ್ಮರಿಸುತ್ತಿದ್ದಾರೆ.
ಗಾಂಧೀಜಿಯವರು ತಮ್ಮ ಅಧ್ಯಕ್ಷತೆಯಲ್ಲಿ 1924 ರಲ್ಲಿ‌ ಜರುಗಿದ‌ ಅಧಿವೇಶನದಲ್ಲಿ ಅಸ್ಪೃಶ್ಯತೆ‌ ನಿವಾರಣೆಗೆ ಕರೆ‌ ನೀಡಿದರು. ಆದ್ದರಿಂದ ಈ‌ ನೆಲ‌ವು ಐತಿಹಾಸಿಕ‌ ಮಹತ್ವವನ್ನು ಹೊಂದಿದೆ.
1924 ರಲ್ಲಿ ಕಾಂಗ್ರೆಸ್ ಅಧಿವೇಶನ‌ ನಡೆದ ಸ್ಥಳದಲ್ಲಿಯೇ ನೂರು ವರ್ಷದ ಬಳಿಕ ಪಕ್ಷದ ಕಾರ್ಯಕಾರಿಣಿ ಸಭೆ‌‌ ನಡೆಸಿರುವುದು ಅತ್ಯಂತ‌ ಮಹತ್ವದ್ದಾಗಿದೆ ಎಂದರು.
ಗುಲ್ಬರ್ಗದಲ್ಲೂ ಕೂಡ‌ ಮಹಾತ್ಮಾ‌ಗಾಂಧೀಜಿಯವರ ವಿಶೇಷ ಪುತ್ಥಳಿಯನ್ನು ಸ್ಥಾಪಿಸಲಾಗುತ್ತಿದೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಗಾಂಧೀಜಿಯವರು 1924 ರಲ್ಲಿ‌ ಕಾಂಗ್ರೆಸ್‌ ನ ಐತಿಹಾಸಿಕ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು. ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕದಲ್ಲಿ ಅದರಲ್ಲೂ ಬೆಳಗಾವಿಯಲ್ಲಿ ನಡೆದಿರುವುದು ನಮಗೆಲ್ಲ ಹೆಮ್ಮೆಯ‌ ಸಂಗತಿ ಎಂದರು.
ಮಹಾತ್ಮಾ ಗಾಂಧೀಜಿಯವರು ಅಂದು ಅಸ್ಪೃಶ್ಯತೆ ನಿವಾರಣೆ, ಸಮಾನತೆ, ಗ್ರಾಮೀಣಾಭಿವೃದ್ಧಿ, ಮಹಿಳಾ ಸಬಲೀಕರಣ ಕುರಿತು ಪ್ರತಿಪಾದನೆ ಮಾಡಿದ್ದರು.
ಗಾಂಧೀಜಿಯವರು ಸದಾ‌ ಶ್ರೀರಾಮನ ಸ್ಮರಣೆ‌‌ಮಾಡುತ್ತಿದ್ದರು. ಅವರು‌ ಅಪ್ಪಟ‌ ಹಿಂದೂ ಎಂಬುದಕ್ಕೆ‌ ಇದಕ್ಕಿಂತ ಬೇರೆ ಸಾಕ್ಷಿ ಬೇಕಿಲ್ಲ.
ಅವರು ಎಂದೂ ಹಿಂದೂ ವಿರೋಧಿಯಾಗಿರಲಿಲ್ಲ; ಆದರೆ ಹಿಂದೂ‌ ಧರ್ಮದಲ್ಲಿ ಸಮಾನತೆ‌ ಮತ್ತು‌ ಸಹೋದರತೆಯನ್ನು ಬಯಸಿದ್ದರು.
“ಹೇ ರಾಮ್‌” ಎನ್ನುತ್ತಲೇ ಕೊನೆಯುಸಿರೆಳೆದರು. ಅಂತಹ ಮಹಾನ್ ವ್ಯಕ್ತಿಯ ಬಗ್ಗೆ ತಪ್ಪು ಮಾಹಿತಿ ಹರಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಾಬಾಸಾಹೇಬ್ ಅಂಬೇಡ್ಕರ್ ಅವರು ಕೂಡ ಮಹಾತ್ಮಾ‌ ಗಾಂಧೀಜಿಯವರ ತತ್ವಗಳನ್ನು ಸಂವಿಧಾನದಲ್ಲಿ ಅಳವಡಿಸಿದ್ದಾರೆ.
ಸಂವಿಧಾನ‌ ದುರ್ಬಲಗೊಳಿಸುವ ಪ್ರಯತ್ನ ನಿರಂತರವಾಗಿ‌ ನಡೆದಿದೆ. ಅದಕ್ಕೆ‌ ನಾವು ಆಸ್ಪದ ನೀಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರೆ ನೀಡಿದರು.
ಇಂದಿನ ಯುವಜನತೆಗೆ ಹಾಗೂ ಮುಂದಿನ ಪೀಳಿಗೆಗೆ ಗಾಂಧೀಜಿಯವರ ವಿಚಾರಧಾರೆಯನ್ನು ತಲುಪಿಸುವ ಉದ್ಧೇಶದಿಂದ ಪುತ್ಥಳಿಯನ್ನು ಸ್ಥಾಪಿಸಲಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಿಧಾನ ಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರು, “ಇದೊಂದು‌ ಐತಿಹಾಸಿಕ‌ ಕಾರ್ಯಕ್ರಮ; ಇದು ಕೇವಲ ಪುತ್ಥಳಿ ಅನಾವರಣ ಕಾರ್ಯಕ್ರಮ ಮಾತ್ರವಲ್ಲ. ಸ್ವಾತಂತ್ರ್ಯ ಯೋಧರಿಗೆ ಗೌರವಿಸುವ ಮತ್ತು ಸಂವಿಧಾನದ ಘನತೆ ಎತ್ತಿ ಹಿಡಿಯುವ ಪವಿತ್ರ ಕಾರ್ಯಕ್ರಮವಾಗಿದೆ” ಎಂದು ಅಭಿಪ್ರಾಯಪಟ್ಟರು.
ಏಕೀಕರಣ ಕೂಡ‌ ಗಾಂಧಿಜಿಯವರ ಪ್ರೇರಣೆ ದೊರೆತಿದೆ. ಏಕತೆ, ಸಮಾನತೆ‌ಕಾಪಾಡಿಕೊಂಡು ಗಾಂಧೀಜಿಯವರ ತತ್ವಾದರ್ಶಗಳನ್ನು ಪುನರ್ ಮನನ ಮಾಡಲು ಇದು ಸ್ಫೂರ್ತಿದಾಯಕವಾಗಿದೆ.
ಗಾಂಧೀಜಿಯವರ ತತ್ವಗಳನ್ನು ಬದಿಗಿಟ್ಟು ಸದೃಢ ಭಾರತ ನಿರ್ಮಾಣ ಅಸಾಧ್ಯ. ಆದ್ದರಿಂದ ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಎಲ್ಲರೂ ಒಗ್ಗೂಡಿಕೊಂಡು ಮುನ್ನಡೆಯಬೇಕಿದೆ.
ರಾಮರಾಜ್ಯ‌ ಮತ್ತು ಗ್ರಾಮರಾಜ್ಯ ಮಹಾತ್ಮಾ ಗಾಂಧೀಜಿಯವರ ಕನಸಾಗಿತ್ತು. ಪರಸ್ಪರ ಸಹೋದರತೆ, ತ್ಯಾಗ, ಪತ್ನಿಯ ತ್ಯಾಗವು ರಾಮರಾಜ್ಯದ‌ ನೈಜ ಪರಿಕಲ್ಪನೆಯಾಗಿದೆ ಎಂದು ಸಭಾಧ್ಯಕ್ಷರಾದ ಯು.ಟಿ.ಖಾದರ್ ಹೇಳಿದರು.
ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿದ ಕಾನೂನು, ಸಂಸದೀಯ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಚಿವರಾದ ಎಚ್.ಕೆ.ಪಾಟೀಲ ಅವರು, ಮಹಾತ್ಮಾ ಗಾಂಧೀಜಿಯ ಪ್ರತಿಮೆ‌ ಅನಾವರಣ ಒಂದು ಅವಿಸ್ಮರಣೀಯ ಗಳಿಗೆಯಾಗಿದೆ. ವಿಗ್ರಹವಲ್ಲ ಚೈತನ್ಯದ ಹರವು ಎಂದು ಬಣ್ಣಿಸಿದ ಅವರು, ಪ್ರತಿಮೆಯು ಗಾಂಧೀಜಿ ಅನುಯಾಯಿಗಳಿಗೆ ಪ್ರೇರಣೆಯಾಗಲಿದೆ.
ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆ ವಹಿಸಿದ್ದ 1924 ರ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವವು ಗಾಂಧಿ ಭಾರತಕ್ಕೆ ದಾರಿದೀಪವಾಗಲಿದೆ ಎಂದರು.
ಕರ್ನಾಟಕ ವಿಧಾನಪರಿಷತ್ತಿನ ಸಭಾಪತಿಯವರಾದ ಬಸವರಾಜ ಹೊರಟ್ಟಿ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವರಾದ ಜಿ.ಪರಮೇಶ್ವರ್, ಲೋಕೋಪಯೋಗಿ ಇಲಾಖೆ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ, ಉಪ ಸಭಾಧ್ಯಕ್ಷರಾದ ರುದ್ರಪ್ಪ ಲಮಾಣಿ, ಕಾಂಗ್ರೆಸ್ ಪಕ್ಷದ ಮುಖಂಡರಾದ ಕೆ.ಸಿ. ವೇಣುಗೋಪಾಲ್, ರಂದೀಪ್ ಸಿಂಗ್ ಸುರ್ಜೇವಾಲಾ, ಜೈರಾಮ್ ರಮೇಶ್ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಗ್ರಾಮೀಣ ವಿವಿಗೆ “ಮಹಾತ್ಮಾ‌ ಗಾಂಧೀಜಿ” ನಾಮಕರಣ:
ಗದುಗಿನ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾನಿಯಲಯವನ್ನು “ಮಹಾತ್ಮಾ ಗಾಂಧೀಜಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ವಿಶ್ವವಿದ್ಯಾಲಯ” ಎಂದು ಮರುನಾಮಕರಣ‌ ಮಾಡುವುದರ ಜತೆಗೆ ನೂತನ ಲಾಂಛನವನ್ನು ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಯಿತು.
ಕುಲಪತಿ ಡಾ.ಸುರೇಶ್ ನಾಡಗೌಡರ ಉಪಸ್ಥಿತರಿದ್ದರು.
ವಿಶೇಷ ಅಂಚೆ ಚೀಟಿ-ಕೃತಿಗಳ ಬಿಡುಗಡೆ
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಸವಿನೆನಪಿಗಾಗಿ ಗಾಂಧೀ ಭಾರತ ವಿಶೇಷ ಅಂಚೆ ಲಕೋಟೆಯನ್ನು ಕೂಡ ಬಿಡುಗಡೆಗೊಳಿಸಲಾಯಿತು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಹೊರತರಲಾದ “ಗಾಂಧಿ‌ ಭಾರತ-ಮರುನಿರ್ಮಾಣ” ಹಾಗೂ ಉದಯ ಕಾಲ ಸಮೂಹದ ಗಾಂಧಿ ಬಿತ್ತಿದ ಬೆಳಕು ಪುಸ್ತಕಗಳನ್ನು ಗಣ್ಯರು ಬಿಡುಗಡೆಗೊಳಿಸಿದರು.
ಕರ್ನಾಟಕ ಏಕೀಕರಣ ಚಳವಳಿಗೆ ಪ್ರೇರಣೆಯಾಗಿದ್ದ ಹುಯಿಲಗೋಳ ನಾರಾಯಣರಾವ್ ಅವರು ರಚಿಸಿದ ” ಉದಯವಾಗಲಿ ನಮ್ಮ ಚೆಲುವು ಕನ್ನಡ‌ ನಾಡು” ಗೀತೆಯನ್ನು ಸಾದ್ವಿನಿ ಕೊಪ್ಪ ಅವರು ಪ್ರಸ್ತುತಪಡಿಸಿದರು.
ಬಾನಂಗಳಕ್ಕೆ ಚಿಮ್ಮಿದ ರಂಗು
ಚರಕವನ್ನು ತಿರುಗಿಸುವ ಮೂಲಕ ಮಹಾತ್ಮಾ‌ಗಾಂಧೀಜಿಯವರ ಪ್ರತಿಮೆ‌ ಅನಾವರಣಗೊಳಿಸಿದ ಕೂಡಲೇ‌ ಬಾನಂಗಳಕ್ಕೆ ಚಿಮ್ಮಿದ ಬಣ್ಣದ ಚಿತ್ತಾರ‌ ಮೂಡಿಸಿ, ಚಿತ್ತಾಕರ್ಷಕ ಕಾಮನಬಿಲ್ಲಿನ ವರ್ಣಗಳನ್ನು ಅರಳಿಸಿ, ಪಟಾಕಿ ಹಾರಿಸಿದ್ದು ಕಾರ್ಯಕ್ರಮದ ಮೆರುಗು ಹೆಚ್ಚಿಸಿತು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ‌ ಪರವಾಗಿ ಅತಿಥಿಗಳನ್ನು ಸನ್ಮಾನಿಸಿ, ಗೌರವಿಸಿದರು.
ಲೋಕೋಪಯೋಗಿ ಇಲಾಖೆ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ವಂದಿಸಿದರು. ಬಿ.ಸಿ.ಭಾನುಮತಿ ಕಾರ್ಯಕ್ರಮವನ್ನು ನಿರೂಪಿಸಿದರು.

ಕಾಯಕಯೋಗಿ, ತ್ರಿವಿಧ ದಾಸೋಹಿ ಡಾ||ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆದಾಸೋಹ ದಿನ ಅಚರಣೆ

Kayakayogi, Trividha Dasohi Dr||Shivakumar Swamiji Punyasmarane Dasoha Day Celebration

ರಾಜಾಜಿನಗರ: ರಾಜಾಜಿನಗರ ಪ್ರವೇಶ ದ್ವಾರ ಬಳಿ ಡಾ||ಶಿವಕುಮಾರಸ್ವಾಮಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕರ್ನಾಟಕ ರತ್ನ, ಪದ್ಮಭೂಷಣ, ತ್ರಿವಿಧ ದಾಸೋಹಿ ಡಾ||ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ 6ನೇ ವರ್ಷದ ಸಂಸ್ಕರಣೋತ್ಸವ ಮತ್ತು ದಾಸೋಹ ದಿನ ಅಚರಣೆ.

ಡಾ.ಶಿವಕುಮಾರ ಮಹಾಸ್ವಾಮೀಜಿರವರು ಪುತ್ಥಳಿಗೆ ಮೋಟಗಿ ಮಠದ ಪ್ರಭುಚನ್ನಬಸವ ಮಹಾಸ್ವಾಮಿಗಳು, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ರಾಜ್ಯ ಘಟಕ ಅಧ್ಯಕ್ಷರಾದ ಡಾ||ಶಂಕರ ಬಿದರಿರವರು ಐಪಿಎಸ್.(ನಿ), ವಿಧಾನಪರಿಷತ್ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ, ವೀರಶೈವ ಲಿಂಗಾಯಿತ ಮಹಾಸಭಾ ಬೆಂಗಳೂರುನಗರ ಜಿಲ್ಲಾಧ್ಯಕ್ಷರಾದ ಬಿ.ಆರ್.ನವೀನ್ ಕುಮಾರ್, ಪ್ರಧಾನ ಕಾರ್ಯದರ್ಶಿ ಬಿ.ಎಂ.ಶಿವಕುಮಾರ್,ಖಜಾಂಚಿ ವಿಜಯಕುಮಾರ್ ಕನ್ನಡ ಪರ ಹೋರಾಟಗಾರ ಪಾಲನೇತ್ರ, ಅಧ್ಯಕ್ಷರಾದ ಟಿ.ವೆಂಕಟೇಶ್ ಗೌಡ, ಉಪಾಧ್ಯಕ್ಷ ಕ್ರಾಂತಿರಾಜು, ಸಂಚಾಲಕರಾದ ಬಿ.ದೇವರಾಜುರವರುಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಶಿವರಾಮೇಗೌಡರವರು ಮಾಲಾರ್ಪಣೆ ಮಾಡಿ, ಪುಷ್ಪನಮನ ಸಲ್ಲಿಸಿದರು.

ಪ್ರಭುಚನ್ನಬಸವ ಸ್ವಾಮೀಜಿರವರು
ಕಾಯಕವೇ ಕೈಲಾಸ ತತ್ವದ ಪ್ರತಿರೂಪ , ಮಹಾನ್ ಮಾನವೀಯತೆ ಗುಣವುಳ್ಳ ಶಿವಕುಮಾರ ಮಹಾಸ್ವಾಮೀಜಿಗಳು.

ಅನ್ನ ,ಶಿಕ್ಷಣ, ಆಶ್ರಯದ ಮಹತ್ವಗಳನ್ನು ಸಾರಿದರು, ಲೋಕಕಲ್ಯಾಣಕ್ಕಾಗಿ ಅವರ ಜೀವನವನ್ನು ಮುಡಿಪಾಗಿಟ್ಟರು.

ಶಾಂತಿಯುತೆ, ಸೌರ್ಹದತೆ, ಸಹೋದರತ್ವ ಮತ್ತು ಜೀವನ ಹೇಗೆ ಸಾಗಿಸಬೇಕು ಎಂದು ನಾಡಿನ ಜನರಿಗೆ ಅರಿವು ಮೂಡಿಸಿದ ಮಹಾನ್ ಸಂತ, ನಡೆದಾಡುವ ದೇವರು ಶಿವಕುಮಾರಸ್ವಾಮೀಜಿಗಳ ಆದರ್ಶಗುಣಗಳನ್ನು ಆಳವಡಿಸಿಕೊಂಡು ಎಲ್ಲರು ಜೀವನ ಸಾಗಿಸಿದರೆ ಸಾಕು

ಡಾ||ಶಂಕರಬಿದರಿರವರು ಮಾತನಾಡಿ ಅಚಾರ, ವಿಚಾರ ಸಿದ್ದಾಂತಗಳು ಮೂಲಕ ವಿಶ್ವದ ಗಮನ ಸೆಳದ ಡಾ.ಶಿವಕುಮಾರ ಮಹಾಸ್ವಾಮೀಜಿರವರ ಆದರ್ಶ ತತ್ವಗಳಿಂದ ನಾಡಿನಲ್ಲಿ ಶಾಂತಿ ಲಭಿಸಲಿ.

ಡಾ.ಶಿವಕುಮಾರ ಮಹಾಸ್ವಾಮೀಜಿ ಸಾಧನೆ ಮಾಡಿ ಮಹಾನ್ ಸಂತರಾಗಿ ಪರಮಾತ್ಮ ಬಳಿ ಲೀನವಾದರು

ಛಲವಾದಿ ನಾರಾಯಣಸ್ವಾಮಿ ರವರು ಮಾತನಾಡಿ ಶಿವಕುಮಾರ ಸ್ವಾಮೀಜಿರವರು ಸಮಾಜಕ್ಕೆ ಕೊಟ್ಟ ಕೊಡುಗೆ ಸದಾ ನಾವು ಸ್ಮರಿಸಬೇಕು, ಎಲ್ಲರಿಗೂ ಮೀರಿದ ಕಾರ್ಯ ಮಾಡಿದರು.

ಸಮಾಜಕ್ಕೆ ಅನ್ನ,ಅಕ್ಷರ, ಆಶ್ರಯವನ್ನು ಕೊಟ್ಯಂತರ ಜನರಿಗೆ ನೀಡಿದರು, ಸಿದ್ದಗಂಗಾ ಮಠದಲ್ಲಿ ಶಿಕ್ಷಣ ಪಡೆದವರು ಇಂದು ದೇಶ, ವಿದೇಶದಲ್ಲಿ ಉತ್ತಮ,ಉನ್ನತ ಕೆಲಸದಲ್ಲಿ ಇದ್ದಾರೆ.

ಉತ್ತಮ ಸಮಾಜಕ್ಕೆ ಬದುಕು ಕಲ್ಯಾಣವಾಗಲು ಶಿವಕುಮಾರ ಸ್ವಾಮೀಜರವರ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಎಲ್ಲರು ಸಾಗಬೇಕು.