Petition of Sheep/Mc breeders to appoint Virupanna Kallur Navali to Karnataka State Sheep and Wool Development Corporation
ನವಲಿ: ಉತ್ತರ ಕರ್ನಾಟಕ ಭಾಗದ ಕುರಿಗಾಯಿಗಳ ಮತ್ತು ಸಾಕಾಣಿಕೆದಾರರ ಸಮಗ್ರ ಅಭಿವೃದ್ಧಿಯ ಹಿತ ದೃಷ್ಠಿಯಿಂದ ಮತ್ತು ರಾಜ್ಯ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಮೂಲ ಸಮಸ್ಯಗಳು ಹಾಗೂ ಅವುಗಳನ್ನು ಸಮಗ್ರವಾಗಿ ನಿರ್ವಹಿಸಬಲ್ಲ ಸೂಕ್ತ ವ್ಯಕ್ತಿಯನ್ನು ಕರ್ನಾಟಕ ಕುರಿ ಮತ್ತು ಉಣ್ಣೆ ನಿಗಮಕ್ಕೆ ಅಧ್ಯಕ್ಷರನ್ನಾಗಿ ನೆಮಕಮಾಡಲು ಚೆರ್ಚೆಗಳು ನೆಡೆದಿದ್ದು ಇದರಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಚಿವರಾದ ಶ್ರೀ ಶಿವರಾಜ್ ತಂಗಡಗಿಯವರ ಆಪ್ತವಲಯದಲ್ಲಿ ಮುಂಚುಣಿಯಿರುವ ಹಾಗೂ ಕಾಂಗ್ರೇಸ್ ಪಕ್ಷದ ಯುವ ನೇತಾರ ರೈತ ಹಾಗೂ ಜನಪರ ಕಾಳಜಿಯುಳ್ಳ ಮತ್ತು ಕುರಿ ಮತ್ತು ಉಣ್ಣೆ ಉತ್ಪಾಧಕರ ಸಹಕಾರ ಸಂಘಗಳ ಕ್ಷೇತ್ರದ ಬಗ್ಗೆ ತಿಳುವಳಿಕೆ ಹೊಂದಿರುವ ವಿರುಪಣ್ಣ ಕಲ್ಲೂರ ನವಲಿ ಇವರನ್ನು ಕರ್ನಾಟಕ ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮಕ್ಕೆ ಅಧ್ಯಕ್ಷರನ್ನಾಗಿ ನೆಮಕ ಮಾಡಬೇಕು ಎಂಬುದಾಗಿ ಕೇಳಿಬರುತ್ತಿದೆ, ಇದರಿಂದ ಜಾತ್ಯಾತಿತ ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಹಾಗೂ ಹಿಂದುಳಿದ ವರ್ಗಗಳ ಪರವಿರುವ ಸಚಿವಾರದ ಶಿವರಾಜ್ ತಂಗಡಿಗಿಯವರು ಒಬ್ಬ ಹಿಂದುಳಿದ ಸಮುದಾಯಗಳ ಯುವ ನೇತಾರ ಹಾಗೂ ಅಭಿವೃದ್ದಿ ಶೀಲ ವ್ಯಕ್ತಿ ವಿರುಪಣ್ಣ ಕಲ್ಲೂರ ನವಲಿ ಇವರನ್ನು ನೆಮಕ ಮಾಡುತ್ತಾರೆ ಎಂಬ ಭರವಸೆಗಳು ಕುರಿ/ಮೆಕೆ ಸಾಕಾಣಿಕೆದಾರರಲ್ಲಿ ಹಾಗೂ ಕುರಿ ಮತ್ತು ಉಣ್ಣೆ ಉತ್ಪಾಧಕರ ಸಹಕಾರ ಸಂಘದ ಸದಸ್ಯರು ನೀರಿಕ್ಷಿಸುತಿದ್ದಾರೆ.