Why should we eat jaggery in winter? Here’s an interesting fact you might not know!
ಚಳಿಗಾಲದಲ್ಲೇ ಏಕೆ ಬೆಲ್ಲ ತಿನ್ನಬೇಕು? ನಿಮಗೆ ಗೊತ್ತಿಲ್ಲದ ಇಂಟ್ರೆಸ್ಟಿಂಗ್ ವಿಚಾರ ಇಲ್ಲಿದೆ!

ಬೆಲ್ಲವು ಜೀವಸತ್ವಗಳು, ಖನಿಜಗಳು, ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಕಬ್ಬಿಣದಂತಹ ಅಗತ್ಯ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಹಾಗಾಗಿ ಚಳಿಗಾಲದಲ್ಲಿ ಬೆಲ್ಲ ಸೇವನೆ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಕಾರಿ ಆಗಿದೆ. ಅದು ಹೇಗೆ ಅಂತೀರಾ? ಈ ಸ್ಟೋರಿ ಓದಿ.
ಬೆಲ್ಲ ಸಿಹಿಯಾಗಿರುವುದು ಮಾತ್ರವಲ್ಲ. ಆರೋಗ್ಯಕ್ಕೂ ಕೂಡ ಬಹಳ ಒಳ್ಳೆಯದು. ಇತ್ತೀಚಿನ ದಿನಗಳಲ್ಲಿ ನೈರ್ಗಿಕ ಬೆಲ್ಲವನ್ನು ಬಿಳಿ ಸಕ್ಕರೆಗೆ ಬದಲಾಗಿ ಜನರು ಬಳಸಲು ಆರಂಭಿಸಿದ್ದಾರೆ. ಇನ್ನೂ ಕೆಲವರಿಗೆ ಮಾಂಸಾಹಾರವನ್ನು ಸೇವಿಸಿದ ನಂತರ ಬಾಯಿ ದರ್ವಾಸನೆ ನಿಯಂತ್ರಣಕ್ಕೆ ಚಿಕ್ಕ ಬೆಲ್ಲ ತಿನ್ನುವ ಅಭ್ಯಾಸ ಹೊಂದಿರುತ್ತಾರೆ.
ಬೆಲ್ಲವು ಜೀವಸತ್ವಗಳು, ಖನಿಜಗಳು, ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಕಬ್ಬಿಣದಂತಹ ಅಗತ್ಯ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಹಾಗಾಗಿ ಚಳಿಗಾಲದಲ್ಲಿ ಬೆಲ್ಲ ಸೇವನೆ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಕಾರಿ ಆಗಿದೆ. ಅದು ಹೇಗೆ ಅಂತೀರಾ? ಈ ಸ್ಟೋರಿ ಓದಿ
ಸ್ನಾಯುವಿನ ದರ್ಬಲ್ಯ: ಬೆಲ್ಲವು ಕಬ್ಬಿಣಾಂಶದ ಅತ್ಯುತ್ತಮ ಮೂಲವಾಗಿದೆ. ದಿನಕ್ಕೊಂದು ಚಿಕ್ಕ ಬೆಲ್ಲವನ್ನು ತಿಂದರೂ ದೇಹಕ್ಕೆ ದಿನವಿಡೀ ಬೇಕಾಗುವ ಶೇ.೧೦ರಷ್ಟು ಕಬ್ಬಿಣಾಂಶ ಸಿಗುತ್ತದೆ. ಅದು ಆಯಾಸವನ್ನು ಕಡಿಮೆ ಮಾಡಲು ಮತ್ತು ಆರೋಗ್ಯಕರ ರಕ್ತ ಕಣಗಳನ್ನು ಉತ್ತೇಜಿಸುವ ಮೂಲಕ ಸ್ನಾಯುವಿನ ಕರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ರಕ್ತಹೀನತೆ: ಕಬ್ಬಿಣಾಂಶದ ಕೊರತೆಯು ರಕ್ತಹೀನತೆಯನ್ನು ಹೆಚ್ಚಿಸುವ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಇವು ಕಡಿಮೆಯಾದರೆ, ತೀವ್ರ ಆಯಾಸ ಉಂಟಾಗುತ್ತವೆ ಮತ್ತು ಸ್ನಾಯುಗಳನ್ನು ದರ್ಬಲಗೊಳಿಸುತ್ತವೆ. ಹಾಗಾಗಿ ಕಬ್ಬಿಣದಂಶವಿರುವ ಬೆಲ್ಲವನ್ನು ಸೇವಿಸುವುದರಿಂದ ರಕ್ತಹೀನತೆಯನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಬಹುದು.
ಕೆಲವು ವಿಧದ ಕಾಯಿಲೆಗಳ ಅಪಾಯ: ವೆಬ್ಎಮ್ಡಿ ಪ್ರಕಾರ, ಬೆಲ್ಲವು ಉತ್ರ್ಷಣ ನಿರೋಧಕಗಳು ಮತ್ತು ಫಿನಾಲಿಕ್ ಆಮ್ಲಗಳನ್ನು ಹೊಂದಿದ್ದು ಇದು ದೇಹದಲ್ಲಿ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ಉತ್ರ್ಷಣ ನಿರೋಧಕ ಗುಣಲಕ್ಷಣಗಳು ಕೆಲವು ರೀತಿಯ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಬುದ್ಧಿಮಾಂದ್ಯತೆ ಮತ್ತು ವಯಸ್ಸಾದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ.
ಜರ್ಣಕ್ರಿಯೆ: ಅನೇಕ ಮಂದಿ ಊಟದ ನಂತರ ಚಿಕ್ಕ ಬೆಲ್ಲವನ್ನು ಸೇವಿಸುವ ಅಭ್ಯಾಸವನ್ನು ಹೊಂದಿರುತ್ತಾರೆ. ಏಕೆಂದರೆ ಇದು ಬಾಯಿಯ ದರ್ವಾಸನೆಯನ್ನು ನಿಯಂತ್ರಿಸುವುದಲ್ಲದೇ ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ ಮತ್ತು ಜರ್ಣಕಾರಿ ಸಮಸ್ಯೆಗಳನ್ನು ತಡೆಯುತ್ತದೆ. ಜೊತೆಗೆ ಮಲಬದ್ಧತೆಯನ್ನು ನಿವಾರಿಸುತ್ತದೆ.
ರೋಗನಿರೋಧಕ ಶಕ್ತಿ: ಬೆಲ್ಲದಲ್ಲಿರುವ ಅನೇಕ ಪ್ರಯೋಜನಕಾರಿ ಪೋಷಕಾಂಶಗಳು ಮತ್ತು ಉತ್ರ್ಷಣ ನಿರೋಧಕಗಳು ರೋಗನಿರೋಧಕ ಶಕ್ತಿಯನ್ನು ಸುಧಾರಿಸುವುದು ಮಾತ್ರವಲ್ಲದೇ ದರ್ಘಕಾಲದ ಕಾಯಿಲೆಗಳ ಬೆಳವಣಿಗೆಯನ್ನು ತಡೆಯುತ್ತದೆ. ವಿವಿಧ ಕಾಯಿಲೆಗಳು ಮತ್ತು ರೋಗಗಳ ಚಿಕಿತ್ಸೆಗಾಗಿ ಬೆಲ್ಲವನ್ನು ಅನೇಕ ಟಾನಿಕ್ಗಳಲ್ಲಿ ಸೇರಿಸಲಾಗಿದೆ ಎಂಬುದು ಗಮನರ್ಹವಾಗಿದೆ.


