Responsibility of strengthening the Congress falls on Nagappa; loyalists prioritized.
Demand from the Uppara community to reactivate party workers who had receded into the background.ಕಾಂಗ್ರೆಸ್ ಬಲಪಡಿಸುವ ಹೊಣೆ ನಾಗಪ್ಪರ ಹೆಗಲಿಗೆ; ನಿಷ್ಠಾವಂತರಿಗೆ ಮಣೆ ಹಾಕಿ
ನೆಪಥ್ಯಕ್ಕೆ ಸರಿದ ಕಾರ್ಯಕರ್ತರನ್ನು ಮತ್ತೆ ಸಕ್ರಿಯಗೊಳಿಸಲು ಉಪ್ಪಾರ ಸಮಾಜದ ಒತ್ತಾಯ


ಉಪ್ಪಾರ ಸಮಾಜದಿಂದ ನೂತನ ಡಿಸಿಸಿ ಅಧ್ಯಕ್ಷರಿಗೆ ಸನ್ಮಾನ
ಗಂಗಾವತಿ: ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಅವರನ್ನು ಗಂಗಾವತಿ ತಾಲೂಕು ಉಪ್ಪಾರ ಸಮಾಜದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಮಾಜದ ಹಿರಿಯರು, ಮಲ್ಲಿಕಾರ್ಜುನ ನಾಗಪ್ಪ ಅವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತಷ್ಟು ಸದೃಢವಾಗಲಿ. ಪಕ್ಷದ ಸಂಘಟನೆಗಾಗಿ ದುಡಿದು, ಪ್ರಸ್ತುತ ನೆಪಥ್ಯಕ್ಕೆ ಸರಿದಿರುವ ಹಿರಿಯ ಹಾಗೂ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ಸೂಕ್ತ ಅವಕಾಶ ನೀಡುವ ಮೂಲಕ ಪಕ್ಷವನ್ನು ಬಲಪಡಿಸಬೇಕು ಎಂದು ಹಾರೈಸಿದರು.
ಸಮಾಜದ ಮುಖಂಡರು ನೂತನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಶುಭಾಶಯ ಕೋರಿ, ಅವರ ಅಧಿಕಾರಾವಧಿಯಲ್ಲಿ ಪಕ್ಷ ಸಂಘಟನೆಗೆ ಹೊಸ ಚೈತನ್ಯ ದೊರೆಯಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಉಪ್ಪಾರ ಸಮಾಜದ ತಾಲೂಕು ಅಧ್ಯಕ್ಷ ಅಮರಜ್ಯೋತಿ ವೆಂಕಟೇಶ್, ಕಾರ್ಯಾಧ್ಯಕ್ಷ ಮುಕ್ಕಣ್ಣ ಮಾನಳ್ಳಿ, ನಗರಸಭೆ ಮಾಜಿ ಅಧ್ಯಕ್ಷ ದಾನಪ್ಪ ದರೋಜಿ, ಹಿರಿಯರಾದ ರಾಮಣ್ಣ ಕುರಿತಲೆ, ವಾಸುದೇವ ಜಂಬಣ್ಣ, ಹುಲಿಗಿ ಯಂಕಪ್ಪ, ವಿಐಪಿ ಮೆಲೋಡಿಸ್ ಪಂಪಾಪತಿ ಇಂಗಳಗಿ, ಪ್ರಭು ವಕೀಲರು, ಶರಣಪ್ಪ ಮಿಣಜಿಗಿ ವಕೀಲರು, ಮಾನಳ್ಳಿ ಹನುಮಂತಪ್ಪ, ಸಮಾಜದ ಉಪಾಧ್ಯಕ್ಷ ಗೋವಿಂದಪ್ಪ ಹುಲಿಗಿ, ಪ್ರಮುಖರಾದ ಯಂಕಪ್ಪ ಕೊಂಡಿಕಾರ ಸೇರಿದಂತೆ ಸಮಾಜದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.



