
ಗಂಗಾವತಿ.26. ಗಂಗಾವತಿ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿರೂಪೂರು ತಾಂಡದಲ್ಲಿ ವಿಶ್ವ ಮಲೇರಿಯಾ ದಿನಾಚರಣೆ ಆಚರಣೆ ಮಾಡಲಾಯಿತು ನಂತರ ಉದ್ಘಾಟಿಸಿ ಮಾತನಾಡಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾ ರಾಮಪ್ಪ ಇವರು
ಸಾಮಾನ್ಯವಾಗಿ ಬೇಸಿಗೆ ಕಾಲ ಹೋಗಿ ಮಳೆಗಾಲ ಬರುವ ಸಮಯದಲ್ಲಿ ಹೆಚ್ಚಿನ ಜನರನ್ನು ಕಾಡುವಂತಹ ಸಮಸ್ಯೆಯೆಂದರೆ ಅದು ಮಲೇರಿಯಾ ಈ ಜ್ವರದ ಬಗ್ಗೆ ಆರಂಭದಲ್ಲೇ ಎಚ್ಚರಿಕೆ ವಹಿಸದಿದ್ದರೆ ಅಪಾಯಕಾರಿ ಆಗುವ ಸಾಧ್ಯತೆಯೂ ಇದೆ. ಮಳೆಗಾಲದಲ್ಲಿ ನಿಂತ ನೀರಿನಲ್ಲಿ ಸೊಳ್ಳೆಗಳಿಗೆ ಸಂತಾನೋತ್ಪತ್ತಿ ಬೆಳಸಲು ಸಾಧ್ಯವಾಗುತ್ತದೆ. ಇದರಿಂದ ಮಲೇರಿಯಾದಂತಹ ಹಲವಾರು ಕಾಯಿಲೆಗಳು ಬರುತ್ತದೆ
ಅದರಲ್ಲೂ ಮಳೆಗಾಲದಲ್ಲಿ ನೀರು ನಿಲ್ಲುವಂತಹ ಜಾಗವನ್ನು ಸ್ವಚ್ಛವಾಗಿಟ್ಟುಕೊಳ್ಳದೆ ಇರುವ ಕಾರಣದಿಂದಾಗಿ ಮಲೇರಿಯಾ ಹರಡುವುದು ಸಹಜವಾಗಿದೆ ಮಲೇರಿಯಾ ನಿಯಂತ್ರಣದ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಪ್ರತಿಯೊಬ್ಬರೂ ಜವಾಬ್ದಾರಿಯಿಂದ ತೇಗದುಕೊಳ್ಳಬೇಕು
ಇದನ್ನು ತಿಳಿದುಕೊಂಡು ಮಲೇರಿಯಾ ಹತ್ತಿರವೂ ಬರದಂತೆ ನೋಡಿಕೊಳ್ಳಿ ಎಂದು ಸಲಹೆಯ ನೀಡಿದರು,
ನಂತರ ಮಾತನಾಡಿದ ಮಲೇರಿಯಾ ಲೀಕ್ ವರ್ಕರ ಹೆಚ್.ಸುರೇಶ ಈ ಒಂದು ಮಲೇರಿಯಾ ರೋಗಕ್ಕೆ
ಹೆಣ್ಣು ಅನಾಫಿಲೀಸ್ ಸೊಳ್ಳೆ
ಪ್ಲಾಸ್ಮೋಡಿಯಂ ಪ್ಯಾರಸಿಟ್ ಇರುವ ಸೊಳ್ಳೆಯು ಕಚ್ಚಿದಾಗ ಮಲೇರಿಯಾವು ಹರಡುವುದು ಪ್ಲಾಸ್ಮೋಡಿಯಂನ್ನು ಸರಬರಾಜು ಮಾಡುವಂತಹ ಕೆಲಸವನ್ನು ಸೊಳ್ಳೆಗಳು ಮಾಡುತ್ತದೆ. ಈ ಸೊಳ್ಳೆಯು ಆರೋಗ್ಯವಂತ ವ್ಯಕ್ತಿಗೆ ಕಚ್ಚಿದಾಗ ಪ್ಯಾರಸಿಟ್ ಪ್ರಸಾರವಾಗುವ ಸಾಧ್ಯತೆ ಕೂಡ ಹೆಚ್ಚಿದೆ
ಮಲೇರಿಯಾದಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ
ಗರ್ಭಿಣಿ ಮಹಿಳೆಯರೇ ಎಚ್ಚರವಾಗಿರಿ
ಗರ್ಭಿಣಿ ಮಹಿಳೆಯರಿಗೆ ಮಲೇರಿಯಾ ಬಂದರೆ ಅದು ತುಂಬಾ ಅಪಾಯಕಾರಿ. ಯಾಕೆಂದರೆ ಪ್ಯಾರಸಿಟ್ ಗರ್ಭದಲ್ಲಿರುವ ಮಗುವಿಗೂ ಹರಡಬಹುದು ಗರ್ಭದಲ್ಲಿರುವ ಮಗುವಿಗೆ ಮಲೇರಿಯಾ ಬಂದರೆ ಜನನದ ವೇಳೆ ಮಗುವಿನ ತೂಕ ತುಂಬಾ ಕಡಿಮೆಯಿರಬಹುದು ಮಲೇರಿಯಾದಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ
ಹೆಣ್ಣು ಅನಾಫಿಲೀಸ್ ಸೊಳ್ಳೆಯು ಪ್ಯಾರಾಸಿಟ್ ಅನ್ನು ಹರಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಮಲೇರಿಯಾ ಇರುವ ವ್ಯಕ್ತಿಗೆ ಹೆಣ್ಣು ಅನಾಫಿಲೀಸ್ ಸೊಳ್ಳೆಯು ಕಚ್ಚಿ ಅದು ಮತ್ತೆ ಇನ್ನೊಬ್ಬ ವ್ಯಕ್ತಿಗೆ ಕಚ್ಚಿದರೆ ಮಲೇರಿಯಾ ಹರುಡುತ್ತದೆ ಈ ಸೊಳ್ಳೆಗಳು ತುಂಬಾ ಚಿಕ್ಕ ಹಾಗೂ ಮಧ್ಯಮ ಗಾತ್ರದ್ದಾಗಿರುತ್ತದೆ. ಮಳೆಗಾಲದಲ್ಲಿ ಹೆಚ್ಚಾಗಿ ಇವು ಲಾರ್ವಾಗಳು ಕಂಡುಬರುತ್ತದೆ ಕೊಳಚೆ ಗುಂಡಿಗಳು, ರಸ್ತೆ ಬದಿಯ ಚರಂಡಿ, ಹೂವಿನ ಕುಂಡ, ಕುಡಿದು ಬಿಸಾಡಿದ ಸೀಯಾಳದಲ್ಲಿ ಇವು ಮಳೆಗಾಲದಲ್ಲಿ ಹೆಚ್ಚಾಗಿ ಸೊಳ್ಳೆಗಳು ಕಂಡುಬರುತ್ತದೆ ಯಾರಿಗೂ ಆದ್ರು ಮಲೇರಿಯಾ ಲಕ್ಷಣಗಳು ಕಂಡು ಬಂದರೆ ಸಮೀಪದ ಸರ್ಕಾರಿ ಆಸ್ಪತ್ರೆ ಹೋಗಿ ಚಿಕಿತ್ಸೆಯನ್ನು ಪಡೆದುಕೊಳ್ಳಿ,ಮತ್ತು ನಮ್ಮ ಆಶಾ ಕಾರ್ಯಕರ್ತೆಯರು ಪ್ರತಿಯೊಂದು ವಾರ್ಡ್ ನಲ್ಲಿನ ಮನೆ ಮನೆಗೆ ಹೋಗಿ ಬೇಟೆ ಮಾಡಿ ಮಲೇರಿಯಾ ರೋಗದ ಬಗ್ಗೆ ಮಾಹಿತಿಯನ್ನು ಕೊಡುತ್ತಾರೆ ಎಂದು ಹೇಳಿದರು,
ಈ ಸಂದರ್ಭದಲ್ಲಿ ಆರೋಗ್ಯ ಸಿಬ್ಬಂದಿಗಳಾದ ರಮೇಶ,ಗುರುಪ್ರಸಾದ್,ಶಿಕ್ಷಕರಾದ ಶ್ರೀದೇವಿ, ದಾದಾಸೀರ್,ಅಶ್ವಿನಿ, ಶ್ವೇತಂಜಲಿ,ಓಂಕಾರಪ್ಪ,ರುದ್ರಪ್ಪ ಹಾಗೂ ಮದ್ದು ಮಕ್ಕಳು ಸೇರಿದಂತೆ ಇತರರು ಇದ್ದರು