ಹಾಲ್ಕುರಿಕೆ ಪ್ರಾರ್ಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಧೋರಣೆ ಖಂಡಿಸಿ ಪ್ರತಿಭಟನೆ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

Protest condemning the attitude of Halkurike Parthamika Krishi Patta Cooperative Society

ಜಾಹೀರಾತು

ತಿಪಟೂರು:ಹಾಲ್ಕುರಿಕೆ ಪ್ರಾರ್ಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಹಾಲೇನಹಳ್ಳಿ, ಹೊಸೂರು ಮತ್ತು ಹಾಲೇನಹಳ್ಳಿ ಗೊಲ್ಲರಹಟ್ಟಿಯ ಷೇರುದಾರರನ್ನು ಅನುಮತಿ ಇಲ್ಲದೆ ವಿಭಜಿಸುವ ಧೋರಣೆಯನ್ನು ಖಂಡಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (AIKKMS) ವತಿಯಿಂದ ತಿಪಟೂರು ತಾಲೂಕು ಕಚೇರಿಯ ಮುಂದೆ ಪ್ರತಿಭಟನೆಯನ್ನು ನಡೆಸಲಾಯಿತು. ಸ್ಥಳಕ್ಕೆ ಆಗಮಿಸಿದ ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ಪರವಾಗಿ ಗ್ರೇಡ್-2 ತಹಶೀಲ್ದಾರ್ ಜಗನ್ನಾಥ್ ಅವರು ಮನವಿಯನ್ನು ಸ್ವೀಕರಿಸಿದರು. ಜೊತೆಗೆ ತಾಲೂಕು ಸಹಾಯಕ ನಿಬಂಧ ನಿಬಂಧಕರದ ಹರೀಶ್ ಕುಮಾರ್ ಸಹ ಆಗಮಿಸಿ, ಇನ್ನೆರಡು ದಿನಗಳಲ್ಲಿ ರೈತರಿಗೆ ಸಾಲ ನೀಡುವ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸುವುದಾಗಿ ಹೇಳಿದರು. ಈ ಸಂದರ್ಭದಲ್ಲಿ AIKKMS ಜಿಲ್ಲಾಧ್ಯಕ್ಷರು ಎಸ್ ಎನ್ ಸ್ವಾಮಿಯವರು, ಜಿಲ್ಲಾ ಜಂಟಿ ಕಾರ್ಯದರ್ಶಿ ಪ್ರಸನ್ನ ಕುಮಾರ್ ಹಾಲೆನಹಳ್ಳಿ, ಸಾವಿತ್ರಮ್ಮ, ಲತಾ, ಪವಿತ್ರ, ಮಲ್ಲಿಕಾರ್ಜುನ್, ಆನಂದ್, ರಾಜಣ್ಣ ಮತ್ತು ಇನ್ನು ಮುಂತಾದವರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Total Views: 0
Share This Article