

ನವೆಂಬರ್ 4 ರಂದು ಜಿಲ್ಲಾ ಮಟ್ಟದ ‘ವಿಕಸಿತ್ ಭಾರತ್ ಯುವ ಸಂಸತ್ತು’ ಕಾರ್ಯಕ್ರಮ
District-level 'Viksit Bharat Youth Parliament' programme on November 4
ಕೊಪ್ಪಳ ಅಕ್ಟೋಬರ್ 30 (ಕರ್ನಾಟಕ ವಾರ್ತೆ): ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಮೈ ಭಾರತ ಕೇಂದ್ರ, ಕೊಪ್ಪಳ ವತಿಯಿಂದ ಜಿಲ್ಲಾ ಮಟ್ಟದ ‘ವಿಕಸಿತ್ ಭಾರತ್ ಯುವ ಸಂಸತ್ತು’ ಕಾರ್ಯಕ್ರಮವನ್ನು ನವೆಂಬರ್ 4 ರ ಬುಧವಾರದಂದು ನಗರದ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದೆ.
ಈ ಯುವ ಸಂಸತ್ತಿನಲ್ಲಿ “ಒಂದು ದೇಶ, ಒಂದು ಚುನಾವಣೆ” ಎಂಬ ವಿಷಯದ ಕುರಿತು 3 ನಿಮಿಷಗಳ ವೈಯಕ್ತಿಕ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದ್ದು, ವಿಕಸಿತ್ ಭಾರತ್ ಯುವ ಸಂಸತ್ತು ಕಾರ್ಯಕ್ರಮಕ್ಕೆ 18 ರಿಂದ 25 ವರ್ಷದ ಯುವಜನರಿಗೆ ಮಾತ್ರ ಸಂಬಂಧಿಸಿದ ದಾಖಲೆಗಳನ್ನು ಆಧರಿಸಿ ಪರಿಗಣಿಸಲಾಗುವುದು. ಅದರಂತೆ ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ದ್ವೀತಿಯ ಸ್ಥಾನ, ತೃತೀಯ ಸ್ಥಾನ ಪಡೆದವರು ಮಾತ್ರ ರಾಜ್ಯ ಮಟ್ಟದಲ್ಲಿ ಭಾಗವಹಿಸಲು ಅರ್ಹರಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ, ಮೈ ಭಾರತ ಕೇಂದ್ರ ಕೊಪ್ಪಳ ಕಾರ್ಯಾಲಯ, ಮೊದಲನೇ ಮಹಡಿ ಜಿಲ್ಲಾ ಕ್ರೀಡಾಂಗಣ, ಕೊಪ್ಪಳ ದೂರವಾಣಿ ಸಂ:08539-230116 ಗೆ ಸಂಪರ್ಕಿಸಲು ಅಥವಾ ಕ್ಯೂಆರ್ ಕೋಡ ಸ್ಕಾನ್ ಮಾಡವ ಮೂಲಕ ಹೆಸರನ್ನು ನೋಂದಾಯಿಸಬಹುದು ಎಂದು ಮೈ ಭಾರತ ಕೇಂದ್ರ ಹಾಗೂ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಜಿಲ್ಲಾ ಯುವ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



