
ಕನಕಗಿರಿ: ದರೋಜಿ ಗಂಗಾವತಿ ಬಾಗಲಕೋಟೆ ರೈಲ್ವೆ ಹೋರಾಟ ಸಮಿತಿಯಿಂದ ಮಾಜಿ ಸಂಸದರಾದ ಸಂಗಣ್ಣ ಕರಡಿಯವರನ್ನು ಭೇಟಿಯಾಗಿ ರೈಲ್ವೆ ಮಾರ್ಗ ಕಾಮಗಾರಿ ಆರಂಭಿಸಲು ಸಹಕರಿಸಬೇಕು ಎಂದು ರೈಲ್ವೆ ಹೋರಾಟ ಸಮಿತಿಯ ಸಹ ಸಂಚಾಲಕ ದರ್ಗಾದಸ್ ಯಾದವ್ ಅವರು ಮನವಿ ಸಲ್ಲಿಸಿದರು.
ನಂತರದಲ್ಲಿ ಮಾತನಾಡಿ ಈ ಮಾರ್ಗವು ಪ್ರವಾಸೋದ್ಯಮ ಹಾಗೂ ವ್ಯವಹಾರಿಕ ದೃಷ್ಟಿಯಿಂದ ಅತಿ ಅವಶ್ಯಕಥೆ ಯಾಗಿರುತ್ತದೆ.
ಅದಕ್ಕಾಗಿ ಈ ಮಾರ್ಗವನ್ನು ಬರುವ ಬಜೆಟ್ ನಲ್ಲಿ ಕಾರ್ಯರೂಪಕ್ಕೆ ತರುವಂತೆ ಮಾಡಬೇಕೆಂದು ಮತ್ತು ಬರುವ ಬಜೆಟ್ ನಲ್ಲಿ ಕೇಂದ್ರ ಸರ್ಕಾರವು ಈ ಯೋಜನೆ ಕುರಿತಾಗಿ ಹಣವನ್ನು ಮಂಜೂರು ಮಾಡುವ ಕುರಿತಾಗಿ ಚರ್ಚಿಸಬೇಕು ಹಾಗೂ ರಾಜ್ಯ ಸರ್ಕಾರದಿಂದ ಒತ್ತಾಯಿಸ ಬೇಕು ಎಂದರು.
ನಂತರ ಮಾಜಿ ಸಂಸದ ಸಂಗಣ್ಣ ಕರಡಿಯವರು ಮಾತನಾಡಿ ದರೋಜಿ ಗಂಗಾವತಿ ಬಾಗಲಕೋಟ ರೈಲ್ವೇ ಮಾರ್ಗವನ್ನು 2022 ಅಧಿವೇಶನದಲ್ಲಿ ರೈಲ್ವೆ ಸಚಿವರೊಂದಿಗೆ ಮಾತನಾಡಿ ಸರ್ವೆ ಮಂಜೂರು ಮಾಡಲು ನಾನು ಹಣವನ್ನು ಬಿಡುಗಡೆ ಮಾಡಿಸಿದ್ದು ಅದನ್ನು ಎರಡು ಹಂತದಲ್ಲಿ ಮಂಜೂರು ಮಾಡಲಾಗಿತ್ತು.
ಈಗ ರಾಜ್ಯ ಸರ್ಕಾರದೊಂದಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ್ ತಂಗಡಗಿ ಮತ್ತು ಕೊಪ್ಪಳ ಜಿಲ್ಲೆಯ ಸಂಸದರಾದ ರಾಜಶೇಖರ್ ಹಿಟ್ನಾಳ ಅವರ ಸಹಕಾರದೊಂದಿಗೆ ಈ ರೈಲ್ವೆ ಕಾರ್ಯವನ್ನು ರಾಜ್ಯ ಸರ್ಕಾರ ಜೊತೆಗೆ ಮುಂದುವರಿಸಲು ನಾನು ಮನವಿ ಮಾಡುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮೃತ್ಯುಂಜಯ ಸ್ವಾಮಿ ಬಿ, ನಾರಾಯಣಪ್ಪ ಐಲಿ ತಾವರಗೇರಾ, ರಂಗಣ್ಣ ಕುರುಬೂರ್, ಚೇತನ್ ಯಾದವ್, ವೆಂಕಾರೆಡ್ಡಿ ಓಣಿ ಮಣಿ, ಇನ್ನೂ ಕೆಲವರು ಉಪಸ್ಥಿತರಿದ್ದರು.
ದರೋಜಿ ಗಂಗಾವತಿಯ ಬಾಗಲಕೋಟ ರೈಲು ಮಾರ್ಗವನ್ನು ಕೇಂದ್ರ ಸರ್ಕಾರವು ಒಪ್ಪಿಗೆ ನೀಡಿದ್ದು ಈಗಾಗಲೇ ದರೋಜಿಯಿಂದ ಗಂಗಾವತಿಯವರೆಗೆ ದ್ರೋನ್ ಸರ್ವೆ ಮುಗಿದಿದೆ.
ಕೇಂದ್ರ ಸರ್ಕಾರವು ಒಪ್ಪಿಗೆ ನೀಡಿದೆ ಎರಡನೇ ಹಂತದಲ್ಲಿ ಗಂಗಾವತಿ ಕನಕಗಿರಿ ತಾವರಗೇರಾ ಕುಷ್ಟಗಿ ಇಳಕಲ್ ಹುನುಗುಂದ ಮಾರ್ಗದಿಂದ ಬಾಗಲಕೋಟೆವರೆಗೆ ಒಪ್ಪಿಗೆ ನೀಡಿದೆ.
ದರೋಜಿಯಿಂದ ಗಂಗಾವತಿಯವರಿಗೂ 31 ಕಿಲೋಮೀಟರಗೆ ಸರ್ವೇ ಮಾಡಿ 37 ಲಕ್ಷ ರೂ ಹಣವನ್ನು ಬಿಡುಗಡೆ ಮಾಡಿದ್ದು ಸರ್ವೇಕಾರ್ಯವು ಪೂರ್ಣಗೊಂಡಿದೆ.
ಗಂಗಾವತಿಯಿಂದ ಬಾಗಲಕೋಟೆ ವರೆಗೂ 157 ಕಿ.ಮೀ ಇದ್ದು 78.6 ಲಕ್ಷ ಹಣವನ್ನು ಮಂಜೂರು ಮಾಡಿರುತ್ತದೆ ಮತ್ತು ಎರಡು ಹಂತದಲ್ಲಿ ಸರ್ವೆ ಕಾರ್ಯ ಮುಗಿದಿದ್ದು ಕೇಂದ್ರ ಸರ್ಕಾರವು ಬರುವ ಬಜೆಟ್ ಅಧಿವೇಶನದಲ್ಲಿ ದರೋಜಿ ಗಂಗಾವತಿ ಬಾಗಲಕೋಟ್ ರೈಲ್ವೆ ಯೋಜನೆ ಕುರಿತಾಗಿ ಹಣವನ್ನು ಬಿಡುಗಡೆಗೊಳಿಸಬೇಕೆಂದು ರೈಲ್ವೆ ಹೋರಾಟ ಸಮಿತಿಯ ಸಂಚಾಲಕರೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ಹೆಚ್ ಆರ್ ಶ್ರೀನಾಥ್ ಮತ್ತು ಸಹ ಸಂಚಾಲಕರಾದ ದುರ್ಗಾ ದಾಸ್ ಯಾದವ್ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.