ದೀಪಾವಳಿ ಜೂಜಾಟಕ್ಕೆ ಪೊಲೀಸರ ಬಿಸಿ: ಮೂರು ದಿನಗಳಲ್ಲಿ 65 ಪ್ರಕರಣ ದಾಖಲು

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

ದೀಪಾವಳಿ ಜೂಜಾಟಕ್ಕೆ ಪೊಲೀಸರ ಬಿಸಿ: ಮೂರು ದಿನಗಳಲ್ಲಿ 65 ಪ್ರಕರಣ ದಾಖಲು

ಜಾಹೀರಾತು
ಜಾಹೀರಾತು
Police crack down on Diwali gambling: 65 cases registered in three days




ಗಂಗಾವತಿ ಉಪವಿಭಾಗದಾದ್ಯಂತ ವಿಶೇಷ ಕಾರ್ಯಾಚರಣೆ; ಜೂಜಾಟಗಾರರಿಗೆ ಡಿವೈಎಸ್ಪಿ ನ್ಯಾಮಗೌಡರ್ ಖಡಕ್ ಎಚ್ಚರಿಕೆ


ಗಂಗಾವತಿ: ನ.11: ದೀಪಾವಳಿ ಹಬ್ಬದ ನೆಪದಲ್ಲಿ ಇಸ್ಪೀಟು ಜೂಜಾಟ ನಡೆಸುವವರ ವಿರುದ್ಧ ಗಂಗಾವತಿ ಉಪವಿಭಾಗದ ಪೊಲೀಸರು ಸಮರ ಸಾರಿದ್ದಾರೆ. ನವೆಂಬರ್ 8ರಿಂದ 10ರವರೆಗೆ ಕೇವಲ ಮೂರು ದಿನಗಳಲ್ಲಿ ಉಪವಿಭಾಗದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಒಟ್ಟು 65 ಜೂಜಾಟದ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡರ್ ತಿಳಿಸಿದ್ದಾರೆ.


ಪೊಲೀಸ್ ಠಾಣಾವಾರು ಪ್ರಕರಣಗಳ ವಿವರ ಹೀಗಿದೆ: ಗಂಗಾವತಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ 8, ಗಂಗಾವತಿ ನಗರ ಠಾಣೆಯಲ್ಲಿ 8, ಕಾರಟಗಿ ಠಾಣೆಯಲ್ಲಿ 16, ಕನಕಗಿರಿ ಠಾಣೆಯಲ್ಲಿ 8, ತಾವರಗೇರಾ ಠಾಣೆಯಲ್ಲಿ 11, ಕುಷ್ಟಗಿ ಠಾಣೆಯಲ್ಲಿ 10 ಹಾಗೂ ಹನಮಸಾಗರ ಠಾಣೆ ವ್ಯಾಪ್ತಿಯಲ್ಲಿ 7 ಪ್ರಕರಣಗಳು ದಾಖಲಾಗಿವೆ.
ದೀಪಾವಳಿ ಹಬ್ಬದ ನೆಪದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಇಸ್ಪೀಟು ಸೇರಿದಂತೆ ಯಾವುದೇ ರೀತಿಯ ಜೂಜಾಟ ನಡೆಸುವುದು ಕಾನೂನುಬಾಹಿರವಾಗಿದೆ. ಇಂತಹ ಅಕ್ರಮ ಚಟುವಟಿಕೆಗಳ ಮೇಲೆ ಪೊಲೀಸ್ ಇಲಾಖೆ

ನಿರಂತರ ನಿಗಾ ಇರಿಸಿದ್ದು, ಜೂಜಾಟದಲ್ಲಿ ತೊಡಗುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿವೈಎಸ್ಪಿ ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕರು ಹಬ್ಬವನ್ನು ಶಾಂತಿ, ಸೌಹಾರ್ದತೆಯಿಂದ ಆಚರಿಸಬೇಕು. ಅಕ್ರಮ ಜೂಜಾಟಕ್ಕೆ ಪ್ರೋತ್ಸಾಹ ನೀಡದೆ, ಇಂತಹ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಕಲ್ಯಾಣಸಿರಿ ಕನ್ನಡ ದಿನಪತ್ರಿಕೆ ಹಾಗೂ ವೆಬ್ ನ್ಯೂಸ್

Total Views: 2
ಜಾಹೀರಾತು
Share This Article
Leave a Comment