Breaking News

ಲೋಕಾಯುಕ್ತರಿಂದ ಗಂಗಾವತಿ, ಕಾರಟಗಿ, ಕನಕಗಿರಿ  ಸಾರ್ವಜನಿಕರಿಂದ ಅಹವಾಲು ಸ್ವೀಕಾರ

ಗಂಗಾವತಿ 17:ತಾಲೂಕು ಮಂಧನ   ಸಭಾಂಗಣದಲ್ಲಿ  ಗಂಗಾವತಿ: ನಗರದ ತಾಲೂಕ ಪಂಚಾಯಿತಿಯ ಮಂಥನ ಸಭಾಂಗಣದಲ್ಲಿ ಲೋಕಾಯುಕ್ತರು ಸಾರ್ವಜನಿಕರಿಂದ ಕುಂದು ಕೊರತೆಗಳ ಅಹವಾಲು ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಿದ್ದರು. 

ಜಾಹೀರಾತು

ಗಂಗಾವತಿ ಗ್ರಾಮದ ಭೂಮಿ ಸರ್ವೆ ನಂಬರ್ 46/ ಅ ವಿಸ್ತೀರ್ಣ 16 ಎಕರೆ 11 ಗುಂಟೆ, ಭೂಮಿಯು ದುಗೋಜಿ ರಾವ್ ತಂದೆ ಗುಂಜಳ್ಳಿ ಈರಪ್ಪ ಇವರಿಂದ 1954ನೇ ಸಾಲಿನಲ್ಲಿ ಭರಮಪ್ಪ ತಂದೆ ಅನಾಳಪ್ಪ ಜೋಗಿನ್ ಇವರು ಖರೀದಿ ಮಾಡಿದ್ದು, ಇದರ ದಸ್ತ ಮೇಜು ನಂಬರ್ 99345 ನೋಂದಣಿಯಾಗಿದ್ದು, ಮತ್ತು 29-03-1954ರಲ್ಲಿ ಖರೀದಿಸಿದ್ದು ಅಧಿಕೃತ ದಾಖಲೆ ಇರುತ್ತದೆ.  ಸದ್ರಿ  ಪ್ರಕಾರ 1954 ರಿಂದ 1969 ರವರೆಗೆ ಪಹಣಿ ಪತ್ರಿಕೆಗಳು ಚಾಲ್ತಿಯಲ್ಲಿ ಇರುತ್ತವೆ, ಹಾಗೂ 1969 ರಿಂದ 2020 ರ ವರೆಗೆ ಕಂದಾಯ ಇಲಾಖೆಯು ಭರಮಪ್ಪ ಅನಾಳಪ್ಪ ಜೋಗಿನ್ ಇವರ ಹೆಸರು ಪಟ್ಟದಾರ ಎಂದು ದಾಖಲಾತಿಗಳಲ್ಲಿ ನೋಂದಣಿ ಮಾಡಲು ವಿಳಂಬ ಮಾಡುತ್ತಿರುವ ಗಂಗಾವತಿ ಕಂದಾಯ  ನೀರಕ್ಷಕರಾದ  ಮಂಜುನಾಥ ಹಿರೇಮಠ ಹಾಗೂ  ತಹಸಿಲ್ದಾರ್ ಮತ್ತು ತಹಸಿಲ್ ಕಚೇರಿಯ ಸಿಬ್ಬಂದಿ ಮತ್ತು ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ, ಆಸ್ತಿಗೆ ಸಂಬಂಧಿಸಿದಂತೆ ಭರಮಪ್ಪ ಜೋಗಿನ್ ಇವರ ಮೊಮ್ಮಗನಾದ ರಮೇಶ್ ಜೋಗಿನ್ ಇಂದು ಲೋಕಾಯುಕ್ತರು ಗಂಗಾವತಿ, ಕಾರಟಗಿ  ಹಾಗೂ ಕನಕಗಿರಿ ತಾಲೂಕು ಸಾರ್ವಜನಿಕರ ಕುಂದು ಕೊರತೆಗಳ ಅಹವಾಲುಗಳನ್ನು ಸ್ವೀಕರಿಸಲು ಕರೆಯಲಾಗಿದ್ದು, ಗಂಗಾವತಿ ನಗರದ ತಾಲೂಕ ಪಂಚಾಯತಿಯ ಮಂಥನದಲ್ಲಿ ತಮ್ಮ ಮನವಿ ಪತ್ರವನ್ನು ಲೋಕಾಯುಕ್ತರಿಗೆ ನೀಡಲಾಯಿತು.

ನಮ್ಮ  ಭೂಮಿಗೆ ಸಂಬಂಧಿಸಿದಂತೆ ಕೆಲಸ  ಮಾಡದ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಿ, ನಮಗೆ ನ್ಯಾಯ ಒದಗಿಸಬೆಂಕೆಂದು ಮನವಿ  ಸಲ್ಲಿಸಲಾಯಿತು.

 ಸದರಿ ಆಸ್ತಿಗೆ ನ್ಯಾಯಾಲಯದಲ್ಲಿ ಹೋರಾಟ ಮಾಡಲು ರಮೇಶ್ ಜೋಗಿನ್ ಬಡವರಿದ್ದು ಆರ್ಥಿಕವಾಗಿ ಹಿಂದುಳಿದವರಾಗಿದ್ದು ಈ ಆಸ್ತಿಯ ಮಾಂತಪ್ಪ ತಂದೆ ವೀರಪ್ಪ ಗುಂಜಳ್ಳಿ ಇವರು ಪ್ರಭಾವಿಶಾಲಿಗಳಾಗಿದ್ದು ಇವರಿಂದ ನಮಗೆ ಅನ್ಯಾಯವಾಗಿದ್ದು ಇದರಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ಕುಗ್ಗಿ ಆಸ್ತಿ ಚಿಂತೆಯಲ್ಲಿ ದಿನಾಂಕ 3 5 2001ರಲ್ಲಿ ಭರಮಪ್ಪ ಇವರು ಮರಣ ಹೊಂದಿದ್ದಾನೆ ಈ ಪ್ರಕರಣದಲ್ಲಿ ಸುಮಾರು ವರ್ಷಗಳಿಂದ ಆಸ್ತಿಗೆ ಸಂಬಂಧಿಸಿದ ದಾಖಲೆಗಳಲ್ಲಿ ಹೆಸರನ್ನು ಸೇರಿಸುವಂತೆ ಸಾಕಷ್ಟು ಬಾರಿ   ಗಂಗಾವತಿ ತಹಸಿಲ್ದಾರರಿಗೆ ಮನವಿಯನ್ನು ಮಾಡಿಕೊಂಡರು.

ಗಂಗಾವತಿ ಹೋಬಳಿ  ಕಂದಾಯ  ನಿರೀಕ್ಷಕರಾದ ಮಂಜುನಾಥ ಹಿರೇಮಠ ಹಾಗು ತಹಸೀಲ್ ಕಚೇರಿ ಕೆಲ ನೌಕರರು ನಮ್ಮ ಮನವಿಗೆ ಸ್ಪಂದಿಸಿಲ್ಲ, ಮತ್ತು ಅವರೆಲ್ಲ ಲಂಚಕ್ಕಾಗಿ ಬೇಡಿಕೆಯ ನಿಟ್ಟಿದ್ದಾರೆಂದು ಲೋಕಾಯುಕ್ತರ ಮುಂದೆ ರಮೇಶ್ ಜೋಗಿನ್ ತನ್ನ ಮನವಿ ಪತ್ರದಲ್ಲಿ  ಆರೋಪಿಸಿದ್ದಾನೆ.

About Mallikarjun

Check Also

ಸುಳ್ವಾಡಿ ವಿಷ ಪ್ರಸಾದ ಪ್ರಕರಣ ಸಾವಿಗೆ ಕಾರಣರಾದ :ಇಮ್ಮಡಿ ಮಹದೇವಸ್ವಾಮಿ ಜಾಮೀನು ಅರ್ಜಿ ಮತ್ತೆ ವಜಾ.

Sulvadi Visha Prasad case: Cause of death: Immadi Mahadevaswamy’s bail application dismissed again. ವರದಿ : …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.