ದೇಶದ ಸುಭೀಕ್ಷತೆಗಾಗಿ ಶ್ರೀ ಶಾರದಾ ಶರನ್ನವರಾತ್ರಿ ಮಹೋತ್ಸವದಲ್ಲಿ ಮಹಾಸಂಕಲ್ಪ1.41 ಲಕ್ಷ ಲಲಿತಾ ಸಹಸ್ರನಾಮ ಪಾರಾಯಣ, 1.71 ಲಕ್ಷ ಕುಂಕುಮಾರ್ಚನೆ

H.Mallikarjun
H.Mallikarjun - Kalyanasiri
2 Min Read
ಜಾಹೀರಾತು

Maha Sankalpa' (Grand Vow) for the nation's prosperity during the Sri Sharada Sharannavaratri Mahotsava
Recitation of Lalita Sahasranama 1.41 lakh times; Kunkumarchana performed 1.71 lakh times

ದೇಶದ ಸುಭೀಕ್ಷತೆಗಾಗಿ ಶ್ರೀ ಶಾರದಾ ಶರನ್ನವರಾತ್ರಿ ಮಹೋತ್ಸವದಲ್ಲಿ ಮಹಾಸಂಕಲ್ಪ
1.41 ಲಕ್ಷ ಲಲಿತಾ ಸಹಸ್ರನಾಮ ಪಾರಾಯಣ, 1.71 ಲಕ್ಷ ಕುಂಕುಮಾರ್ಚನೆ

ಜಾಹೀರಾತು

ಗಂಗಾವತಿ: ದೇಶದ ಸುಭೀಕ್ಷತೆ, ಸಮೃದ್ಧ ಮಳೆ ಹಾಗೂ ರೈತರ ಬದುಕಿನ ಹಸನಿಗಾಗಿ ಪ್ರಾರ್ಥಿಸುವ ಮಹಾಸಂಕಲ್ಪದೊಂದಿಗೆ ಈ ಬಾರಿ ಶ್ರೀ ಶಾರದಾ ಶರನ್ನವರಾತ್ರಿ ಮಹೋತ್ಸವವನ್ನು ಆಚರಿಸಲಾಗುತ್ತಿದೆ ಎಂದು ಗಂಗಾವತಿಯ ಶ್ರೀ ಶೃಂಗೇರಿ ಶಂಕರ ಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ ಹೇಳಿದರು.
ಅವರು ನಗರದ ಶ್ರೀ ಶಾರದಾ ದೇಗುಲದಲ್ಲಿ ಭಾನುವಾರ ನಡೆದ ಶರನ್ನವರಾತ್ರಿ ಮಹೋತ್ಸವದ ಧರ್ಮಸಭೆಯನ್ನುದ್ದೇಶಿಸಿ ಮಾತನಾಡಿದರು. ಉತ್ತರ ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಸಕಾಲಕ್ಕೆ ಮಳೆಯಾಗದೆ ಬರಗಾಲದ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಉತ್ತಮ ಮಳೆಯಾಗಿ, ಕೃಷಿ ಸಮೃದ್ಧಿಗೊಂಡು ರೈತರ ಬದುಕು ಹಸನಾಗಲಿ ಹಾಗೂ ದೇಶ ಸುಭೀಕ್ಷತೆಯಾಗಲಿ ಎಂಬ ಸಂಕಲ್ಪದೊಂದಿಗೆ ಜಗನ್ಮಾತೆ ಶ್ರೀ ಶಾರದಾಂಬೆಯ ಆರಾಧನೆ ನಡೆಸಲಾಗುತ್ತಿದೆ ಎಂದರು. ಮಹೋತ್ಸವದ ಮೊದಲ ದಿನವೇ ಅಪಾರ ಸಂಖ್ಯೆಯಲ್ಲಿ ಮಹಿಳಾ ಭಕ್ತರು ಪಾಲ್ಗೊಂಡು 1,41,000 ಲಲಿತಾ ಸಹಸ್ರನಾಮ ಪಾರಾಯಣ ಹಾಗೂ 1,71,000 ಕುಂಕುಮಾರ್ಚನೆ ನೆರವೇರಿಸಿರುವುದು ವಿಶೇಷವಾಗಿದೆ. ವಿವಿಧ ಭಜನಾ ಮಂಡಳಿಗಳು ಹಾಗೂ ಸಮಾಜಗಳ ಮಹಿಳೆಯರು ಉತ್ಸಾಹದಿಂದ ಭಾಗವಹಿಸಿರುವುದು ಸಂತಸ ತಂದಿದೆ ಎಂದು ತಿಳಿಸಿದರು.
ಧಾರ್ಮಿಕ ಕಾರ್ಯಕ್ರಮಗಳಿಗೆ ದೇವಸ್ಥಾನದ ಪ್ರಧಾನ ಅರ್ಚಕ ಕುಮಾರ ಭಟ್, ಧಾರವಾಡದ ಚೈತನ್ಯ ಹಾಗೂ ಸ್ಥಳೀಯ ರಾಘವೇಂದ್ರ ಭಟ್ ನೇತೃತ್ವ ವಹಿಸಿ ಅಚ್ಚುಕಟ್ಟಾಗಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಜಗನ್ನಾಥ ಅಳವಂಡಿಕರ್, ವಿಶ್ವನಾಥ ಅಳವಂಡಿ, ಪ್ರಶಾಂತ್ ಜೋಶಿ, ಬಾಲಕೃಷ್ಣ ದೇಸಾಯಿ, ರಾಘವೇಂದ್ರ ಜೋಶಿ, ಶ್ರೀಧರ ಅಳವಂಡಿ, ಶೇಷಗಿರಿ ಪದಕಿ, ದತ್ತಣ್ಣ ಹೊಸಳ್ಳಿ, ಶಂಕರ ಹೊಸಳ್ಳಿ, ಸುದರ್ಶನ ವೈದ್ಯ, ಶ್ರೀನಿವಾಸ ಕರಮುಡಿ, ಗಾಯತ್ರಿ ಅಳವಂಡಿಕರ್, ಶ್ರೀದೇವಿ ಪುರಾಣಿಕ, ರಮಾ ದರೋಜಿ, ನೀಲಾ ಶಿವಕುಮಾರ್, ಗೀತಾ ಪಾಟೀಲ್, ದೇವಿಕಾ ಹಾಗೂ ರೇಖಾ ಶರಣಬಸವ ಅಂಗಡಿ ಸೇರಿದಂತೆ ವಿವಿಧ ಭಜನಾ ಮಂಡಳಿಗಳ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

Total Views: 0
ಜಾಹೀರಾತು
Share This Article