Breaking News
ಕಟ್ಟಿಗೆ ಚುಚ್ಚಿ ಕಣ್ಣು ಗುಡ್ಡೆ ಹೊರಬಂದಿದ್ದ ಬಾಲಕಿಯ ಕಣ್ಣುಗಳನ್ನು ಸಂರಕ್ಷಿಸಿದ ವೈದ್ಯರು

A doctor saved the eyes of a girl whose eye ball had come out after piercing a stick.


ಗಂಗಾವತಿ:ಕಟ್ಟಿಗೆ ಚುಚ್ಚಿ ಕಣ್ಣು ಗುಡ್ಡೆ ಹೊರಬಂದಿದ್ದ ಕಣ್ಣನ್ನು ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಶಾಶ್ವತವಾಗಿ ಎರಡು ಕಣ್ಣಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದ ಬಾಲಕಿಗೆ ಹೊಸ ಬೆಳಕನ್ನು ನೀಡುವಲ್ಲಿ ನಗರದ ಖ್ಯಾತ ನೇತ್ರ ತಜ್ಞ ಡಾ.ಮಹಾಂತೇಶ ಪಟ್ಟಣಶೆಟ್ಟಿ ಯಶಸ್ವಿಯಾಗಿದ್ದಾರೆ.
ತಾಲೂಕಿನ ವಿರೂಪಾಪೂರ ಗಡ್ಡಿ ನಿವಾಸಿ ನಾಗರಾಜ ಇವರ ಪುತ್ರಿ ಧನುಬಾಯಿ(07) ಶಾಲೆಗೆ ಕಾಲುವೆಯ ಸೇತುವೆ ದಾಟಿ ಹೋಗುವ ಸಂದರ್ಭದಲ್ಲಿ ಕಾಲು ಜಾರಿ ಬಿದ್ದ ಪರಿಣಾಮವಾಗಿ ಎಡಭಾಗದ ಕಣ್ಣಿಗೆ ಕಟ್ಟಿಗೆ ತಾಕಿ ಕಣ್ಣುಗುಡ್ಡೆ ಹೊರಗೆ ಬಂದಿತ್ತು. ಗಾಬರಿಗೊಂಡ ನಾಗರಾಜ ದಂಪತಿಗಳು ಕೂಡಲೇ ನಗರದ ನೇತ್ರಜ್ಯೋತಿ ಕಣ್ಣಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪಾಲಕರ ಪರವಾನಿಗೆಯೊಂದಿಗೆ ಬಾಲಕಿಯ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿ ಒಳಗಿದ್ದ ಕಟ್ಟಿಗೆ ತುಂಡನ್ನು ಹೊರಗೆ ತೆಗೆದು ಪುನಹ ಕಣ್ಣು ಗುಡ್ಡೆಯನ್ನು ಅದೇ ಸ್ಥಳಲ್ಲಿಸಿರಿ ಹೊಲಿಗೆ ಹಾಕುವ ಮೂಲಕ ಯಶಸ್ವಿ ಶಸ್ತçಚಿಕಿತ್ಸೆ ನಡೆಸಿ ಮುಂದೆ ಎರಡು ಕಣ್ಣು ಕಳೆದುಕೊಂಡು ಅಂಧತ್ವಕ್ಕೊಳಗಾಗುತ್ತಿದ್ದ ಬಾಲಕಿ ಧನುಭಾಯಿ ಕಣ್ಣುಗಳನ್ನು ಸಂರಕ್ಷಣೆ ಮಾಡಿದ್ದಾರೆ.
ಮಕ್ಕಳ ಬಗ್ಗೆ ಪಾಲಕರು ಜಾಗೃತಿ ವಹಿಸಬೇಕು:ಮಕ್ಕಳ ಪ್ರತಿ ಚಲನವಲನವನ್ನು ಪಾಲಕರು ಎಚ್ಚರಿಕೆಯಿಂದ ಗಮನಿಸಬೇಕು. ವಿರೂಪಾಪೂರಗಡ್ಡಿ ಗ್ರಾಮದ ಧನುಬಾಯಿ ಎಡಗಣ್ಣಿಗೆ ಕಟ್ಟಿಗೆ ಬಡಿದ ಪರಿಣಾಮ ಕಣ್ಣುಗುಡ್ಡೆ ಹೊರಗೆ ಬಂದಿತ್ತು. ಪಾಲಕರು ಕೂಡಲೇ ಆಗಮಿಸಿದ್ದರಿಂದ ಸೂಕ್ತ ಶಸ್ತçಚಿಕಿತ್ಸೆ ಮೂಲಕ ಕಟ್ಟಿಗೆ ಚೂರನ್ನು ಹೊರಗೆ ತೆಗೆದು ಮುಂದೆ ಎರಡು ಕಣ್ಣಿನ ದೃಷ್ಠಿದೋಷವಾಗುವುದನ್ನು ತಡೆಯಲಾಗಿದೆ. ಮಕ್ಕಳ ವಯಸ್ಸಿನಲ್ಲಿ ಇಂತಹ ಅನಾಹುತಗಳಾಗುವುದು ಸಾಮಾನ್ಯ ಕೂಡಲೇ ತಜ್ಞ ನೇತ್ರ ವೈದ್ಯರನ್ನು ಸಂಪರ್ಕಿಸಬೇಕೆಂದು ನೇತ್ರ ವೈದ್ಯ ಡಾ.ಮಹಾಂತೇಶ ಪಟ್ಟಣಶೆಟ್ಟಿ ಮಾಹಿತಿ ನೀಡಿದ್ದಾರೆ.

ನಗರಸಭೆಯಆಸ್ತಿಗಳನ್ನುವಶಪಡಿಸಿಕೊಳ್ಳಬೇಕೆಂದು ಒತ್ತಾಯಿಸಿ ಎ ಐ ಟಿ ಯು,ಸಿ ತಾಲೂಕ ಸಮಿತಿಯಿಂದಪ್ರತಿಭಟನೆ

Protest by AITU, C Taluk Committee demanding confiscation of municipal properties

ಗಂಗಾವತಿ 14, ಕೋಟ್ಯಾಂತರ ರೂಪಾಯಿ ಮೌಲ್ಯದ ನಗರ ಸಭೆಗೆ ಸಂಬಂಧಿಸಿದ ಆಸ್ತಿಗಳನ್ನು ಕೆಲವು ಪಟ್ಟ ಭದ್ರ ಹಿತಾಸಕ್ತಿಗಳು ವಶಪಡಿಸಿಕೊಂಡಿದ್ದು ಅವುಗಳನ್ನು ಕೆಲವು ಗೊಳಿಸುವುದರ ಮೂಲಕ ನಗರ ಸಭೆ, ಕಂದಾಯ ಇಲಾಖೆ ಹಾಗೂ ಮಾನ್ಯ ಜಿಲ್ಲಾಧಿಕಾರಿಗಳು ಮುಂದಾಗಬೇಕೆಂದು, ಒತ್ತಾಯಿಸಿ ಎ ಐ ಟಿ ಯುಸಿ ತಾಲೂಕ ಸಮಿತಿಯ ನೇತೃತ್ವದಲ್ಲಿ ಗುರುವಾರದಂದು ಶ್ರೀ ಕೃಷ್ಣದೇವರಾಯ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು, ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಅಧ್ಯಕ್ಷ ಹುಲುಗಪ್ಪ ಮಾತನಾಡಿ ನಗರಸಭೆಯ ವ್ಯಾಪ್ತಿಯ ಸರ್ವೇ ನಂಬರ್ 202, ಪಹ ಣಿ ಯಲ್ಲಿರುವಂತೆ ನಗರ ಸಭೆಯ ಆಸ್ತಿಯಾಗಿದ್ದು ಇದರ ಬಗ್ಗೆ ಸಮರ್ಪಕವಾಗಿ ಪೌರಾಯುಕ್ತರು ಕೊಪ್ಪಳದ ಸಹಾಯಕ ಆಯುಕ್ತರಿಗೆ ಮಾಹಿತಿಯನ್ನು ನೀಡದೆ ದಾರಿ ತಪ್ಪಿಸುವ ಕೆಲಸ ಮಾಡುವುದರ ಜೊತೆಗೆ ಬಂಡವಾಳ ಶಾಹಿಗಳ ಪರ ನಿಂತಿರುವುದು ಸಮಿತಿ ತೀವ್ರವಾಗಿ ಖಂಡಿಸುತ್ತದೆ, ಈ ಹಿಂದಿನಿಂದಲೂ ಬಂದಂತಹ ಅಧಿಕಾರಿ ವರ್ಗದವರು ನಗರಸಭೆಯ ಆಸ್ತಿಗಳನ್ನು ರಕ್ಷಣೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿ ಪಟ್ಟ ಭದ್ರ ಹಿತಾಸಕ್ತಿಗಳಿಗೆ ಮಣಿ ಹಾಕುತ್ತಿದ್ದಾರೆ, ಮೇಲಿನ ಸರ್ವೆ ನಂಬರ್ ಒಂದೇ ಅಲ್ಲ ಇಂತಹ ಹಲವಾರು ನಗರ ಸಭೆಯv ಆಸ್ತಿಯನ್ನು ತಮ್ಮ ಇಲಾಖೆಗೆ ತೆಗೆದುಕೊಳ್ಳುವಲ್ಲಿ ಹಿಂದೇಟು ಹಾಕುತ್ತಿರುವುದು, ದೊಡ್ಡ ದುರಂತವಾಗಿದೆ,, ನಗರದಲ್ಲಿ ಸಾಕಷ್ಟು ಕೂಲಿಕಾರರಿಗೆ ನಿವೇಶನ ಇಲ್ಲ ಸರ್ಕಾರದಿಂದ ಬರಬಹುದಾದ ಸೌಲಭ್ಯಗಳು ತಲುಪುತ್ತಿಲ್ಲ,ಇಂತಹ ಸಂದರ್ಭದಲ್ಲಿ ಕೋಟ್ಯಾಂತರ ಮೌಲ್ಯದ ಆಸ್ತಿಗಳನ್ನು ಖೋ ಟ್ಟಿ ದಾಖಲೆ ಸೃಷ್ಟಿಸಿ, ಫ ರ ಬಾರೆ ಮಾಡುವ ಕೆಲಸ ನಿಲ್ಲಿಸಬೇಕು, ಅದು ಇನಾಂ ಭೂಮಿ ಆಗಿರಬಹುದು, ಕಂದಾಯ ವ್ಯಾಪ್ತಿ ಆಗಿರಬಹುದು, ನಗರ ಸಭೆ ಆಗಿರಬಹುದು, ಇವುಗಳನ್ನು ರಕ್ಷಣೆ ಮಾಡುವುದರ ಮೂಲಕ ಸಂಬಂಧಿಸಿದ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯಪ್ರವೃತ್ತರಾಗಬೇಕೆಂದು ತಿಳಿಸಿ ಮನವಿ ಪತ್ರ ಸಲ್ಲಿಸಿದರು ಈ ಸಮಿತಿಯ ಜಿಲ್ಲಾ ಕಾರ್ಯದರ್ಶಿ ತಿಮ್ಮಣ್ಣ ಅಖಿಲ ಕರ್ನಾಟಕ ಕಿಸಾನ್ ರೈತ ಸಂಘದ ಲಕ್ಷ್ಮಣ್ ಅಕ್ಷರ ದಾಸೋಹ ಸಮಿತಿಯ ಜಿಲ್ಲಾ ಅಧ್ಯಕ್ಷ ಸುನಿತಾ, ಗಂಗಮ್ಮ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ನಾಗೇಶ್ ಭೀಮಣ್ಣ ಸೇರಿದಂತೆ ಅಪಾರ ಕಾರ್ಯಕರ್ತರು ಪಾಲ್ಗೊಂಡಿದ್ದರು

ಕಸವಿಲೇವಾರಿಪ್ರತಿಯೊಬ್ಬರ ಜವಾಬ್ದಾರಿ-ಕುಷ್ಟಗಿ ತಾಪಂ ಸಹಾಯಕ ನಿರ್ದೇಶಕರು,ಸಂಪನ್ಮೂಲವ್ಯಕ್ತಿಗಳಾದಹನುಮಂತಗೌಡ ಪೊಲೀಸ್ ಪಾಟೀಲ್ ಹೇಳಿಕೆ

Garbage disposal is everyone’s responsibility- Kushtagi Tapam Assistant Director, Resource Persons Hanumantha Gowda Police Patil Statement

ಗಂಗಾವತಿ : ತಾಲೂಕು ಪಂಚಾಯತಿ ಮಂಥನ ಸಭಾಂಗಣದಲ್ಲಿ ತಾಲೂಕು ಪಂಚಾಯತಿ ಗಂಗಾವತಿ, ಕನಕಗಿರಿ, ಕಾರಟಗಿ ವತಿಯಿಂದ ಸ್ವಚ್ಛ ಭಾರತ್ ಮಿಷನ್(ಗ್ರಾಮೀಣ) ಯೋಜನೆಯಡಿ ಆಯೋಜಿಸಿದ್ದ ಘನ ತ್ಯಾಜ್ಯ ನಿರ್ವಹಣೆಯ ಪ್ರಮಾಣಿತ ಕಾರ್ಯಾಚರಣೆಯ ವಿಧಾನ ಹಾಗೂ ಮೇಲುಸ್ತುವಾರಿ ಸಮಿತಿ ತರಬೇತಿ ಕಾರ್ಯಾಗಾರಕ್ಕೆ ತಾ.ಪಂ ಸಹಾಯಕ ನಿರ್ದೇಶಕರಾದ ಮಹಾಂತಗೌಡ ಪಾಟೀಲ್ ಅವರು ಗುರುವಾರ ಚಾಲನೆ ನೀಡಿದರು.

ಕುಷ್ಟಗಿ ತಾಪಂ ಸಹಾಯಕ ನಿರ್ದೇಶಕರು ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಹನುಮಂತಗೌಡ ಪೊಲೀಸ್ ಪಾಟೀಲ್ ಅವರು ಮಾತನಾಡಿ, ಘನ ತ್ಯಾಜ್ಯ ವಿಲೇವಾರಿಯ ಮೇಲುಸ್ತುವಾರಿ ಸಮಿತಿಯ ಜವಾಬ್ದಾರಿ ಹಾಗೂ ಸ್ವಚ್ಛ ಸಂಕೀರ್ಣ ಘಟಕದ ಸರಿಯಾದ ನಿರ್ವಹಣೆಗೆ ಗ್ರಾಮ ಪಂಚಾಯತ ಹಾಗೂ ಜಿಪಿಎಲ್ ಎಫ್ ಒಕ್ಕೂಟಗಳ ನಡುವೆ ಸಹಭಾಗಿತ್ವ ಬಹು ಮುಖ್ಯವಾಗಿದೆ. ಗ್ರಾಮ ಪಂಚಾಯತಗಳ ಅಧ್ಯಕ್ಷರು ಹಾಗೂ ಅಧಿಕಾರಿಗಳು ಮಹಿಳಾ ಒಕ್ಕೂಟಕ್ಕೆ ವಾಹನ ಒದಗಿಸಬೇಕು ಹಾಗೂ ವಿಂಗಡಣೆ ಕುರಿತು ಮಾರ್ಗದರ್ಶನ ಮಾಡಬೇಕು. ಸರಕಾರದ ಆದೇಶದ ಪಾಲನೆ ಮಾಡುವ ಕುರಿತು ಮಾಹಿತಿ ನೀಡಿದರು.

ಮನೆಯ ಹಂತದಲ್ಲಿಯೇ ಕಸದ ವಿಂಗಡಣೆ ಮಾಡಿ ಕೊಡುವಂತೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಕಸ ವಿಲೇವಾರಿ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಎಲ್ಲರ ಸಹಕಾರ ತುಂಬಾ ಮುಖ್ಯ ಎಂದರು.

ಕೊಪ್ಪಳ ತಾಪಂ ಸಹಾಯಕ ನಿರ್ದೇಶಕರು ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಮಹೇಶ್ ಎಚ್, ಜಿ.ಪಂ. ಎಸ್ ಬಿಎಂ ಸಮಾಲೋಚಕರಾದ ರಾಮಣ್ಣ, ಬಸಮ್ಮ ಅವರು ಘನತ್ಯಾಜ್ಯ ವಿಲೇವಾರಿ ಘಟಕದ ನಿರ್ವಹಣೆ ಹಾಗೂ ಸ್ವಚ್ಛ ವಾಹಿನಿಗಳ ಸದ್ಬಳಕೆ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಕನಕಗಿರಿ ತಾಪಂ ಸಹಾಯಕ ನಿರ್ದೇಶಕರಾದ ವೀರಣ್ಣ ನಕ್ರಳ್ಳಿ, ಗಂಗಾವತಿ, ಕಾರಟಗಿ, ಕನಕಗಿರಿ ತಾಲೂಕಿನ ಎಲ್ಲ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಗ್ರಾಪಂ ಅಧ್ಯಕ್ಷರು, ತಾಪಂ ವಿಷಯ ನಿರ್ವಾಹಕರು, ತಾಪಂ ಸಿಬ್ಬಂದಿಗಳು, ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.

ವಿಜಯನಗರ: ಔಷಧ ಪರೀಕ್ಷಕರಿಂದ ಪೊಲೀಸ್ ಠಾಣೆಗೆ ದೂರು.

Vizianagaram: Complaint from drug tester to police station.

ವಿಜಯನಗರ ಜಿಲ್ಲೆ:(ಹೊಸಪೇಟೆ) ಬಳ್ಳಾರಿ ವಿಭಾಗದ ತನಿಖಾ ದಳದ ಮತ್ತು ಬಳ್ಳಾರಿ ವೃತ್ತದ ಸಹಾಯಕ ಔಷಧ ನಿಯಂತ್ರಕರ ಕಚೇರಿ-2 ರ ಔಷಧ ಪರಿವೀಕ್ಷಕ ಸಚಿನ್ ತಮ್ಮ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಕಾರಣಕ್ಕಾಗಿ ನಕಲಿ ವೈಧ್ಯನೊಬ್ಬನ ಮೇಲೆ ಎಫ಼್.ಐ.ಆರ್. ದಾಖಲಿಸಿದ್ದಾರೆ.

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹುಡೆಮ್ ಗ್ರಾಮದಲ್ಲಿ ನಕಲಿ ವೈಧ್ಯ ನಿಪುಣ ಎಂಬಾತ ನಕಲಿ ವೈದ್ಯಕೀಯದ ಜೊತೆಗೆ ಅಲೋಪತಿ ಔಷಧ ಮಾರಾಟ ಮಾಡುತ್ತಿದ್ದಾನೆ ಎಂಬ ದೂರಿನ ಹಿನ್ನೆಲೆಯಲ್ಲಿ ತನಿಖೆಗೆ ಹೋದಾಗ ನಿಪುಣ ಎಂಬ ನಕಲಿ ವೈಧ್ಯ, ಮತ್ತಿಬ್ಬರ ಜೊತೆ ಸೇರಿ ಕರ್ತವ್ಯಕ್ಕೆ ಔಷಧ ಪರಿವೀಕ್ಷಕರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ.

ಈ ಬಗ್ಗೆ ದಿನಾಂಕ:09-09-2023 ರಂದು ಜಿಲ್ಲೆಯ ಪೋಲೀಸ್ ವರಿಷ್ಠಾಧಿಕಾರಿಗೆ ನೇರವಾಗಿ ದೂರು ಸಲ್ಲಿಸಿದ ಹಿನ್ನೆಯಲ್ಲಿ ಹೊಸಳ್ಳಿ ಗ್ರಾಮದ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಆರೋಪಿತನ ಮೇಲೆ ಐ.ಪಿ.ಸಿ.ಸೆಕ್ಷನ್ 1860
(Us 34,353,114 ಪ್ರಕಾರ ಎಫ಼್.ಐ.ಆರ್.(200/2023) ದಾಖಲಿಸಿಕೊಂಡ ಪೋಲೀಸರು ತನಿಖೆ ನಡೆಸಿದ್ದಾರೆ.

ಅನಧಿಕೃತ ಮಧ್ಯದ ಅಂಗಡಿಗಳ ತೆರಿವಿಗೆ,, ಹಾಗೂ, ಎಂ ಅರಪಿ, ಗಿಂತ ಹೆಚ್ಚಿನ ದರದಲ್ಲಿ ಮಾರಾಟ ತಡೆಯಲು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮನವಿ,

Karnataka Dalit Sangharsh Committee appeals to tax unauthorized middlemen shops, and to stop sales at rates higher than MPA.

ಗಂಗಾವತಿ:13, ಗಂಗಾವತಿ ಕಾರ್ಟಿಗಿ ಹಾಗೂ ಕನಕಗಿರಿ, ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ, ಅನಧಿಕೃತ ಮಧ್ಯ ಮಾರಾಟ, ಹೆಗ್ಗಿಲ್ಲದೆ ಸಾಗುತ್ತಿದೆ, ಕಿರಾಣಿಯಲ್ಲಿ ಪಾನ್ ಬೇಡ ಅಂಗಡಿ, ಕಡೆಗಳಲ್ಲಿ ಅನಧಿಕೃತ ಮಧ್ಯ ಮಾರಾಟ ಜರುಗುತ್ತಿದ್ದು ಸಂಪೂರ್ಣ ಕಡಿವಾಣ ಹಾಕಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹಂಪೆಶ್ ಹರಿಗೂಲ ತಿಳಿಸಿದ ರು, ಪದ್ಮಾವತಿ ಅಬಕಾರಿ ವೀಕ್ಷಕರ ಕಾರ್ಯದಲ್ಲಿ ಮನ ವಿ ಪತ್ರ ಸಲ್ಲಿಸಿದ ಬಳಿಕ ಮಾತನಾಡಿ, ಇದರಿಂದ ಗ್ರಾಮಾಂತರ ಪ್ರದೇಶಗಳಲ್ಲಿ, ವಿದ್ಯಾರ್ಥಿಗಳು ರೈತರು, ಕುಡಿತದ ಚಟಕ್ಕೆ ದಾಸರಾಗುತ್ತಿದ್ದು, ಮನೆ ಸೇರಿದಂತೆ ಗ್ರಾಮಗಳಲ್ಲಿ ಅಶಾಂತಿಗೆ ಕಾರಣವಾಗುತ್ತದೆ, ಇದರೊಂದಿಗೆ ಸರ್ಕಾರ ನಿಗದಿಪಡಿಸಿದ ಎಂ ಆರ್ ಪಿ ದರಗಳಿಗಿಂತ 25 ರಿಂದ 50 ರೂಪಾಯಿಗಳ ಹೆಚ್ಚಳವನ್ನು ಮಧ್ಯದ ಪರವಾನಿಗೆ ಹೊಂದಿದ ಮಾಲೀಕರು ಪಡೆದುಕೊಳ್ಳುತ್ತಿದ್ದು ಇದನ್ನು ನಿಯಂತ್ರಿಸಬೇಕು, ಮಧ್ಯ ಮಾರಾಟವನ್ನು ಸಂಪೂರ್ಣವಾಗಿ ಕಡಿವಾಣ ಹಾಕಬೇಕೆಂದು ಮನವಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು ಪರಶುರಾಮ್ ಕೆರೆಹಳ್ಳಿ ಹನುಮಂತಪ್ಪ ನಾಯಕ್ ಯಮನೂರಪ್ಪ ನಾಯಕ್ ಕೆ ವೆಂಕಟೇಶ್ ಅಹಮದ್ ಮೇಸ್ತ್ರಿ, ನೂರ್ ಮೊಹಮ್ಮದ್ ಇತರರು ಉಪಸ್ಥಿತರಿದ್ದರು