ಹನೂರುತಾಲ್ಲೋಕಿನಾದ್ಯಂತ ವಿವಿದ ಗ್ರಾಮ ಪಂಚಾಯಿತಿಗಳ ಅಧ್ಯಕರು ಹಾಗೂ ಉಪಾಧ್ಯಕ್ಷರುಗಳ ಆಯ್ಕೆ
Election of presidents and vice-presidents of various gram panchayats across Hanur taluk.





ವರದಿ :ಬಂಗಾರಪ್ಪ ಸಿ ಹನೂರು .
ಹನೂರು: ಕ್ಷೇತ್ರಾದ್ಯಂತ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆ ಮಾಡಲಾಯಿತು .
ಅವುಗಳಲ್ಲಿನ

ರಾಮಪುರ ಗ್ರಾಮ ಪಂಚಾಯಿತಿಯಲ್ಲಿ ಕಾಂಗ್ರೇಸ್ ಬೆಂಬಲಿತ ರವಿ ಅಧ್ಯಕ್ಷರಾಗಿ ಹಾಗೂ ರಾಧ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

ಶೇಟ್ಟಳ್ಳಿ ಪಂಚಾಯತಿಯಲ್ಲಿ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತರಾಗಿ ರೂಪ ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತರಾಗಿ ಸಿದ್ದರಾಜು ಆಯ್ಕೆಯಾದರು.

ದಿನ್ನಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕಾಂಗ್ರೇಸ್ ಬೆಂಬಲಿತ ಪಾರ್ವತಿ ಬಾಯಿ ಅಧ್ಯಕ್ಷೆಯಾಗಿ ಹಾಗೂ ಸೋಮಶೇಖರ್ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು .

ಎಲ್ಲೆಮಾಳ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಮಲಮ್ಮ ಸುರೇಶ್ . ಹಾಗೂ ಉಪಾದ್ಯಕ್ಷರಾಗಿ ಮಹದೇವಪ್ಪ ಆಯ್ಕೆಯಾದರು .

ಚಿಕ್ಕಮಾಲಪುರ ಗ್ರಾಮ ಪಂಚಾಯಿತಿಯಲ್ಲಿ ಕಾಂಗ್ರೇಸ್ ಬೆಂಬಲಿತ ಅಧ್ಯಕ್ಷೆಯಾಗಿ ಚಾಮಮ್ಮ ಹಾಗೂ ಉಪಾಧ್ಯಕ್ಷರಾಗಿ ಚನ್ನಯ್ಯ ಆಯ್ಕೆಯಾದರು ,

ತೆಳ್ಳನೂರು ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷರಾಗಿ
ಕೃಷ್ಣವೇಣಿ ಉಪಾಧ್ಯಕ್ಷರಾಗಿ ಕೃಷ್ಣಪ್ರಸಾದ್ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮ ಆಯಾಯ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು , ಚುನಾವಣಾ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಸಾರ್ವಜನಿಕರು ಸೆರಿದಂತೆ ಇನ್ನಿತರರು ಹಾಜರಿದ್ದರು.

ಕಾರ್ಗಿಲ್ ವಿಜಯ ದೇಶವಾಸಿಗಳಿಗೆ ಪ್ರೇರಣೆ: ನಾಗರಾಜ ಗುತ್ತೇದಾರ
Kargil victory inspires compatriots: Nagaraja Guttedar.

ಗಂಗಾವತಿ: ಗಂಗಾವತಿಯ ನ್ಯಾಯವಾದಿಗಳಾದ ನಾಗರಾಜ ಗುತ್ತೇದಾರರವರು ಕಾರ್ಗಿಲ್ ವಿಜಯೋತ್ಸವ ದೇಶವಾಸಿಗಳಲ್ಲಿ ದೇಶಪ್ರೇಮದ ಪ್ರೇರಣೆಯನ್ನು ಹುಟ್ಟುಹಾಕುವಂತಹದ್ದಾಗಿದೆ. ೫೨೭ ಜನ ವೀರಯೋಧರು ತಮ್ಮ ತ್ಯಾಗ, ಬಲಿದಾನಗಳ ಮೂಲಕ ಪಾಕ್ ಆಕ್ರಮಿತ ಕಾಶ್ಮೀರವನ್ನು ಬಿಡುಗಡೆಗೊಳಿಸಿ, ತಾಯಿ ಭಾರತ ಮಾತೆಗೆ ತಮ್ಮ ಆತ್ಮಾರ್ಪಣೆಯನ್ನು ಮಾಡುವ ಮೂಲಕ ದೇಶದ ಸಮಸ್ತರಿಗೂ ಆದರ್ಶಪ್ರಾಯರಾಗಿದ್ದಾರೆ. ಅವರ ದೇಶಪ್ರೇಮ ದೇಶವಾಸಿಗಳಿಗೆ ಮಾದರಿಯಾದದ್ದು ಎಂದು ಅಭಿಪ್ರಾಯಪಟ್ಟರು.
ಅವರು ದಿನಾಂಕ: ೨೬.೦೭.೨೦೨೩ ರಂದು ಟಿ.ಎಂ.ಎ.ಇ ಬಿ.ಎಡ್ ಮಹಾವಿದ್ಯಾಲಯದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತು ನೇತೃತ್ವದಲ್ಲಿ ಕಾರ್ಗಿಲ್ ವಿಜಯ ದಿವಸ್ ದಿನಾಚರಣೆಯಲ್ಲಿ ಪ್ರಧಾನ ಭಾಷಣಕಾರರಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ೧೩೬೩ ಕ್ಕೂ ಹೆಚ್ಚು ಜನ ಸೈನಿಕರು, ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಗಾಯಾಳುಗಳಾದರು. ರಾಜ್ಯದ ೧೩ ವೀರಯೋಧರು ಅಮರರಾದರು. ಹಾಗಾಗಿ ಕಾರ್ಗಿಲ್ ವಿಜಯ ದಿವಸ್ ಕೇವಲ ಒಂದು ಯುದ್ಧದ ವಿಜಯದ ದಿನವಾಗದೆ ದೇಶದ ಸಮಸ್ತ ವಿದ್ಯಾರ್ಥಿಗಳಿಗೆ, ನಾಗರಿಕರಿಗೆ, ಯುವಕರಿಗೆ ದೇಶಪ್ರೇಮದ ದೊಡ್ಡ ಪಾಠವೆಂದರೆ ಅದು ತಪ್ಪಲ್ಲ, ದೇಶದ ಗಡಿಯನ್ನು ಕಾಯುವ ವೀರಯೋಧರ ನಿಷ್ಕಲ್ಮಶ ತ್ಯಾಗ, ಹೋರಾಟ, ಶ್ರದ್ಧಾಪೂರ್ಣವಾದ ಕಾರ್ಯಕ್ಷಮತೆಯಿಂದಲೇ ಭಾರತ ಸದೃಢವಾಗಿ ಇರುವುದಕ್ಕೆ ಸಾಧ್ಯವಾಗಿದೆ. ಇಂತಹ ಸೈನಿಕರ ಸಂತತಿ ಸಾವಿರವಾಗಲಿ, ಮುಂದಿನ ನಮ್ಮ ಯುವ ಪೀಳಿಗೆ ದೇಶಪ್ರೇಮದ ಕಡೆಗೆ ಸೈನಿಕ ವೃತ್ತಿಯ ಕಡೆಗೆ ತಮ್ಮ ಮನಸ್ಸು ಮತ್ತು ದೇಹವನ್ನು ಹದಗೊಳಿಸಿಕೊಳ್ಳಲಿ. ಆ ಮೂಲಕ ದೇಶಸೇವೆ ಮಾಡುವಂತಹ ಕಾರ್ಯ ಅವರಿಗೆ ಒದಗಲಿ ಎಂದು ಆಶಿಸುವುದರ ಮೂಲಕ ಕಾರ್ಗಿಲ್ ಯುದ್ಧದಲ್ಲಿ ಮಡಿದ ಎಲ್ಲ ವೀರಯೋಧರನ್ನು ಸ್ಮರಿಸುವುದರ ಜೊತೆಗೆ ಆ ಸಂದರ್ಭದಲ್ಲಿ ಸೈನಿಕರು ಕುಟುಂಬಗಳು ಮೆರೆದ ತ್ಯಾಗವನ್ನು, ಧೈರ್ಯವನ್ನು ಶ್ಲಾಘಿಸಿದರು.
ಈ ಕಾರ್ಯಕ್ರಮದಲ್ಲಿ ಎ.ಬಿ.ವಿ.ಪಿ ನಗರ ಕಾರ್ಯದರ್ಶಿ ಅಭಿಷೇಕ ಹಿರೇಮಠ, ಸಂಸ್ಥೆಯ ಪ್ರಾಂಶುಪಾಲರಾದ ಕೆ.ಸಿ ಕುಲಕರ್ಣಿ, ಗವಿಸಿದ್ಧೇಶ್ವರ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಶರಣಬಸವ ಬಿಳಿಎಲಿ, ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರಾದ ಕಿರಣ, ಗೌತಮ, ಭೀಮಾಶಂಕರ, ಸುರೇಂದ್ರ, ಶರಣು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿದ್ಯಾರ್ಥಿಗಳು ಸಾಧನೆಯ ಮೂಲಕ ಪಾಲಕರ-ಶಿಕ್ಷಕರ ಕನಸು ನನಸು ಮಾಡಬೇಕು
Students should fulfill the parents-teachers dream through achievement


ಗಂಗಾವತಿ: ವಿದ್ಯಾರ್ಥಿಗಳು ಸತತ ಪರಿಶ್ರಮ ಮತ್ತು ಅಧ್ಯಾಯನದ ಮೂಲಕ ಜ್ಞಾನ ಸಂಪಾದಿಸಿ ಕೊಂಡು ಪಾಲಕರ-ಶಿಕ್ಷಕರ ಕನಸು ನನಸು ಮಾಡಬೇಕೆಂದು ಸಂಕಲ್ಪ ವಿದ್ಯಾಸಂಸ್ಥೆಯ ಅಧ್ಯಕ್ಷ ಹೇಮಂತರಾಜ ಕಲ್ಮಂಗಿ ಹೇಳಿದರು.
ಅವರು ನಗರದ ಶ್ರೀಕೃಷ್ಣದೇವರಾಯ ಭವನದಲ್ಲಿ ಸಂಕಲ್ಪ ಪಿಯು ಕಾಲೇಜಿನ ವಿದ್ಯಾರ್ಥಿ ಚಟುವಟಿಕೆಗಳಿಗೆ ಚಾಲನೆ ಮತ್ತು ದ್ವಿತಿಯ ಪಿಯುಸಿಯಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಂಕಲ್ಪ ವಿದ್ಯಾ ಸಂಸ್ಥೆಯ ಪಿಯುಸಿ ಮತ್ತು ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅತ್ಯುತ್ತಮ ಅಂಕ ಪಡೆದು ವಿವಿಧ ಇಲಾಖೆಗಳಲ್ಲಿ ನೌಕರಿ ಪಡೆದುಕೊಂಡಿದ್ದು ಇಲ್ಲಿಯ ಪ್ರಾಧ್ಯಾಪಕರು ಮತ್ತು ಉಪನ್ಯಾಸಕರ ಶ್ರಮದ ಫಲವಾಗಿದೆ ಎಂದರು. ಎಂಎನ್‌ಎಂ ಕಾಲೇಜು ಪ್ರಾಚಾರ್ಯ ಟಿ.ಶಾಂತಪ್ಪ ಮಾತನಾಡಿ, ವಿದ್ಯಾರ್ಥಿಗಳು ಸದೃಢ ಆರೋಗ್ಯ, ಮನಸ್ಸಿನ ಮೂಲಕ ಶ್ರದ್ಧೆಯಿಂದ ಪರಿಶ್ರಮಪಟ್ಟು ಓದುವ ಮೂಲಕ ಗುರಿ ಸಾಧನೆ ಮಾಡಬೇಕೆಂದರು. ಪ್ರಾಧ್ಯಾಪಕ ಅಮೀತಕುಮಾರ ಕಾಲೇಜು ವಿದ್ಯಾರ್ಥಿ ಒಕ್ಕೂಟದ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿ, ವಿದ್ಯಾರ್ಥಿಗಳು ಗ್ರಂಥಾಲಯ ಮತ್ತು ಅಧ್ಯಾಪಕರ ಮಾರ್ಗದರ್ಶನದಲ್ಲಿ ಓದುವ ಮೂಲಕ ಸಾಧನೆ ಮಾಡಬೇಕು. ಧನಾತ್ಮಕ ವಿಚಾರಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಮೊಬೈಲ್ ಬಳಕೆಯಿಂದ ಏಕಾಗ್ರತೆ ಕಡಿಮೆಯಾಗುತ್ತದೆ. ಆದ್ದರಿಂದ ಮೊಬೈಲ್ ಬಳಕೆ ಸೀಮಿತವಾಗಿಸುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಮಾಧ್ಯಮ ಆಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಕೆ.ನಿಂಗಜ್ಜ, ಸಮಾಜಕಲ್ಯಾಣ ಇಲಾಖೆ ಅಧಿಕಾರಿ ಶರಣಪ್ಪ ನಾಯಕ, ಅತೀ ಹೆಚ್ಚು ಅಂಕ ಪಡೆದ ಯಶವಂತ್ ಕುರಿ, ಶ್ರೀದೇವಿ ಸೇರಿ ಶಿಕ್ಷಣ, ಕಲಾ ಮತ್ತು ವಾಣಿಜ್ಯ ವಿಭಾಗದ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿತ ಹೇಮಂತರಾಜ ಕಲ್ಮಂಗಿ, ಮಲ್ಲಿಕಾರ್ಜುನ ಸಿಂಗನಾಳ, ಅಮೀತಕುಮಾರ, ಪ್ರಾಚಾರ್ಯರಾದ ಮಂಜುನಾಥ ಸ್ವಾಮಿ, ಬಸಪ್ಪ ಶಿರಿಗೇರಿ, ಶಾಂತಪ್ಪ ಸೇರಿ ವಿದ್ಯಾರ್ಥಿ ಒಕ್ಕೂಟದ ಪ್ರತಿನಿಧಿಗಳಿದ್ದರು.

ಕುರುಬರನ್ನು ಎಸ್ಟಿ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಸ್ವಾಗತ
Recommendation to the Center to add shepherds to ST is welcome


ಗಂಗಾವತಿ: ಕುರುಬ ಸಮಾಜವನ್ನು ಎಸ್ಟಿ ಸೇರ್ಪಡೆ ಮಾಡಲು ಹಿಂದಿನ ಬಿಜೆಪಿ ಸರಕಾರ ಸಿದ್ಧ ಮಾಡಿದ್ದ ವರದಿಯನ್ನು ಪ್ರಸ್ತುತ ಕಾಂಗ್ರೆಸ್ ಸರಕಾರ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿದ್ದನ್ನು ಸ್ವಾಗತಿಸುವ ಜತೆಗೆ ಕೇಂದ್ರ ಸರಕಾರ ಬೇಗನೆ ಎಸ್ಟಿ ಪಟ್ಟಿಗೆ ಕುರುಬ ಸಮಾಜವನ್ನು ಪರಿಗಣಿಸುವಂತೆ ಕುರುಬ ಸಮಾಜದ ಅಧ್ಯಕ್ಷ ವಿಠಲಾಪೂರ ಯಮನಪ್ಪ ಎಸ್ಟಿ ಹೋರಾಟ ಸಮಿತಿ ಅಧ್ಯಕ್ಷ ನವಲಿ ಯಮನಪ್ಪ ದಳಪತಿ ಮನವಿ ಮಾಡಿದ್ದಾರೆ.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಗಿನೆಲೆ ರೇವಣಸಿದ್ದೇಶ್ವರ ಸಂಸ್ಥಾನದ ಹಿರಿಯ ಮತ್ತು ಕಿರಿಯ ಸ್ವಾಮೀಜಿಗಳ ವಿಶೇಷ ಕಾಳಜಿ, ಸಮಾಜ ಬಾಂಧವರ ನಿರಂತರ ಹೋರಾಟದ ಫಲ, ಮಾಜಿ ಮಂತ್ರಿಗಳಾದ ಕೆ.ಎಸ್.ಈಶ್ವರಪ್ಪ, ಹೆಚ್.ಎಂ ರೇವಣ್ಣ ಹಾಗು ಮಾಜಿ ಸಂಸದ ಕೆ.ವಿರುಪಾಕ್ಷಪ್ಪ ಇವರ ಮುಂದಾಳತ್ವದಲ್ಲಿ ಕುರುಬ ಸಮಾಜ ಎಸ್ಟಿ ಸೇರ್ಪಡೆ ಕುರಿತು ನಿರಂತರ ಹೋರಾಟದ ಫಲವಾಗಿ ಹಿಂದಿನ ಬಿಜೆಪಿ ಸರಕಾರ ಅಗತ್ಯ ಕ್ರಮಕೈಗೊಂಡಿದ್ದು ಪ್ರಸ್ತುತ ಕುಲಶಾಸ್ತಿçÃಯ ಅಧ್ಯಾಯನ ಮಾಡಿ ಅಗತ್ಯ ದಾಖಲೆಗಳ ಸಮೇತ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿದ್ದು ಬೇಗನೆ ಕೇಂದ್ರ ಸರಕಾರ ವರದಿ ಸ್ಪಂದಿಸಿ ಕುರುಬರನ್ನು ಎಸ್ಟಿಗೆ ಸೇರ್ಪಡೆ ಮಾಡಬೇಕು. ಕುರುಬ ಸಮಾಜದಲ್ಲಿನ ಎಲ್ಲಾ ಸಮುದಾಯಗಳು, ರಾಜ್ಯದ ಎಲ್ಲ ಪ್ರಾಂತ್ಯದಲ್ಲಿರುವವರು ಬುಡಕಟ್ಟು ಜನಾಂಗದ ಸಂಸ್ಕೃತಿ ಹೊಂದಿದ್ದು, ಮೀಸಲಾತಿಗೆ ಹತ್ತಿರವಾದ ಸಮುದಾಯವೆಂದು ಕುಲಶಾಸ್ತಿçÃಯ ಅಧ್ಯಯನದಲ್ಲಿ ತಿಳಿಸಲಾಗಿದೆ, ಅಲೆಮಾರಿಗಳಾಗಿ ಕುರಿಗಳನ್ನು ಮೇಯಿಸುತ್ತಾ ಹೋಗುವ ನಮ್ಮ ಸಮುದಾಯ ಸಾಕಷ್ಟು ಕಷ್ಟದ ಜೀವನ ನಡೆಸುತ್ತಿದೆ ಕೇಂದ್ರ ಸರಕಾರ ಆದಷ್ಟು ಬೇಗ ಮೀಸಲಾತಿ ಒದಗಿಸುವ ಮೂಲಕ ಸಮಾಜದ ಪ್ರಗತಿಗೆ ಸಹಕಾರ ನೀಡಬೇಕು. ೧೮೭೧ ರಲ್ಲಿ ಇಂಗ್ಲೀಷ್ ಆಡಳಿತದ ಅವಧಿಯಲ್ಲಿ ಕುರುಬ ಸಮುದಾಯದ ಬುಡಕಟ್ಟು ಸಂAಪ್ರದಾಯ ಗಮನಿಸಿ ಎಸ್ಟಿ ಮೀಸಲಾತಿ ಕಲ್ಪಿಸಲಾಗಿತ್ತು. ೧೯೭೧ ವರೆಗೂ ಈ ಮೀಸಲಾತಿ ಇತ್ತು. ಕೆಲವು ಕಾರಣಕ್ಕಾಗಿ ರಾಜ್ಯದ ಕೆಲವು ಜಿಲ್ಲೆಗಳಿಗೆ ಕುರುಬರಿಗೆ ಎಸ್ಟಿ ಮೀಸಲು ಉಳಿಸಿ ಬಹುತೇಕ ಜಿಲ್ಲೆಗಳಲ್ಲಿ ತೆಗೆದುಹಾಕಲಾಗಿದೆ. ೧೯೮೬ ರಿಂದ ನಿರಂತರ ಹೋರಾಟದ ಫಲವಾಗಿ ಇದೀಗ ಕೇಂದ್ರಕ್ಕೆ ವರದಿ ಶಿಫಾರಸ್ಸಾಗಿದ್ದು ೨ಎ ಕೆಟಗರಿಯಲ್ಲಿರುವ ಜನಾಂಗದ ಮೀಸಲು ಜತೆಗೆ ಎಸ್ಟಿ ಕಲ್ಪಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಕುರುಬ ಸಮಾಜದ ಮುಖಂಡರಾದ ಯಮನುಪ್ಪ ವಿಠಲಾಪುರ, ನವಲಿ ಯಮನಪ್ಪ ದಳಪತಿ, ಸಣ್ಣಕ್ಕಿ ನೀಲಪ್ಪ, ದುರುಗಪ್ಪ ಮೋರಿ, ಡ್ಯಾಗಿ ರುದ್ರೇಶ, ಶಿವರಾಜ್ ಹೊಸಳ್ಳಿ, ತಿರುಕಪ್ಪ ಆನೆಗೊಂದಿ, ಶಿವಬಸಪ್ಪ, ವೆಂಕಟೇಶ್ ಸಿಂಗನಾಳ್ ಪುಂಡಗೌಡ, ನೀಲಕಂಠಪ್ಪ ಹೊಸಳ್ಳಿ ಇತರರಿದ್ದರು.