ಶ್ರೀ ರಾಯರ ಪೂರ್ವಾರಾಧನೆ ಪ್ರಯುಕ್ತ ವೈಭವದ ಪಲ್ಲಕ್ಕಿ ಮಹೋತ್ಸವ

H.Mallikarjun
H.Mallikarjun - Kalyanasiri
1 Min Read
Grand Palanquin Procession Marking Sri Rayaru's Poorvaradhana

ಶ್ರೀ ರಾಯರ ಪೂರ್ವಾರಾಧನೆ ಪ್ರಯುಕ್ತ ವೈಭವದ ಪಲ್ಲಕ್ಕಿ ಮಹೋತ್ಸವ

ಜಾಹೀರಾತು

ಗಂಗಾವತಿ: ಶ್ರೀ ರಾಘವೇಂದ್ರ ಸ್ವಾಮಿಗಳವರ 355ನೇ ಪೂರ್ವಾರಾಧನೆ ಅಂಗವಾಗಿ ನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು.
ಪೂರ್ವಾರಾಧನೆಯ ಪ್ರಯುಕ್ತ ಸಂಜೆ ಜರುಗಿದ ಪಲ್ಲಕ್ಕಿ ಮಹೋತ್ಸವ ವಿಶೇಷ ಆಕರ್ಷಣೆಯಾಗಿತ್ತು. ಶ್ರೀ ಪ್ರಹ್ಲಾದ ರಾಜರ ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳವರ ಉತ್ಸವ ಮೂರ್ತಿಗಳನ್ನು ಸರ್ವಾಲಂಕಾರಗಳಿಂದ ಅಲಂಕರಿಸಿ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ, ಮಠದ ಆವರಣದಿಂದ ಭವ್ಯ ಮೆರವಣಿಗೆ ನಡೆಸಲಾಯಿತು. ಪಲ್ಲಕ್ಕಿ ಮಹೋತ್ಸವದಲ್ಲಿ ಭಜನಾ ವೃತ್ತದೊಂದಿಗೆ ಭಕ್ತರು ಪಾಲ್ಗೊಂಡು ಭಜನೆ, ನಾಮಸ್ಮರಣೆ ಹಾಗೂ ವಿವಿಧ ಧಾರ್ಮಿಕ ಆಚರಣೆಗಳ ಮೂಲಕ ರಾಯರ ಆರಾಧನೆ ಸಲ್ಲಿಸಿದರು.
ಮಠದ ಆವರಣದಿಂದ ಆರಂಭಗೊಂಡ ಪಲ್ಲಕ್ಕಿ ಮೆರವಣಿಗೆಯು ಸುಂಕದಕಟ್ಟಿ ಶ್ರೀ ಪ್ರಾಣೇಶ ದೇವಸ್ಥಾನದವರೆಗೆ ಸಾಗಿ, ನಂತರ ಪುನಃ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಆಗಮಿಸಿತು. ಮಾರ್ಗದುದ್ದಕ್ಕೂ ಭಕ್ತರು ಉತ್ಸವ ಮೂರ್ತಿಗಳಿಗೆ ಪೂಜೆ ಸಲ್ಲಿಸಿ, ಆರತಿ ಬೆಳಗಿ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಪಲ್ಲಕ್ಕಿ ಮಹೋತ್ಸವದ ಸಂದರ್ಭದಲ್ಲಿ ಮೂಡಿಬಂದ ಭಜನೆ ಹಾಗೂ ರಾಯರ ನಾಮಸ್ಮರಣೆಯಿಂದ ಇಡೀ ವಾತಾವರಣ ಧಾರ್ಮಿಕ ಭಾವದಿಂದ ಕಂಗೊಳಿಸಿತು.
ಮಹೋತ್ಸವದಲ್ಲಿ ಮಹಿಳೆಯರು, ಮಕ್ಕಳು, ವಯೋವೃದ್ಧರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು. ರಾಯರ ಉತ್ಸವ ಮೂರ್ತಿಗಳ ದರ್ಶನ ಪಡೆದು ಪೂಜೆ ಸಲ್ಲಿಸಿದ ಭಕ್ತರು ತಮ್ಮ ಕುಟುಂಬದ ಸುಖ, ಶಾಂತಿ, ಆರೋಗ್ಯ ಹಾಗೂ ಸಮೃದ್ಧಿಗಾಗಿ ಪ್ರಾರ್ಥಿಸಿದರು. ಪಲ್ಲಕ್ಕಿ ಮಹೋತ್ಸವವು ಭಕ್ತರಲ್ಲಿ ಆಧ್ಯಾತ್ಮಿಕ ಚೈತನ್ಯ ಮತ್ತು ಭಕ್ತಿ ಭಾವವನ್ನು ಮೂಡಿಸುವಲ್ಲಿ ಯಶಸ್ವಿಯಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನಾಗರಾಜ ಜೋಷಿ ಜಗನ್ನಾಥ್ ದಾಸ್ ಆಚರಣೆ ಕುರಿತು ಮಾತನಾಡಿದರು

Total Views: 0
ಜಾಹೀರಾತು
Share This Article