ವರದಿ : ಪಂಚಯ್ಯ ಹಿರೇಮಠ,,,, ಕೊಪ್ಪಳ : (ಯಲಬುರ್ಗಾ) – ಯುವಕರು ತಮ್ಮ ಕಲಿಯುವ ವಯಸ್ಸಿನಲ್ಲಿ ದುಶ್ಚಟಗಳಿಗೆ ದಾಸರಾಗದೆ ಉತ್ತಮ ಆರೋಗ್ಯ ಹಾಗೂ ಶಿಕ್ಷಣದ ಕಡೆಗೆ ಗಮನ ಹರಿಸಬೇಕು ಎಂದು ಪಿಎಸ್ಐ ವಿಜಯ್ ಪ್ರತಾಪ್ ಹೇಳಿದರು. ಪಟ್ಟಣದ ಶ್ರೀ ಮಂಜುನಾಥ ಪಿಯುಸಿ ಕಾಲೇಜಿನಲ್ಲಿ ಪೋಲಿಸ್ ಇಲಾಖೆಯಿಂದ ಹಮ್ಮಿಕೊಂಡ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಜೂನ್ 26ನೇ ದಿನವನ್ನು ಮಾದಕ ವಸ್ತುಗಳ ದುರುಪಯೋಗ ಮತ್ತು …
Read More »ಕೊಲ್ಲಿನಾಗೇಶ್ವರರಾವ್ ಸರಕಾರಿಮಹಾವಿದ್ಯಾಲಯದಲ್ಲಿ ಪ್ರವೇಶಕ್ಕೆ ವಿದ್ಯಾರ್ಥಿಗಳನಿರಾಸಕ್ತಿ?
*ಪ್ರವೇಶ ಶುಲ್ಕ ಭರಿಸಲು ಹೋಗಬೇಕಿದೆ 5ಕಿ.ಮೀ.ದೂರದ ಬ್ಯಾಂಕಿಗೆ.*ಶುದ್ದಕುಡಿಯುವ ನೀರು ಸೇರಿ ಮಹಿಳಾಶೌಚಾಲಯದ ಕೊರತೆ*ಮುಗಿಯದ ಪದವಿ ಪ್ರವೇಶ ಆನ್ ಲೈನ್ ,ಆಫ್ ಲೈನ್ ಗೊಂದಲ.*ಬಸ್ ನಿಲ್ದಾಣದಿಂದ ಕಾಲೇಜಿಗೆ ಹೋಗಲು ಇಲ್ಲ ಬಸ್ ವ್ಯವಸ್ಥೆ.*ಸರಿಯಾಗಿ ನಡೆಯದ ಪಾಠಪ್ರವಚನ. ವಿಶೇಷ ವರದಿಗಂಗಾವತಿ: ಗ್ರಾಮೀಣ ಭಾಗದ ಮಕ್ಕಳು ಉನ್ನತ ವಿದ್ಯಾಭ್ಯಾಸ ಮಾಡಲು ರಾಜ್ಯ ಸರ್ಕಾರ ಪ್ರತಿ ಜಿಲ್ಲೆಗೆ ಒಂದು ವಿಶ್ವವಿದ್ಯಾಲಯ ಸ್ಥಾಪಿಸಿದೆ .ಅದರಂತೆ ತಾಲೂಕ ಮಟ್ಟದಲ್ಲಿರುವ ಸರ್ಕಾರಿ ಮಹಾವಿದ್ಯಾಲಯಗಳಲ್ಲಿ ಅತ್ಯುತ್ತಮವಾದ ಕೋರ್ಸ್ ಗಳನ್ನು ಆರಂಭಿಸುವ ಮೂಲಕ …
Read More »ಗ್ರಾಮೀಣ ಭಾಗದ ಕೃಷಿ ಸಖಿಯರಿಗೆ – ನೈಸರ್ಗಿಕ ಕೃಷಿ ಕಲಿಕೆ. ಗಂಗಾವತಿ: ಕೃಷಿ ಹಾಗೂ ಕುಟುಂಬ ಕಲ್ಯಾಣ ಮಂತ್ರಾಲಯ,
ನವದೆಹಲಿ ,ರಾಷ್ಟ್ರೀಯ ಕೃಷಿ ವಿಸ್ತರಣಾ ನಿರ್ವಹಣೆಯ ಸಂಸ್ಥೆ, ಹೈದರಾಬಾದ್, ಸಂಜೀವಿನಿ -ಕೆ.ಎಸ್.ಆರ್.ಎಲ್.ಪಿ.ಎಸ್. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಐ.ಸಿ.ಎ.ಆರ್.-ಕೃಷಿ ವಿಜ್ಞಾನ ಕೇಂದ್ರ ಗಂಗಾವತಿ, ಇವರ ಸಹಯೋಗದೊಂದಿಗೆ ಗಂಗಾವತಿ, ಕಾರಟಗಿ ಮತ್ತು ಕನಕಗಿರಿ ತಾಲೂಕಿನ ಪಂಚಾಯತಿಯಿಗೆ ಒಬ್ಬರಂತೆ ಇರುವ ಕೃಷಿ ಸಖಿಯರಿಗೆ ಐದು ದಿನಗಳ ಕಾಲ ನೈಸರ್ಗಿಕ ಕೃಷಿ ತರಬೇತಿ ಕಾರ್ಯಕ್ರಮವನ್ನು ಕೆ.ವಿ.ಕೆಯ ಗೃಹ ವಿಜ್ಞಾನಿಗಳಾದ ಡಾ.ಕವಿತಾ, ಕಾಮನೂರ ಗ್ರಾಮದ ಪ್ರಗತಿಪರ ರೈತರಾದ ಶ್ರೀಬಸಪ್ಪ ವಂಕಲಕುಂಟ ಇವರು ಉದ್ಘಾಟಿಸಿದರು.ಡಾ.ಕವಿತಾ, ಗೃಹ …
Read More »ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ನಿಗದಿಪಡಿಸಿರುವ ಶುಲ್ಕದವಿವರಪ್ರಕಟಿಸಲು ಜಿಲ್ಲಾಧಿಕಾರಿಗಳ ಸೂಚನೆ
ಕೊಪ್ಪಳ : ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ನಿಗದಿಪಡಿಸಿರುವ ಶುಲ್ಕದ ವಿವರ ಪ್ರಕಟಿಸಲು ಎಲ್ಲಾ ತಾಲ್ಲೂಕಿನ ವಲಯ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇರಿದಂತೆ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಸೂಚನೆ ನೀಡಿದ್ದಾರೆ.ಖಾಸಗಿ ಅನುದಾನರಹಿತ ಶಾಲೆಗಳಲ್ಲಿ 2024-25ನೇ ಶೈಕ್ಷಣಿಕ ಸಾಲಿಗೆ ವಿದ್ಯಾರ್ಥಿಗಳ ದಾಖಲಾತಿ ಮತ್ತು ಶುಲ್ಕ ವಸೂಲಾತಿ ಪ್ರಕ್ರಿಯೆ ಪ್ರಾರಂಭವಾಗಿರುತ್ತದೆ. ದಾಖಲಾತಿ ಪ್ರಕ್ರಿಯೆ, ದಾಖಲಾತಿ ಶುಲ್ಕ ಮತ್ತು ಇನ್ನಿತರೆ ಶುಲ್ಕವನ್ನು ಪಡೆಯುವ ಸಂಬಂಧ …
Read More »ಸಚಿವರಿಂದ ವಿವಿಧ ಅಭಿವೃದ್ಧಿಕಾಮಗಾರಿಗಳಿಗೆ ಚಾಲನೆ,,
ರಸ್ತೆಗಳ ಸುಧಾರಣೆ, ಶುದ್ಧಕುಡಿಯುವ ನೀರು ಪೂರೈಕೆಗೆ ಕ್ರಮ : ತಂಗಡಗಿ ಕನಕಗಿರಿ ತಾಲೂಕಿನ ಗ್ರಾಮಗಳು ಶೇಕಡಾ ನೂರರಷ್ಟು ಒಣ ಬೇಸಾಯ ಮತ್ತು ಗ್ರಾಮೀಣ ಪ್ರದೇಶದಿಂದ ಕೂಡಿದ್ದು, ರಸ್ತೆಗಳ ಸುಧಾರಣೆಗೆ ಮತ್ತು ಶುದ್ದ ಕುಡಿಯುವ ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ, ಹಿಂದುಳಿದ ವರ್ಗಗಳ ಕಲ್ಯಾಣ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ತಿಳಿಸಿದರು. ಸಣ್ಣ ನೀರಾವರಿ ಇಲಾಖೆಯಿಂದ ನಬಾರ್ಡ್ ಯೋಜನೆಯಲ್ಲಿ ಮಂಜೂರಾದ 8.50 ಕೋಟಿ …
Read More »ಸರ್ಕಾರಿ ನೌಕರರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಮನವಿ.
ವರದಿ : ಬಂಗಾರಪ್ಪ. ಸಿ .ಹನೂರು:ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-29ನೇ ಸಾಲಿನ ಅವಧಿಗೆ ಎಲ್ಲಾ ಹಂತದ ಚುನಾವಣಾ ಪ್ರಕ್ರಿಯೆಗಳನ್ನು ಕೈಗೊಳ್ಳಲು ಸಂಘದ ಬೈಲಾ ನಿಯಮ 47ರ ರೀತ್ಯಾ ಕರಡು ಮತದಾರರ ಪಟ್ಟಿ ಹೊರಡಿಸಲು ಸಂಘದ ಸದಸ್ಯರು ಹೆಸರು ನೋಂದಾಯಿಸುವಂತೆ ಹನೂರು ತಾಲೂಕು ಸರ್ಕಾರಿ ನೌಕರರ ಸಂಘ ಮನವಿ ಮಾಡಿದೆ. ಜೂನ್ 28ರ ಒಳಗೆ ತಾಲೂಕಿನ ಎಲ್ಲಾ ಇಲಾಖೆಗಳ ಕಚೇರಿಯಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದ …
Read More »ಹದೆಯ ಅರಿಯದ ಟೀನೇಜ್ ಸಮಯದಲ್ಲಿ ಮೊಬೈಲ್ ಬಳಕೆ ಎಚ್ಚರಿಕೆ ಅಗತ್ಯ : ಗೊಂಡಬಾಳ
ಕೊಪ್ಪಳ: ಶಿಕ್ಷಣ ಮುಂದುವರಿಯುವಿಕೆಗೆ ಮೊಬೈಲ್ ಮಿತವಾಗಿ ಬಳಸುವುದು ಬಹಳ ಮುಖ್ಯ, ಅದರಲ್ಲೂ ಹದೆಯ ಅರಿಯದ ಟೀನೇಜ್ ಸಮಯದಲ್ಲಿ ಮೊಬೈಲ್ ಬಳಕೆ ಎಚ್ಚರಿಕೆ ಅಗತ್ಯವಿದೆ ಎಂದು ಹಿರಿಯ ಪತ್ರಕರ್ತ ಮಂಜುನಾಥ ಜಿ. ಗೊಂಡಬಾಳ ಎಚ್ಚರಿಕೆ ನೀಡಿದರು. ಅವರು ಸ್ನೇಹ ಸಂಸ್ಥೆಯ ನೇತೃತ್ವದಲ್ಲಿ ಚಿಲ್ಡ್ರನ್ ಆಫ್ ಇಂಡಿಯಾ ಫೌಂಡೇಶನ್ ಸಹಯೋಗದಲ್ಲಿ ಕಿಶೋರಿ ನಾಯಕಿಯರಿಗೆ ಹದಿಹರೆಯದ ವಯಸ್ಸಿನಲ್ಲಿ ಆರೋಗ್ಯ ರಕ್ಷಣೆ ಮತ್ತು ಪೌಷ್ಟಿಕ ಆಹಾರ ಕುರಿತು ಎರಡು ದಿನಗಳ ವಿಶೇಷ ತರಬೇತಿಯನ್ನು ಶೋಭಾ’ಸ್ ಹೋಟೆಲ್ …
Read More »ನೀಟ್ ಪರೀಕ್ಷೆಯಲ್ಲಿ ಅಕ್ರಮ : ಉನ್ನತ ಮಟ್ಟದ ತನಿಖೆಗೆ ಎನ್.ಎಸ್.ಯು.ಐ ಆಗ್ರಹ
ಕೊಪ್ಪಳ: ನೀಟ್ ಪರೀಕ್ಷೆಯಲ್ಲಿ ಅಕ್ರಮ : ಉನ್ನತ ಮಟ್ಟದ ತನಿಖೆಗೆ ಎನ್.ಎಸ್.ಯು.ಐ ಆಗ್ರಹಿಸಿ ಎನ್.ಎಅ್.ಯು.ಐ ಜಿಲ್ಲಾ ಘಟಕ ಕೊಪ್ಪಳ ನೇತೃತ್ವದಲ್ಲಿ ಅಶೋಕ ಸರ್ಕಲ್ ನಲ್ಲಿ ಪ್ರತಿಭಟನೆ ಮಾಡಲಾಯಿತು. ನೀಟ್ ಪರೀಕ್ಷೆಯ ಫಲಿತಾಂಶ ವಿವಾದಗಳಿಂದ ಕೂಡಿದ್ದು ಭಾರಿ ಅಕ್ರಮ ನಡೆದಿರುವ ಸಾಧ್ಯತೆ ಮೇಲ್ನೋಟಕ್ಕೆ ಕಾಣಿಸುತ್ತದೆ, ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ವಿವಾದತ್ಮಕ ಫಲಿತಾಂಶದ ಕಾರಣದಿಂದ ದೇಶದ ಲಕ್ಷಾಂತರ ವೈದ್ಯಕೀಯ ಸೀಟು ಆಕಾಂಕ್ಷಿಗಳಿಗೆ ಅನ್ಯಾಯವಾಗುತ್ತಿದೆ. ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಲು …
Read More »ಮದಭಾವಿ ಗ್ರಾಮದಲ್ಲಿ ಉಜ್ವಲ ಗ್ಯಾಸ್ ವಿತರಣಾ ಸಮಾರಂಭ
ಕಾಗವಾಡ ಮತಕ್ಷೇತ್ರದ ಮದಭಾವಿ ಗ್ರಾಮದ ಕಾಂಗ್ರೆಸ್ ಪಕ್ಷದ ಕಾರ್ಯಲಯದಲ್ಲಿ ಕೇಂದ್ರ ಸರಕಾರದ ಮೂರನೇ ಬಾರಿಗೆ ಪ್ರಧಾನಮಂತ್ರಿ ಆಗಿ ನರೇಂದ್ರ ಮೋದಿ ಅವರು ಅಧಿಕಾರ ಸ್ವೀಕಾರ ಮಾಡಿದ ಬಳಿಕ ಮತ್ತೆ ಉಜ್ವಲ ಯೋಜನೆ ಅಡಿಯಲ್ಲಿ ಗ್ಯಾಸ್ ಮಂಜುರಾದ ಪಲಾನುಭವಿಗಳಿಗೆ ಗ್ಯಾಸ ಗಳನ್ನು ಕಾಂಗ್ರೇಸ್ ಪಕ್ಷದ ಮುಖಂಡ ಪ್ರವೀಣ ನಾಯಿಕ ವಿತರಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಆಗಲಿ ಕೇಂದ್ರದಲ್ಲಿ ಆಗಲಿ ಯಾವದೆ ಪಕ್ಷ ಅಧಿಕಾರದಲ್ಲಿ ಇರಲಿ ಅದು ಮುಖ್ಯ ಅಲ್ಲಾ ಜನಸಾಮಾನ್ಯರಿಗೆ ಯೋಜನೆಗಳು …
Read More »ಅಡವಿ ಔಡಲ ಸೇವಿಸಿ : ಶಾಲಾ ವಿದ್ಯಾರ್ಥಿಗಳು ಅಸ್ವಸ್ಥ
ಕುಕನೂರು : ಕುಕನೂರು ತಾಲೂಕಿನ ಕೋನಾಪೂರ ಶಾಲೆಯ ಆವರಣದ ಅಡಿವಿ ಔಡಲ ಕಾಯಿಯನ್ನು ತಿಂದು ಸುಮಾರು 35 ರಿಂದ 40 ಶಾಲಾ ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ನಡೆದಿದ್ದು ಕೋನಾಪುರ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯ 3 ಮತ್ತು 4ನೇ ತರಗತಿ ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಮಕ್ಕಳನ್ನು ಹತ್ತಿರದ ತಾಲೂಕಾ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಯಿತು. ಶಾಲೆಯ ಒಟ್ಟು 72 ಮಕ್ಕಳಲ್ಲಿ ಬರೋಬ್ಬರಿ 45 ಮಕ್ಕಳು ಅಸ್ವಸ್ಥಗೊಂಡಿದ್ದಾರೆ …
Read More »