

Farmers cheated in Bagalkot: Dues of Rs 50 for 2025-26 still unpaid! Hegde hits back at Nirani!

ಬಾಗಲಕೋಟೆಯಲ್ಲಿ ರೈತರಿಗೆ ಮೋಸ: 2025-26ರ 50 ರೂ. ಬಾಕಿ ಇನ್ನೂ ಕೊಡಲಿಲ್ಲ! ನಿರಾಣಿಗೆ ಹೆಗಡೆ ತಿರುಗೇಟು!
ಬಾಗಲಕೋಟೆ – ಈ ಹಿಂದೆ ಹಿರೇಕೆರೂರಿನಲ್ಲಿ ಸಕ್ಕರೆ ಸಚಿವರಿಗೆ ಉದ್ಯಮಿ ಮುರುಗೇಶ ನಿರಾಣಿಯವರು ರೈತರ ಬಾಕಿ ಬಿಲ್ ರೂ. ೫೦ ಕೊಡಲು ಆಗದಿದ್ದರೆ ತನ್ನ ಹತ್ತು ಸಾವಿರ ಕೋಟಿಯ ಸಕ್ಕರೆ ಫ್ಯಾಕ್ಟರಿ ಬಿಟ್ಟು ಕೊಡುವುದಾಗಿ ಹೇಳಿದ್ದು ಅವರು ನುಡಿದಂತೆ ನಡೆಯಬೇಕು ಅಥವಾ ರೈತರ ಬಿಲ್ ಕೊಡಬೇಕು ಎಂದು ಬಾಗಲಕೋಟೆಯ ರೈತ ಮುಖಂಡ ಯಲ್ಲಪ್ಪ ಹೆಗಡೆ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುರುಗೇಶ ನಿರಾಣಿಯವರು ತಮ್ಮ ಫ್ಯಾಕ್ಟರಿ ಯನ್ನು ಸರ್ಕಾರಕ್ಕೆ ಬಿಟ್ಟು ಕೊಡುತ್ತಾರೋ ಅಥವಾ ರೈತರಿಗೆ ಬಿಟ್ಟುಕೊಡುತ್ತಾರೋ ಎಂಬುದನ್ನು ನಿರ್ಧರಿಸಬೇಕು. ರೈತ ಕಷ್ಟಪಟ್ಟು ಬೆಳೆದ ಕಬ್ಬಿಗೆ ಕೇವಲ ೫೦ ರೂ. ಬಾಕಿ ಉಳಿಸಿಕೊಳ್ಳುವುದು ಸರಿಯಲ್ಲ ಎಂದರು.
ಜಿಲ್ಲಾಡಳಿತ ಕೂಡ ಈ ಬಗ್ಗೆ ಅಂಕಿ ಅಂಶಗಳನ್ನು ಸಂಗ್ರಹಿಸಬೇಕು ರೈತರ ಕಬ್ಬಿನ ಬಿಲ್ ಕೊಡಿಸಲು ಪ್ರಯತ್ನ ಮಾಡಬೇಕು ಎಂದು ಹೆಗಡೆಯವರು ಆಗ್ರಹಿಸಿದರು.
ಈಗ ಕಬ್ಬು ಬೆಳೆಯುವ ಖರ್ಚು ಹೆಚ್ಚಾಗಿದೆ ಸರ್ಕಾರ ನಿಗದಿಪಡಿಸಿರುವ ಎಫ್ಆರ್ ಪಿ ದರದಲ್ಲಿ ರೈತರಿಗೆ ಖರ್ಚು ಕೂಡ ವಾಪಸ್ ಬರುವಂತೆ ಇಲ್ಲ. ಕಾರ್ಖಾನೆಗಳು ಸಕ್ಕರೆಯ ಜೊತೆ ಎಥೆನಾಲ್, ಮೊಲಾಸಿಸ್, ವಿದ್ಯುತ್ ಉತ್ಪಾದನೆಯಿಂದ ಸಾಕಷ್ಟು ಲಾಭ ಮಾಡಿಕೊಳ್ಳುತ್ತವೆ ಆದರೆ ರೈತರಿಗೆ ರೂ. ೫೦ ಹೆಚ್ಚುವರಿ ನೀಡಲು ಹಿಂದೇಟು ಹಾಕುತ್ತಿವೆ ಎಂದು ಅವರು ಆರೋಪಿಸಿದರು.
ವರದಿ: ಈಶ್ವರ ಢವಳೇಶ್ವರ ಮೂಡಲಗಿ


