ಚಿಕ್ ಮಾದಿನಾಳ ಗ್ರಾಪಂನಲ್ಲಿ ಅವ್ಯವಸ್ಥೆ ಆರೋಪ RTI ಮಾಹಿತಿ ಫಲಕ, ಗಾಂಧೀಜಿ–ಅಂಬೇಡ್ಕರ್ ಭಾವಚಿತ್ರಗಳಿಲ್ಲ; ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸಾರ್ವಜನಿಕರ ಆಗ್ರಹ

H.Mallikarjun
H.Mallikarjun - Kalyanasiri
2 Min Read
  1. ಚಿಕ್ ಮಾದಿನಾಳ ಗ್ರಾಪಂನಲ್ಲಿ ಅವ್ಯವಸ್ಥೆ ಆರೋಪ
    RTI ಮಾಹಿತಿ ಫಲಕ, ಗಾಂಧೀಜಿ–ಅಂಬೇಡ್ಕರ್ ಭಾವಚಿತ್ರಗಳಿಲ್ಲ; ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸಾರ್ವಜನಿಕರ ಆಗ್ರಹ

 

Allegations of mismanagement at Chik Madinal Gram Panchayat
RTI information board and portraits of Gandhiji and Ambedkar missing; public demands action against officials.

ಚಿಕ್ ಮಾದಿನಾಳ (ಕನಕಗಿರಿ): ಕನಕಗಿರಿ ತಾಲೂಕಿನ ಚಿಕ್ ಮಾದಿನಾಳ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಮೂಲಭೂತ ವ್ಯವಸ್ಥೆಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಅಗತ್ಯ ಮಾಹಿತಿ ಲಭ್ಯವಾಗುವಂತೆ ಮಾಹಿತಿ ಹಕ್ಕು ಕಾಯ್ದೆ (RTI) ಸೇರಿದಂತೆ ಸಂಬಂಧಿತ ಮಾಹಿತಿಯ ಫಲಕಗಳನ್ನು ಪ್ರದರ್ಶಿಸುವುದು ಪ್ರಮುಖವಾಗಿದೆ. ಆದರೆ ಚಿಕ್ ಮಾದಿನಾಳ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಮಾಹಿತಿ ಹಕ್ಕು (RTI) ಕುರಿತ ಮಾಹಿತಿ ಫಲಕ ಕಾಣಿಸುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಇದರಿಂದ ಗ್ರಾಮಸ್ಥರು ಪಂಚಾಯಿತಿಯಲ್ಲಿ ಯಾವ ಅಧಿಕಾರಿ ಅಥವಾ ಸಿಬ್ಬಂದಿಯನ್ನು ಸಂಪರ್ಕಿಸಿ ಮಾಹಿತಿ ಪಡೆಯಬೇಕು, ತಮ್ಮ ಹಕ್ಕುಗಳೇನು ಎಂಬುದರ ಕುರಿತು ಗೊಂದಲಕ್ಕೀಡಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

ಜಾಹೀರಾತು

ಅಷ್ಟೇ ಅಲ್ಲದೆ, ಕಚೇರಿಯ ಗೋಡೆಗಳ ಮೇಲೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳು ಇಲ್ಲದಿರುವುದು ಕೂಡ ಸಾರ್ವಜನಿಕರ ಗಮನ ಸೆಳೆದಿದೆ. ಸರ್ಕಾರಿ ಕಚೇರಿಯಲ್ಲಿ ರಾಷ್ಟ್ರನಾಯಕರು ಹಾಗೂ ಸಂವಿಧಾನದ ಮಹತ್ವವನ್ನು ಪ್ರತಿಬಿಂಬಿಸುವಂತಹ ವ್ಯವಸ್ಥೆ ಇರಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಪಂಚಾಯಿತಿ ಕಚೇರಿಯಲ್ಲಿನ ಈ ರೀತಿಯ ವ್ಯವಸ್ಥೆಗಳ ಕೊರತೆ ಹಾಗೂ ನಿರ್ವಹಣೆಯ ಬಗ್ಗೆ ಸಂಬಂಧಿಸಿದ ಮೇಲಧಿಕಾರಿಗಳು ಪರಿಶೀಲನೆ ನಡೆಸಬೇಕು. ಕಚೇರಿಯಲ್ಲಿ ಅಗತ್ಯ ಮಾಹಿತಿ ಫಲಕಗಳನ್ನು ಅಳವಡಿಸಿ, ಮಹನೀಯರ ಭಾವಚಿತ್ರಗಳನ್ನು ಸೂಕ್ತ ರೀತಿಯಲ್ಲಿ ಪ್ರದರ್ಶಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಕುರಿತು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು (EO) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಲೋಪ ಕಂಡುಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳಿಂದ ಸ್ಪಷ್ಟನೆ ಪಡೆದು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವರದಿ: ಶರಣಯ್ಯ ಹಿರೇಮಠ
ಕನಕಗಿರಿ ತಾಲೂಕು ವರದಿಗಾರ
ಕಲ್ಯಾಣಸಿರಿ ವೆಬ್ ನ್ಯೂಸ್

Total Views: 0
ಜಾಹೀರಾತು
Share This Article