
ವರದಿ: ಬಂಗಾರಪ್ಪ ಸಿ .
ಹನೂರು :ನಮ್ಮ ದೇಶದ ಸಂವಿಧಾನದಿಂದ ಇಂದು ಅನೇಕ ಸಮುದಾಯಗಳ ಅಭಿವೃದ್ಧಿಗೆ ಕಾರಣವಾಯಿತು ಎಂದು ಮಾಜಿ ಶಾಸಕ ಆರ್ ನರೇಂದ್ರ ತಿಳಿಸಿದರು.
ಹನೂರು ಪಟ್ಟಣದ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಮಾತನಾಡಿದ ಅವರು ಇಂದಿಗೆ ಸಂವಿಧಾನ ಜಾರಿಗೆ ಬಂದಿದೆ ಅದರ ನಿರ್ಮಾತೃಗಳಾದ ಡಾ ಅಂಬೇಡ್ಕರ್ ರವರ
ನೂರು ಮೂವತ್ತು ಮೂರನೆ ವರ್ಷದ ದಿನಾಚರಣೆಯ ಪ್ರಯುಕ್ತ ಸರ್ಕಾರ ಮತ್ತು ಸಾರ್ವಜನಿಕರು ಇಂದು ಆಚರಣೆ ಮಾಡುತ್ತಿದ್ದೆವೆ,
ಇಂದು ಪ್ರಪಂಚದ ಎಲ್ಲಾ ಮೂಲೆ ಮೂಲೆಗಳಲ್ಲು ಸಹ ಆಚರಿಸುವ ಕಾಲ ಬಂದಿದೆ, ಅಂಬೇಡ್ಕರ್ ರವರು ಕೊಟ್ಟಿರುವ ಸಂವಿಧಾನದ ಹಕ್ಕು ಮತ್ತು ಅಧಿಕಾರಕ್ಕೆ ನಾವು ತಲೆಬಾಗಲೆಬೇಕು . ನಾವು ಆಚರಿಸುವ ಜಯಂತಿಗಳು ಕೇವಲ ಆ ದಿನಕ್ಕೆ ಸೀಮಿತವಾಗಬಾರದು, ನಾವೆಲ್ಲರೂ ಸ್ವಾಭಿಮಾನದಿಂದ ಬದಕಬೇಕು. ಅವರು ಸಂವಿಧಾನದದಲ್ಲಿ ನಮಗೆ ಬೇಕಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸುವಂತೆ ಮಾಡಿದ್ದಾರೆ. ನಮ್ಮ ದೇಶದಲ್ಲಿ ಸಂವಿಧಾನವನ್ನು ಎತ್ತಿಯಿಡಿಯುವ ಕಾರ್ಯವನ್ನು ಮಾಡಬೇಕು ಅಲ್ಲದೆ ಅವರ ಸಂದೇಶವನ್ನು ಎಲ್ಲಾರಿಗೂ ಸಾರುವಂತೆ ಮಾಡಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ವೆಂಕಟರಮಣ ನಾಯ್ಡು , ಉದ್ಯಮಿ ರಂಗಸ್ವಾಮಿ ,ಪಟ್ಟಣ ಪಂಚಾಯತಿ ಮಾಜಿ ಉಪಾಧ್ಯಕ್ಷರಾದ ಗೀರಿಶ್ ಕುಮಾರ್ , ಮಾದೇಶ್ ,ಮೆಡಿಕಲ್ ರಮೇಶ್ . ಸದಸ್ಯರುಗಳಾದ ಸಂಪತ್ ಕುಮಾರ್, ನಾಗೇಶ್.ನಾಗಣ್ಣ .ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್ ಕಾರ್ಯದರ್ಶಿ ಸಿದ್ದರಾಜು ,ಯುವ ಕಾಂಗ್ರೆಸ್ ಅದ್ಯಕ್ಷರಾದ ಮಾದೇಶ್ ,ನಾಗೇಂದ್ರ ,ರವಿಗೌಡ ಸೇರಿದಂತೆ ಇನ್ನಿತರರು ಹಾಜರಿದ್ದರು.