Breaking News

ಬ್ಯಾಡಗಿ ರೋಟರಿ ಮತ್ತು ಇನ್ನರ್ವಿಲ್ ಕ್ಲಬ್ ಪದಗ್ರಹಣ

Badagi Rotary and Innerville Club Photography

ಜಾಹೀರಾತು

ಕಲ್ಯಾಣ ಸಿರಿ ಸುದ್ದಿ,

ಬ್ಯಾಡಗಿ:ಇಂದು ಪಟ್ಟಣದ BESM ಕಾಲೇಜು ಸಭಾಭವನದಲ್ಲಿ ಸ್ಥಳೀಯ ರೋಟರಿ ಕ್ಲಬ್ ಬ್ಯಾಡಗಿ ಮತ್ತು ಇನ್ನರ್ ವ್ಹೀಲ್ ಕ್ಲಬ್ ಬ್ಯಾಡಗಿ 2024 -25ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ವಿಜೃಂಭಣೆಯಿಂದ ನಡೆಯಿತು. ಸಮಾರಂಭದಲ್ಲಿ ಗೋವಾದಿಂದ ಆಗಮಿಸಿದ್ದ 2026-27ನೇ ಸಾಲಿನ ಗವರ್ನರ್ ಡಾ. ಲೆನ್ನಿ ಡಾ ಕೋಸ್ಟಾ ಅವರು ಪ್ರಮಾಣ ವಚನ ಬೋಧಿಸಿ ನೂತನ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಅಧಿಕಾರ ಹಸ್ತಾಂತರ ಮಾಡಿಸಿದರು. ಎಸ್ ಎಂ ಬೂದಿಹಾಮಠ ಇವರು ರೋಟರಿ ಕ್ಲಬ್ಬಿನ ಅಧ್ಯಕ್ಷರಾಗಿ ನಿರಂಜನ ಶೆಟ್ಟಿಹಳ್ಳಿ ಕಾರ್ಯದರ್ಶಿಯಾಗಿ ಮತ್ತು ಇನ್ನರ್ವಿಲ್ ಕ್ಲಬ್ಬಿನ ಶ್ರೀಮತಿ ಕವಿತಾ ಸೊಪ್ಪಿನಮಠ ಅಧ್ಯಕ್ಷರಾಗಿ ಶ್ರೀಮತಿ ರೂಪಾ ಕಡೆಕೊಪ್ಪ ಕಾರ್ಯದರ್ಶಿಯಾಗಿ ಹುಬ್ಬಳ್ಳಿಯಿಂದ ಆಗಮಿಸಿದ್ದ ಶ್ರೀಮತಿ ಸಹನಾ ಪೈಕೋಟಿ ಇನ್ನರ್ ವ್ಹೀಲ್ ಡಿಸ್ಟ್ರಿಕ್ಟ್ ISO ಅವರಿಂದ ಅಧಿಕಾರ ಹಸ್ತಾಂತರ ಸ್ವೀಕರಿಸಿದರು. ರಾಣೆಬೆನ್ನೂರಿನ ಡಾ. ಬಸವರಾಜ್ ಕೆಲಗಾರ ಉದ್ಘಾಟನೆ ನಡೆಸಿದರು ಅಸಿಸ್ಟೆಂಟ್ ಗವರ್ನರ್ ಮಂಜುನಾಥ ಉಪ್ಪಾರ ಇನ್ನುಳಿದ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿದರು. ನಂತರ ಸಮಾರಂಭವನ್ನು ಉದ್ದೇಶಿಸಿ ಡಿಸ್ಟ್ರಿಕ್ಟ್ ಗವರ್ನರ್ ಕ್ಲಬ್ ಗಳಿಗೆ ನೀಡಿದ ಗೋಲ್ಸ್ ಗಳನ್ನು ವಿವರಿಸಿದರು ತಮಗೆ ನೀಡಿದ ಗೋಲುಗಳನ್ನು ಸಾಧಿಸಲು ಅಧ್ಯಕ್ಷರಿಗೆ ಎಲ್ಲಾ ಸರ್ವ ಸದಸ್ಯರು ಸಹಾಯ ಸಹಕಾರ ನೀಡಿ ಕಬ್ಬಿನ ಹೆಸರು ತರುವಲ್ಲಿ ಸಕ್ರಿಯರಾಗಬೇಕೆಂದು ವಿನಂತಿಸಿದರು.

ನಂತರ ಡಾ. ಲೇನ್ನಿ ಡಾ ಕೋಸ್ಟಾ ಮಾತನಾಡಿ ನಿಮ್ಮ ಕ್ಲಬ್ ಚಿಕ್ಕದಿದ್ದರೂ ಅದ್ದೂರಿಯಾಗಿ ಸಮಾರಂಭ ನಡೆಸಿದ್ದೀರಿ ಗೋವಾದಿಂದ ನನ್ನನ್ನು ಬರ ಮಾಡಿಕೊಂಡು ಉತ್ತಮ ರೀತಿಯಲ್ಲಿ ಸಮಾರಂಭ ನಡೆಸಿಕೊಡಲು ಯಶಸ್ವಿಯಾಗಿದ್ದೀರಿ ನೂತನ ಎಲ್ಲ ಪದಾಧಿಕಾರಿಗಳಿಗೆ ಅಭಿನಂದನೆಗಳನ್ನು ತಿಳಿಸಿ ಕ್ಲಬ್ಬಿನ ಪರವಾಗಿ ಉತ್ತಮ ದೊಡ್ದ ಮಟ್ಟದ ಸೇವಾ ಕಾರ್ಯಗಳನ್ನು ಮಾಡಿರಿ, ಡಿಸ್ಟ್ರಿಕ್ಟ್ ಸಹಾಯ ಪಡೆದು ದೊಡ್ಡ ಪ್ರಮಾಣದ ಗ್ಲೋಬಲ್ ಗ್ರಾಂಟ್ ಪಡೆದು ಪಟ್ಟಣದಲ್ಲಿ ದೊಡ್ಡ ದೊಡ್ಡ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿ ಅದಕ್ಕೆ ಬೇಕಾದ ಅರ್ಧ ಮೊತ್ತ ರೋಟರಿ ಫೌಂಡೇಶನ್ ನೀಡುತ್ತದೆ, ಇನ್ನುಳಿದ ಅರ್ಧ ಮೊತ್ತಕ್ಕೆ ಸ್ಥಳೀಯ ದೊಡ್ಡ ದೊಡ್ಡ ಉದ್ಯಮಿಗಳ ಸಹಾಯ ಪಡೆಯಿರಿ ಎಂದು ತಿಳಿಸಿದರು ಅಲ್ಲದೇ ಮಾಜಿ ಅಧ್ಯಕ್ಷ ಬಸವರಾಜ ಸುಂಕಾಪುರ ಇವರ ಅವಧಿಯಲ್ಲಿ 80000 ಮೌಲ್ಯದ ವೀಲ್ ಚೇರ್ ಮತ್ತು ಮಾಜಿ ಅಧ್ಯಕ್ಷ ಮಂಜುನಾಥ ಉಪ್ಪಾರ ಅವರ ಅವಧಿಯಲ್ಲಿ 1.60.000 ಮೊತ್ತದ ವ್ಹೀಲ್ ಚೇರ್ ಗಳನ್ನು ನನ್ನಿಂದ ಮಂಜುನಾಥ ಉಪ್ಪಾರ ಇವರು ಒತ್ತಾಯಪೂರ್ವಕವಾಗಿ ಮಂಜೂರು ಮಾಡಿಸಿಕೊಂಡಿದ್ದನ್ನು ನೆನಪಿಸಿಕೊಂಡರು.
ನಂತರ ಡಾ. ಲ್ಯಾನಿ ಡಾ ಕೋಸ್ಟಾ ಅವರು 2022-23ನೇ ಸಾಲಿನ ಮಂಜುನಾಥ ಉಪ್ಪಾರ ಇವರ ಅಧ್ಯಕ್ಷ ಅವಧಿಯಲ್ಲಿ ಡಿಸ್ಟ್ರಿಕ್ಟ್ನಿಂದ ಗಳಿಸಿದ 9 ಅವಾರ್ಡ್ ಗಳನ್ನು ಕ್ಲಬ್ ಸದಸ್ಯರಿಗೆ ವಿತರಿಸಿದರು. ಹಾಗೂ ಮಂಜುನಾಥ ಉಪ್ಪಾರ ಅವರ ಅವಧಿಯ ಆರು ಜನ ಪಾಲ್ ಹ್ಯಾರಿಸ್ ಫೆಲೋ ಸರ್ಟಿಫಿಕೇಟ್ ಗಳನ್ನು ನೀಡಿದರು ಒಂದು ಪಾಲ್ ಹ್ಯಾರಿಸ್ ಫೆಲೋ ಪಡೆಯಲು 1,000 ಯುಎಸ್ ಡಾಲರ್(83000₹)ಗಳನ್ನು ರೋಟರಿ ಫೌಂಡೇಶನ್ ಗೆ ಡೊನೇಟ್ ಮಾಡಬೇಕಾಗುತ್ತದೆ ಇಂತಹ ಆರು ಸದಸ್ಯರಾದ ಬಸವರಾಜ ಸುಂಕಾಪುರ, ಸುರೇಶ ಗೌಡರ, ಜೆ ಎಚ್ ಪಾಟೀಲ, ಮಂಜುನಾಥ ಉಪ್ಪಾರ, ಅನಿಲಕುಮಾರ ಬೊಡ್ಡಪಾಟಿ, ಮಾಲತೇಶ ಉಪ್ಪಾರ ಇವರನ್ನು ಮನಒಲಿಸಿ ಒಪ್ಪಿಸಿ ಅವರಿಂದ ಡೋನೇಶನ್ ಪಡೆದು ಒಂದೇ ವರ್ಷದಲ್ಲಿ ಮಾಡಿರುವುದು ದೊಡ್ಡ ಸಾಧನೆ ಎಂದು ತಿಳಿಸಿದರು.
ನಂತರ ಅಧಿಕಾರ ಹಸ್ತಾಂತರ ಪಡೆದ ನೂತನ ಅಧ್ಯಕ್ಷ ಎಸ್ ಎಂ ಬೂದಿಹಾಳಮಠ ಮಾತನಾಡಿ ಹಿಂದಿನ ಎಲ್ಲಾ ಸದಸ್ಯರು ತಮ್ಮ ತಮ್ಮ ಅವಧಿಯಲ್ಲಿ ಅನೇಕ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ ಅವರೆಲ್ಲರ ಮಾರ್ಗದರ್ಶನದೊಂದಿಗೆ ಸದಸ್ಯರ ಅಭಿಪ್ರಾಯದ ಮೇರೆಗೆ ಎಲ್ಲರ ಸಹಾಯ ಸಹಕಾರದೊಂದಿಗೆ ಪಟ್ಟಣದಲ್ಲಿ ಹೆಚ್ಚು ವಿನೂತನ ದೊಡ್ಡ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು. ಅದೇ ರೀತಿಯಾಗಿ ಇನ್ನರ್ ವ್ಹೀಲ್ ಕಬ್ಬಿನ ನೂತನ ಅಧ್ಯಕ್ಷ ಶ್ರೀಮತಿ ಕವಿತಾ ಸೊಪ್ಪಿನಮಠ ಅಧಿಕಾರ ಹಸ್ತಾಂತರ ಪಡೆದು ಮಾತನಾಡಿ ನಮ್ಮ ಸದಸ್ಯರ ಸಹಕಾರದೊಂದಿಗೆ ರೋಟರಿ ಸದಸ್ಯರ ಸಹಕಾರದೊಂದಿಗೆ ಅತಿಹೆಚ್ಚು ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಇನ್ನರ್ವಿಲ್ ಧೆಯೋದ್ದೇಶಗಳನ್ನು ಪೂರೈಸುತ್ತೇನೆ ಎಂದು ಆಶ್ವಾಸನೆ ನೀಡಿದರು. ಸಮಾರಂಭದಲ್ಲಿ ವಿಶೇಷವಾಗಿ ಪುರಸಭೆಯ ಮುಖ್ಯ ಅಧಿಕಾರಿಗಳಾದ ವಿನಯಕುಮಾರ ಹೊಳೆಪ್ಪಗೋಳ, ಹಾವೇರಿ ಯೂನಿವರ್ಸಿಟಿ ಸಿಂಡಿಕೇಟ್ ಮೆಂಬರ್ ಆಗಿ ನಿಯುಕ್ತಗೊಂಡ ಶ್ರೀ ಎಸ್ ಜಿ ವೈದ್ಯ, ರಾಜ್ಯ ಸರಕಾರದಿಂದ ಶ್ರೇಷ್ಠ ವೈದ್ಯ ಪ್ರಶಸ್ತಿ ಪಡೆದ ಡಾ. ರಾಜೇಶ್ವರಿ ಚನ್ನಗೌಡ್ರ, ಇತ್ತೀಚೆಗೆ ನೀಟ್ ಎಕ್ಸಾಮ್ ನಲ್ಲಿ ಹಾವೇರಿ ಜಿಲ್ಲೆಗೆ ಹೆಚ್ಚು ಅಂಕ ಗಳಿಸಿದ ಸತೀಶಗೌಡ ಮಲ್ಲನಗೌಡ ಇವರಿಗೆ ಸನ್ಮಾನ ಸಮಾರಂಭ ಏರ್ಪಡಿಸಿದ್ದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ಬಿನ ಸರ್ವ ಸದಸ್ಯರು ಇನ್ನರ್ ವ್ಹೀಲ್ ಕ್ಲಬ್ಬಿನ ಸರ್ವ ಸದಸ್ಯರು ಹಾವೇರಿ ಮತ್ತು ರಾಣೆಬೆನ್ನೂರು ರೋಟರಿ ಮತ್ತು ಇನ್ನರ್ವಿಲ್ ಕ್ಲಬ್ಬಿನ ಸದಸ್ಯರು ಅಭಿನಂದನೆ ಸಲ್ಲಿಸಲು ಆಗಮಿಸಿದ್ದರು

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.