Janarinda Naanu Mele Bande' to hit screens on Oct 16.ಜನರಿಂದ ನಾನು ಮೇಲೆ ಬಂದೆ’ ಅ.16ಕ್ಕೆ ತೆರೆಗೆ


ಡ್ಯಾನ್ಸ್‌ನ್ನೇ ಉಸಿರಾಗಿಸಿಕೊಂಡ ಯುವಕನ ನೈಜಕಥೆ; ವಿನೋದ್‌ರಾಜ್ ಅಭಿನಯ ವಿಶೇಷ
ಬೆಂಗಳೂರು: ಶ್ರೀಮಂಜುನಾಥ ಫಿಲ್ಮ್ಸ್ ಬೆಂಗಳೂರು ನಿರ್ಮಾಣದ ‘ಜನರಿಂದ ನಾನು ಮೇಲೆ ಬಂದೆ’ ಕನ್ನಡ ಚಲನಚಿತ್ರವು ಇದೇ ಅಕ್ಟೋಬರ್ 16ರಿಂದ ರಾಜ್ಯಾದ್ಯಂತ ತೆರೆಕಾಣಲಿದೆ.
ನವಿಲುಗರಿ ನವೀನ್ ಪಿ.ಬಿ. ನಿರ್ದೇಶನದ ಈ ಚಿತ್ರವು ಡ್ಯಾನ್ಸ್‌ನ್ನೇ ಉಸಿರಾಗಿಸಿಕೊಂಡಿರುವ ಒಬ್ಬ ಯುವಕನ ನೈಜಕಥೆಯನ್ನು ಆಧರಿಸಿದೆ. ನೃತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಹಲವು ಹೆಸರಾಂತ ಕಲಾವಿದರು ಚಿತ್ರದಲ್ಲಿ ಅಭಿನಯಿಸಿರುವುದು ವಿಶೇಷವಾಗಿದೆ.
ಡ್ಯಾನ್ಸ್ ಎಂದಾಕ್ಷಣ ನೆನಪಾಗುವ ‘ಡ್ಯಾನ್ಸ್ ರಾಜಾ ಡ್ಯಾನ್ಸ್’ ಖ್ಯಾತಿಯ ವಿನೋದ್‌ರಾಜ್ ಅವರು ಹಲವು ವರ್ಷಗಳ ಬಳಿಕ ಚಿತ್ರರಂಗಕ್ಕೆ ಮರಳಿದ್ದು, ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಅಭಿನಯ ಚಿತ್ರಕ್ಕೆ ಮತ್ತಷ್ಟು ವಿಶೇಷತೆ ತಂದಿದೆ.
ಬೆಂಗಳೂರು, ಮೇಲುಕೋಟೆ ಸೇರಿದಂತೆ ವಿವಿಧೆಡೆ ಚಿತ್ರದ ಚಿತ್ರೀಕರಣ ನಡೆದಿದ್ದು, ಐದು ಹಾಡುಗಳು ಚಿತ್ರದಲ್ಲಿವೆ. ಗಂಧರ್ವರಾಜ್ ಶಂಕರ್ ನಾಯಕನಾಗಿ ಅಭಿನಯಿಸಿದ್ದು, ಅಭಿಜಿತ್, ವಿನೋದ್‌ರಾಜ್, ನವಿಲುಗರಿ ನವೀನ್ ಪಿ.ಬಿ., ಶೈಲಜಾ ದ್ವಾರಕೀಶ್, ಚಾಮರಾಜ ಮಾಸ್ಟರ್, ಶಿವಕುಮಾರ್ ಆರಾಧ್ಯ, ಶ್ಯಾಮಲಮ್ಮ, ಜಯಪ್ರಕಾಶ್ ನಾಗತಿಹಳ್ಳಿ, ಸುನಂದಾ ಕಲಬುರಗಿ, ಪ್ರವೀಣಾ ಕುಲಕರ್ಣಿ, ಸಂದೀಪ್ ಮಲಾನಿ, ಅನಿಲ್ ಕುಮಾರ್ ಬಾಬಿ, ಮಧುಶ್ರೀ ವಸಂತ, ಶಿವಣ್ಣ, ಆಪ್ತಿ ಪಟವರ್ಧನ್, ಕೃತಿಕಾ ದಿವಾಕರ್, ಶಾಂತಾಕುಮಾರಿ, ಕಾಟೇರ ಕೇಶವ, ಅಂಬೇಡ್ಕರ್ ಮಹೇಶ್, ಡಾ. ಅಕ್ಷತಾ, ವಿಶಾಲ ಸತೀಶ್, ಲಲಿತ್ ಕೃಷ್ಣ, ಯಶು ರಾಜ್, ಶಶಿರೇಖಾ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.
ಗೌತಮ್ ಟಿ.ಆರ್. ಛಾಯಾಗ್ರಹಣ ಹಾಗೂ ಸಂಕಲನದ ಜವಾಬ್ದಾರಿ ವಹಿಸಿದ್ದು, ಪೃಥ್ವಿರಾಜ್ ಸಂಕಿ, ಭುವನ್ ಹಾಗೂ ನವೀನ್ ಪಿ.ಬಿ. ಸಾಹಿತ್ಯ ರಚಿಸಿದ್ದಾರೆ. ಪ್ರಣವ್ ಸತೀಶ್ ಸಂಗೀತ ಸಂಯೋಜಿಸಿದ್ದಾರೆ.
ಷಣ್ಮುಖ ಗೋವಿಂದರಾಜು, ರೇವಣ್ಣಸಿದ್ದ ಫುಲಾರಿ, ಎ.ಆರ್. ತನ್ವೀರ್, ನವೀನ್ ಪಿ.ಬಿ. ಹಾಗೂ ಯಶಸ್ವಿನಿ ಕಾಪ್ಸೆ ಹಾಡುಗಳಿಗೆ ಧ್ವನಿಯಾಗಿದ್ದಾರೆ.
ಆರ್. ಚಂದ್ರಶೇಖರ, ಡಾ. ಪ್ರಭು ಗಂಜಿಹಾಳ, ಡಾ. ವೀರೇಶ ಹಂಡಿಗಿ ಹಾಗೂ ಶ್ರೀಮತಿ ಹೇಮಾವತಿ ಬಿ. ಅವರು ಬಂಡವಾಳ ಹೂಡಿದ್ದಾರೆ. ಪಿಆರ್‌ಒ ಆಗಿ ಆರ್. ಚಂದ್ರಶೇಖರ ಕಾರ್ಯನಿರ್ವಹಿಸಿದ್ದಾರೆ.
ಚಿತ್ರವು ಅ.16ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು, ಪ್ರೇಕ್ಷಕರು ಚಿತ್ರವನ್ನು ವೀಕ್ಷಿಸಿ ಚಿತ್ರತಂಡವನ್ನು ಪ್ರೋತ್ಸಾಹಿಸುವಂತೆ ನಿರ್ದೇಶಕರು ಮನವಿ ಮಾಡಿದ್ದಾರೆ.



