Breaking News

ಕಾಟಾಚಾರಕ್ಕೆ ತೆರವು ಕಾರ್ಯಾಚರಣೆ ಸಾವ ರ್ವಜನಿಕರು ಆಕ್ರೋಶ

Clearing operation for Katachara is killing workers, anger

ಜಾಹೀರಾತು

ರಾಯಚೂರು. ಪಾದಚಾರಿ ರಸ್ತೆಯಲ್ಲಿ 9 ಅಡಿ ಒತ್ತುವರಿ ಮಾಡಿದ ಕಟ್ಟಡವನ್ನು ನಗರಸಭೆ ತೆರವು ಗೊಳಿಸುತ್ತಿರುವದು

ನಗರದ ಸ್ಟೇಷನ್‌ ರಸ್ತೆಯಲ್ಲಿರುವ ಸುನಿಲ್ ಅಗರವಾಲ್‌ ಅವರಿಗೆ ಸಂಬಂಧಿಸಿದ 4 ಮಹಡಿಯ ಕಟ್ಟಡವು ಪಾದಚಾರಿ ರಸ್ತೆಯನ್ನು 9 ಅಡಿ ಒತ್ತುವರಿ ಮಾಡಿ ಕಟ್ಟಡ ನಿರ್ಮಾಣ ಮಾಡಿದ್ದು ಈ ಬಗ್ಗೆ ದೂರು ನೀಡಿದ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಸಹಾಯಕ ಆಯುಕ್ತರು, ನಗರಾಭಿ ವೃದ್ಧಿ ಕೋಶ ಅಧಿಕಾರಿ ಹಾಗೂ ನಗರಸಭೆ ಪೌರಾಯಕ್ತರು ಪೋಲಿಸರ ನೇತೃತ್ವದಲ್ಲಿ ತೆರವುಗೊಳಿಸಲು ಮುಂದಾಗದರು, ಕಟ್ಟಡದ ಗೊಡೆಗಳನ್ನು ಅರೆಬರೆ ತೆರವುಗೊಳಿಸಿದ್ದು ಕಾಲಂಗಳನ್ನು ತೆರವುಗೊಳಿಸದೇ ತೆರವು ಕಾರ್ಯಚರಣೆ ಸ್ಥಗಿತಗೊಳಿಸಿದರು. ಈ ವೇಳೆ ಕಟ್ಟಡ ಮಾಲೀಕರು ನಗರಸಭೆ ವಿರುದ್ಧವಾಗಿ ಆಕ್ರೋಶ ವ್ಯಕ್ತಪಡಿಸಿ ನಗರದಲ್ಲಿ ಸಾಕಷ್ಟು ಕಟ್ಟಡಗಳು ಒತ್ತುವರಿ ಮಾಡಿ ನಿರ್ಮಾಣ ಮಾಡಲಾಗಿದೆ, ಕೇವಲ ನಮ್ಮ ಕಟ್ಟಡ ತೆರವುಗೊಳಿಸಿದ್ದಕ್ಕೆ ಆಕ್ರೋಶ ಹೊರ ಹಾಕಿದರು. ಒತ್ತುವರಿ ಮಾಡಿದ್ದರೆ ಈ ಕುರಿತು ಮಾಹಿತಿ ನೀಡಿ ನೋಟೀಸ್ ನೀಡಬೇಕಿತ್ತು, ಆದರೆ ತೆರವುಗೊಳಿಸಿದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.