ಇಂದು ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ,
ಗಂಗಾವತಿ ಕಾರಟಗಿ ಕನಕಗಿರಿ ತಾಲೂಕಿನ ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಪ್ರೌಢಶಾಲೆಗಳ ವಿಜ್ಞಾನ ಶಿಕ್ಷಕರಿಗೆ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ತರಬೇತಿ ಕಾರ್ಯಕ್ರಮವನ್ನ ಸಾರ್ವಜನಿಕ ಆಸ್ಪತ್ರೆಯ ಸಭಾಭವನದಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿಗಳಾದ ಡಾ. ಈಶ್ವರ್ ಸವಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಭೂಮಿಯ ಮೇಲೆ ಅತ್ಯಂತ ಕ್ರೂರವಾದ ಜೀವಿ ಯಾವುದಾದರೂ ಇದ್ದರೆ ಅದು ಸೊಳ್ಳೆ ಮಾತ್ರ ಏಕೆಂದರೆ ಭೂಮಿಯ ಮೇಲೆ ಬೇರೆ ಯಾವುದೇ ಜೀವಿ ಇಂದ ಕಳಿಸಿಕೊಂಡು ಸಾಯುವ ಮಾನವನ ಸಂಖ್ಯೆಗಿಂತ ಸೊಳ್ಳೆಯಿಂದ ಕಚ್ಚಿಸಿಕೊಂಡು ಸಾಯುವವರ ಮಾನವರ ಸಂಖ್ಯೆ ಅಧಿಕ ಆ ಕಾರಣಕ್ಕಾಗಿ ಸೊಳ್ಳೆಯ ಕಡಿತ ಚಿಕ್ಕದಿದ್ದರೂ ಸಹ ಕಂಟಕ ತುಂಬಾ ದೊಡ್ಡದಾಗಿರುತ್ತದೆ ಆದ್ದರಿಂದ ಸೊಳ್ಳೆಯಿಂದ ಉಂಟಾಗುವ ಎಲ್ಲಾ ಕಾಯಿಲೆಗಳ ನಿಯಂತ್ರಣ ಮಾಡುವುದು ಎಲ್ಲ ಇಲಾಖೆಗಳ ಹಾಗೂ ಸಾರ್ವಜನಿಕರ ಜವಾಬ್ದಾರಿ ಆಗಿರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತರಬೇತಿದಾರರಾಗಿ ಆಗಮಿಸಿದ ಜಿಲ್ಲಾ ಮಲೇರಿಯಾ ಕಾರ್ಯಾಲಯದ ಕನ್ಸಲ್ಟೆಂಟ್ ಆದ ರಮೇಶ್ ಅವರು ಸೊಳ್ಳೆಯಿಂದ ಬರುವ ಕಾಯಿಲೆಗಳ ಬಗ್ಗೆ ಹಾಗೂ ನಿಯಂತ್ರಣದ ಬಗ್ಗೆ ಶಿಕ್ಷಕರ ಪಾತ್ರದ ಬಗ್ಗೆ ತರಬೇತಿಯನ್ನ ನೀಡಿದರು .ದೇವಿಂದ್ರ ಗೌಡ ತಾಲೂಕ ಮೇಲ್ವಿಚಾರಕರು ಮಾತನಾಡಿ ಸೊಳ್ಳೆಯ ಜೀವನ ಚಕ್ರದ ಬಗ್ಗೆ ಹಾಗೂ ಸ್ವಯಂ ರಕ್ಷಣಾ ವಿಧಾನಗಳ ಸೊಳ್ಳೆಯಿಂದ ಹರಡುವ ರೋಗಗಳ ಬಗ್ಗೆ ಇತರ ಇಲಾಖೆಗಳ ಪಾತ್ರದ ಬಗ್ಗೆ ತರಬೇತಿಯಲ್ಲಿ ಭಾಗವಹಿಸಿದ ಶಿಕ್ಷಕರಿಗೆ ಮಾಹಿತಿ ನೀಡಿದರು.
ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಗುರುರಾಜ್ ಹಿರೇಮಠ ಮಾತನಾಡಿ ಡೆಂಗ್ಯೂ ಒಂದು ಸಾಂಕ್ರಾಮಿಕ ಕಾಯಿಲೆ ಇದು ನಮ್ಮ ಮನೆಯ ಸುತ್ತಮುತ್ತ ಇರುವ ಶುದ್ಧವಾದ ನೀರಿನಲ್ಲಿ ಹುಟ್ಟುತ್ತದೆ ಕಾರಣ ಎಲ್ಲಾ ನೀರಿನ ಸಲಕರಣೆಗಳು ಮುಚ್ಚಬೇಕು ಹಾಗೂ ವಾರಕ್ಕೆ ಒಂದು ದಿನವಾದರೂ ಸಂಪೂರ್ಣವಾಗಿ ಖಾಲಿ ಮಾಡಿ ಒಣಗಿಸಿ ಮತ್ತೆ ನೀರು ತುಂಬಬೇಕು ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಜಿಲ್ಲಾ ಮಲೇರಿಯ ಕಾರ್ಯಾಲಯದ ಮೇಲ್ವಿಚಾರಕರಾದ ಭೀಮೇಶ್ ಮಾತನಾಡಿ ನಮ್ಮ ಮನೆಯಲ್ಲಿ ಇರುವ ಎಲ್ಲಾ ಒಳಾಂಗಣ ಮತ್ತು ವರಂಗಣ ನೀರಿನ ಸಲಕರಣೆಗಳನ್ನ ಚೆಲ್ಲಿ ಮತ್ತೆ ತುಂಬುವ ಮೂಲಕ ಎಲ್ಲಾ ನಾಗರಿಕರು ವಾರಕ್ಕೆ ಒಮ್ಮೆ ಆದರೂ ಒಣ ದಿನಾಚರಣೆ ಆಚರಿಸಬೇಕೆಂದು ಕರೆಕೊಟ್ಟರು
ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಸುರೇಶ್ ರಮೇಶ್ ಹಾಗೂ ಗುರು ಭಾಗವಹಿಸಿ ಶಿಕ್ಷಕರಿಗೆ ಸೊಳ್ಳೆಯ ಮರಿಗಳನ್ನ ಒಂದು ನೀರಿನ ಬಾಟಲಿಯಲ್ಲಿ ತಂದು ಸೊಳ್ಳೆಯ ಜೀವನ ಚಕ್ರದ ಬಗ್ಗೆ ಮಾಹಿತಿ ನೀಡಿದರು.