Breaking News

ದಲಿತರ ಹಣವನ್ನು ದುರ್ಬಳಕೆಮಾಡಿಕೊಂಡ ರಾಜ್ಯ ಸರ್ಕಾರದ ವಿರುದ್ಧ ಮೈಸೂರಿನಿಂದ ಬೆಂಗಳೂರು ವಿಧಾನಸೌಧದ ವರೆಗೆ ಪಾದಯಾತ್ರೆಯಪ್ರತಿಭಟನೆ.


A protest march from Mysore to Bangalore Methodist Church against the state government for misappropriating Dalit funds.

ಜಾಹೀರಾತು


ಆಗಸ್ಟ್,17:ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮ ವಾದ (ರಿ) ಈ ಸಂದರ್ಭದಲ್ಲಿ RPI.K ಹಾಗೂ K.DSS ಸಂಘಟನೆಯ ರಾಜ್ಯ ಅಧ್ಯಕ್ಷರಾದ ಆರ್ ಮೋಹನ್ ರಾಜ್ ಹಾಗೂ ರಾಜ್ಯ ಉಪ ಅಧ್ಯಕ್ಷರಾದ ರಾಜು ಎಂ ತಳವಾರ್ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ.
ರಾಜ್ಯದ ಪರಿಶಿಷ್ಟ ಜಾತಿ ಉಪಯೋಗನೇ ಹಾಗೂ ಪರಿಶಿಷ್ಟ ಪಂಗಡಗಳ ಉಪ ಯೋಜನೆ (SCSP-TSP ) ಯ ಹಣವನ್ನು ಈ ರಾಜ್ಯ ಸರ್ಕಾರ ತನ್ನ ಗ್ಯಾರಂಟಿ ಯೋಜನೆ ಗಳಿಗೆ ಬಳಸಿಕೊಂಡಿರುವುದನ್ನು ವಾಪಾಸ್ ನೀಡಲು ಒತ್ತಾಯಿಸಿ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾಡುತ್ತಿರುವ ಅನ್ಯಾಯವನ್ನು ಖಂಡಿಸಿ ಸಮಾಜ ಕಲ್ಯಾಣ ಇಲಾಖೆ ಸಚಿವರ ರಾಜೀನಾಮೆಗೆ ಒತ್ತಾಯಿಸಿ ಮೈಸೂರಿನ ಡಿಸಿ ಕಚೇರಿಯಿಂದ ಬೆಂಗಳೂರಿನ ವಿಧಾನಸೌಧದ ವರೆಗೆ
ಬೃಹತ್ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು.
ಭಾರತಕ್ಕೆ ಸ್ವತಂತ್ರ ಬಂದು 75 ವರ್ಷಗಳಾಗಿವೆ. ಆದರೂ ಶೋಷಿತ ಸಮುದಾಯಗಳನ್ನು ಮುಖ್ಯ ವಾಹಿನಿಗೆ ತರುವ ಕೆಲಸವನ್ನು ಆಳುವ ವರ್ಗ ಪ್ರಮಾಣಿಕವಾಗಿ ಮಾಡುತ್ತಿಲ್ಲ ರಾಜ್ಯ ಸರ್ಕಾರ ಶೋಷಿತ ಸಮುದಾಯಗಳ ಉನ್ನತಿಗಾಗಿ ಪ್ರಮಾಣಿಕ ಪ್ರಯತ್ನ ಮಾಡಬೇಕಿತ್ತು. ದುರಂತ ಜನಸಂಖ್ಯೆ ಅನುಗುಣವಾಗಿ ಮೀಸಲಿಟ್ಟ SCSP-TSP ಹಣವನ್ನು ತನ್ನ ಗ್ಯಾರಂಟಿ ಯೋಜನೆಗಳಿಗೆ ಉಪಯೋಗಿಸುವ ಮೂಲಕ ಈ ಸಮುದಾಯಗಳಿಗೆ ಮೋಸ ಮಾಡಿದ್ದಾರೆ ಇದನ್ನು ಖಂಡಿಸುತ್ತೇವೆ ಇದರ ಜೊತೆಗೆ ಎಸ್ಸಿ ಎಸ್ಟಿ ಮಕ್ಕಳ ವಿದ್ಯಾಭ್ಯಾಸಕ್ಕೆ ತಡೆಹಟ್ಟುವ ಕೆಲಸಕ್ಕೆ ಮುಂದಾಗಿದೆ SSLC ಮತ್ತು PUC ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು ವಿಕೃತಗೊಳಿಸಿದ್ದಾರೆ. ವಿದೇಶಕ್ಕೆ ಹೋಗಿ ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆ ACS ರವರು ಅಪಮಾನ ಮಾಡುತ್ತಿದ್ದಾರೆ. ಇವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಲಾಯಿತು. #ಹಕ್ಕುತಾಯಗಳು
*Sc-ST ಸಮುದಾಯಗಳ ಅಭಿವೃದ್ಧಿಗೆ ಮೀಸಲಿಟ್ಟ SCSP-TSP ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿರುವುದನ್ನು ತಡೆದು ಕೂಡಲೇ ವಾಪಸು ನೀಡಬೇಕು.
*ಎಸ್ ಸಿ ಎಸ್ ಟಿ ಸಮುದಾಯಗಳ ವಿರೋಧಿಯಾದ ACS ಮಣಿವಣ್ಣನ್ ರವರನ್ನು ಕೂಡಲೇ ಸೇವೆಯಿಂದ ಅಮ್ಮನನ್ನು ಮಾಡಬೇಕು.
*SC-ST ಸಮುದಾಯಗಳ SSLC ಮತ್ತು PUC ವಿದ್ಯಾರ್ಥಿಗಳ ಪ್ರೋತ್ಸಾಹ ಹಣವನ್ನು ಕೂಡಲೇ ಎದ್ದಿರುವ ಗೊಂದಲಗಳನ್ನು ಸರಿಪಡಿಸಬೇಕು.
*ವಿದೇಶಕ್ಕೆ ಉನ್ನತ ವ್ಯಾಸಂಗಕ್ಕಾಗಿ ರೂಪಿಸಿದ ಪ್ರಬುದ್ಧ ಯೋಜನೆಯನ್ನು ಕೂಡಲೇ ಸಮರ್ಪಕವಾಗಿ ಜಾರಿಗೊಳಿಸಬೇಕು.
*ವಸತಿ ಶಾಲೆಗಳ ನೇಮಕದಲ್ಲಿ ವಿಧಿಸಿರುವ ನಿಬಂಧನೆಗಳನ್ನು ಕೂಡಲೇ ರದ್ದು ಪಡಿಸಿ ಎಲ್ಲ ಮಕ್ಕಳಿಗೆ ಅವಕಾಶ ಕಲ್ಪಿಸಿ ಕೊಡಬೇಕು.
*ಮಹರ್ಷಿ ವಾಲ್ಮೀಕಿ ನಿಗಮದ ಅವ್ಯವಹಾರದ ಹೊಣೆಯನ್ನು ಮುಖ್ಯಮಂತ್ರಿಗಳು ವಹಿಸಿಕೊಳ್ಳಬೇಕು ಭ್ರಷ್ಟರ ಆಸ್ತಿಗಳನ್ನು ಸರ್ಕಾರ ಕೂಡಲೇ ಮುಟ್ಟಿಗೊಲು ಹಾಕಿಕೊಳ್ಳಬೇಕು.
*ಬೌದ್ಧ ಸಮಾಜದ ಸಾಮಾಜಿಕ ಆರ್ಥಿಕ ಅಭಿವೃದ್ಧಿಗೆ ಕರ್ನಾಟಕ ಬೌದ್ಧ ಧರ್ಮ ಅಭಿವೃದ್ಧಿ ನಿಗಮವನ್ನು ಕೂಡ ಸ್ಥಾಪಿಸಬೇಕು.
*ಬೌದ್ಧ ಧರ್ಮಕ್ಕೆ ಮತಂತ್ರಗೊಂಡವರಿಗೆ ನಮೂನೆ-1 ಸಂವಿಧಾನ ಕಾಯ್ದೆ ಪ್ರಕಾರ ಜಾತಿ ಪ್ರಮಾಣ ಪತ್ರದಲ್ಲಿ ಧರ್ಮದ ಉಲ್ಲೇಖ ಇರುವಂತೆ ಮಾರ್ಪಡಿ ಮಾಡಬೇಕು.
*ಪ್ರತಿ ಹಳ್ಳಿಯ SC-ST ಸಮುದಾಯಗಳಿಗೆ ಸರ್ವೋಚ್ಚ ನ್ಯಾಯಾಲಯದ ಆದೇಶನವಮಿಯ ಸ್ಮಶಾನಕ್ಕೆ ಭೂಮಿಯನ್ನು ನಿಗದಿಪಡಿಸಬೇಕು.
ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.
ಸಾಮಾಜಿಕ ನ್ಯಾಯಕ್ಕಾಗಿ ಕಾಲ್ನಡಿಗೆ ಜಾತಕ್ಕೆ ಬೆಂಬಲ ನೀಡುತ್ತಿರುವ ಸಂಘಟನೆಗಳು.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ್)
ಕರ್ನಾಟಕ ದಲಿತ ಸಂಘರ್ಷ ಸಮಿತಿ ( ಸೋಮಶೇಖರ್ ಬಣ)
ಅಂಬೇಡ್ಕರ್ ಸೇನೆ ( ಪಿ ಮೂರ್ತಿ ಬಣ)

About Mallikarjun

Check Also

ಜೆಜೆಎಂ ಕಾಮಗಾರಿ ಅವೈಜ್ಞಾನಿಕ :ಮಳೆ ನೀರು ಗ್ರಾಮದೊಳಕ್ಕೆ ಸಾರ್ವಜನಿಕರಆಕ್ರೋಶ

JJM’s work is unscientific: Public outrage over rain water in the village ವರದಿ : ಪಂಚಯ್ಯ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.