
ಗಂಗಾವತಿ: ಮತದಾನದ ಮಹತ್ವವನ್ನು ಎತ್ತಿಹಿಡಿಯುವ “ನನ್ನ ಮತ ಮಾರಾಟಕ್ಕಿಲ್ಲ’ ಎಂಬ ಪುಸ್ತಕ ಬರೆದು, ರಾಜ್ಯಾಧ್ಯಂತ ಸಂಚಲನ ಮೂಡಿಸಿದ ಗಂಗಾವತಿಯ ಕ್ರಿಯಾಶೀಲರಾದ ಸಾಹಿತಿಗಳು, ಸಂಘಟಕರು ಹಾಗೂ ಪರಿಸರ ಪ್ರೇಮಿಗಳು ಹಾಗೂ ದಂತವೈದ್ಯರಾದ ಡಾ|| ಶಿವಕುಮಾರ ಮಾಲಿಪಾಟೀಲರವರನ್ನು ಜಿಲ್ಲಾ ಚುನಾವಣಾ ರಾಯಭಾರಿಯನ್ನಾಗಿ ಆಯ್ಕೆ ಮಾಡಿದ್ದಕ್ಕೆ ನಗರದ ಲಯನ್ಸ್ ಕ್ಲಬ್, ಪಬ್ಲಿಕ್ ಕ್ಲಬ್ ಸ್ಪೋರ್ಟ್ಸ್ ಅಕಾಡೆಮಿ, ಚಾರಣ ಬಳಗ, ಕಾವ್ಯಲೋಕ ಸಂಘಟನೆಗಳ ಸದಸ್ಯರು ಸ್ವಾಗತಿಸಿ, ಜಿಲ್ಲಾಡಳಿತ ಉತ್ತಮ ಚುನಾವಣಾ ರಾಯಭಾರಿಯನ್ನು ನೇಮಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಅದೇತರಹ ವಿವಿಧ ವಿಭಾಗಗಳಲ್ಲಿ ಜಿಲ್ಲಾ ರಾಯಭಾರಿಯಾಗಿ ಆಯ್ಕೆಯಾದ ಮೆಹೆಬೂಬಸಾಬ್ ಕಿಲ್ಲೇದಾರ, ಪೂರ್ಣಿಮಾ ಏಳುಬಾವಿ, ರಮ್ಯಾ ಅವರನ್ನು ಅಭಿನಂದಿಸಿದ್ದಾರೆ.
Kalyanasiri Kannada News Live 24×7 | News Karnataka
