ಅಧ್ಯಾಪಕರ ಸಮಸ್ಯೆಗಳ ಪರಿಹಾರಕ್ಕೆ ಶೀಘ್ರ ಕ್ರಮ: ಸಚಿವ ಬಸವರಾಜ ರಾಯರೆಡ್ಡಿ

H.Mallikarjun
H.Mallikarjun - Kalyanasiri
1 Min Read
Swift action to resolve teachers' issues: Minister Basavaraj Rayareddy

ಅಧ್ಯಾಪಕರ ಸಮಸ್ಯೆಗಳ ಪರಿಹಾರಕ್ಕೆ ಶೀಘ್ರ ಕ್ರಮ: ಸಚಿವ ಬಸವರಾಜ ರಾಯರೆಡ್ಡಿ

ಜಾಹೀರಾತು


ಯಲಬುರ್ಗಾ: ಕರ್ನಾಟಕ ಸರ್ಕಾರಿ ಕಾಲೇಜು ಅಧ್ಯಾಪಕರ ಸಂಘದ ಬಳ್ಳಾರಿ–ಕೊಪ್ಪಳ ವಿಶ್ವವಿದ್ಯಾಲಯಗಳ ವಲಯ ಅಧ್ಯಕ್ಷರಾದ ಡಾ. ಕರಿಗೂಳಿ ಅವರ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ಅಧ್ಯಾಪಕರು ಉನ್ನತ ಶಿಕ್ಷಣ ಸಚಿವರಾದ ಶ್ರೀ ಬಸವರಾಜ ರಾಯರೆಡ್ಡಿ ಅವರನ್ನು ಯಲಬುರ್ಗಾದ ಅವರ ಗೃಹಕಚೇರಿಯಲ್ಲಿ ಭೇಟಿಯಾಗಿ ಗೌರವ ಸನ್ಮಾನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ಸಚಿವರಿಗೆ ವಿವರವಾದ ಮನವಿ ಪತ್ರ ಸಲ್ಲಿಸಿ, ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಯಿತು.
ಅಧ್ಯಾಪಕರ ಸೇವಾ ಸಂಬಂಧಿತ ಸಮಸ್ಯೆಗಳು, ವಿದ್ಯಾರ್ಥಿಗಳ ಶೈಕ್ಷಣಿಕ ಸೌಲಭ್ಯಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ಸಚಿವರೊಂದಿಗೆ ಚರ್ಚೆ ನಡೆಸಲಾಯಿತು. ಮನವಿ ಸ್ವೀಕರಿಸಿದ ಸಚಿವ ಬಸವರಾಜ ರಾಯರೆಡ್ಡಿ ಅವರು, ಸಂಬಂಧಿಸಿದ ವಿಷಯಗಳನ್ನು ನಿಯಮಾನುಸಾರ ಪರಿಶೀಲಿಸಿ, ಶೀಘ್ರ ಪರಿಹಾರಕ್ಕೆ ಅಗತ್ಯ ಸೂಚನೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ವಲಯ ಕಾರ್ಯದರ್ಶಿ ಡಾ. ಶೋಭಾರಾಣಿ, ಬಳ್ಳಾರಿ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರಾದ ಡಾ. ಹೊನ್ನೂರಲಿ, ಡಾ. ಹೆಚ್. ರಾಮಕೃಷ್ಣ, ಡಾ. ಜ್ಞಾನ ಪ್ರಸುನಾಂಬ, ಡಾ. ಮಂಜುನಾಥ್, ಡಾ. ದೊಡ್ಡ ಬಸವರಾಜ, ಪ್ರಾಚಾರ್ಯರಾದ ಡಾ. ಕೆಂಚರೆಡ್ಡಿ ಶಂಕರಯ್ಯ, ಹನುಮೇಶ್, ಶಶಿಕುಮಾರ್, ಧಾರವಾಡ ವಲಯದ ಮೋತಿಲಾಲ್ ರಾಠೋಡ್ ಹಾಗೂ ಅತಿಥಿ ಉಪನ್ಯಾಸಕರಾದ ಹನುಮನಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Total Views: 0
ಜಾಹೀರಾತು
Share This Article