Hadapada Appanna Jayanti was celebrated grandly in the presence of Madappa.

ಮಾದಪ್ಪನ ಸನ್ನಿಧಿಯಲ್ಲಿ ಅದ್ದೂರಿಯಾಗಿ ನಡೆದ ಹಡಪದ ಅಪ್ಪಣ್ಣ ಜಯಂತಿ .

ವರದಿ: ಬಂಗಾರಪ್ಪ .ಸಿ.
ಹನೂರು : ಶ್ರೀ ಮಲೆ ಮಹದೇಶ್ವರ ಸವಿತಾ ಸಮಾಜ ಸಂಘ (ರಿ) ಇವರ ವತಿಯಿಂದ ಶ್ರೀ ಶಿವಶರಣ ಶ್ರೀ ಹಡಪದ ಅಪ್ಪಣ್ಣ ರವರ 892ನೇ ಜಯಂತೋತ್ಸವವನ್ನು ಮಂಗಳವಾರ ಮಲೆ ಮಹದೇಶ್ವರಬೆಟ್ಟದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಹನೂರು ತಾಲೂಕಿನ ಪ್ರಸಿದ್ಧ ಯಾತ್ರಸ್ಥಳ ಮಹದೇಶ್ವರಬೆಟ್ಟದ ಮುಡಿಸೇವೆ ಕಟ್ಟೆ ಬಳಿ ಅಲಂಕೃತ ವಾಹನದಲ್ಲಿ ಶ್ರೀ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಅವರ ಭಾವಚಿತ್ರವನ್ನು ಇರಿಸಿದರು ಈ ವೇಳೆ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸೇರಿದಂತೆ ಸಮುದಾಯದ ಗಣ್ಯರು ಪುಷ್ಪಾರ್ಚನೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.
ಈ ವೇಳೆ ಮಹದೇಶ್ವರಬೆಟ್ಟ ಶ್ರೀ ಸಾಲೂರು ಬೃಹನ್ಮಠ ಪೀಠಾಧೀಪತಿ ಶ್ರೀ ಡಾ. ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಹಡಪದ ಅಪ್ಪಣ್ಣ ಅವರು 12ನೇ ಶತಮಾನದ ಶರಣ ಪರಂಪರೆಯಾಗಿದೆ ಸಾಮಾಜಿಕ ನ್ಯಾಯ, ಸಮಾನತೆ, ಎಲ್ಲ ಮನುಕುಲವೇ ಒಂದೇ ಎಂಬ ವಾಕ್ಯವನ್ನು ಸಾರಿದರು. ಕಾಯಕವೇ ಕೈಲಾಸ ಎಂದು ಸಾರಿದ ಕಾಲಘಟ್ಟದಲ್ಲಿ, ಬಸವಣ್ಣ, ಅಲ್ಲಮ್ಮ ಪ್ರಭು, ಹಡಪದ ಹಪ್ಪಣ್ಣ, ಮಾದರ ಚೆನ್ನಯ್ಯ, ಮಡಿವಾಳ ಮಾಚಿದೇವ ಈಗೆ ಅನೇಕ ಶರಣ ಪರಂಪರೆ ಹಾದಿಯಲ್ಲಿ ಬಂದಂತ ಕರ್ನಾಟಕ ನಾಡು ಇಲ್ಲಿ ಜನಸಿದ ನಾವೇ ದನ್ಯರು ಎಂದರಲ್ಲದೆ ಅಪ್ಪಣ್ಣ ಅವರ ತತ್ವ, ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಮಹದೇಶ್ವರಬೆಟ್ಟದ ಪುಣ್ಯ ಕ್ಷೇತ್ರದಲ್ಲಿ ಹಡಪದ ಹಪ್ಪಣ್ಣ ಅವರ ಜಯಂತಿ ಮಾಡುತ್ತಿರುವುದು ನಿಜಕ್ಕೂ ಸಮಾಜಕ್ಕೆ ಕಳಸಪ್ರಾಯವಾಗಿದೆ. ಸವಿತಾ ಸಮಾಜದವರು ಮಾಡುತ್ತಿರುವ ಕಾಯಕ ಮತ್ತು ಸೇವೆ ಮಾದಪ್ಪನ ಸೇವೆಯೂ ಆಗಿದೆ. ಎಲ್ಲರು ಒಗ್ಗಟ್ಟಿನಿಂದ ಸಮಾಜಮುಖಿಯಾಗಿ ಸೇವಕರ್ಯ ಮಾಡಲು ಮುಂದಾಗಬೇಕು ಸಮಾಜದ ಅಭಿವೃದ್ಧಿಗೆ ಶ್ರೀ ಮಲೆ ಮಹದೇಶ್ವರಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಹಾಗೂ ಶ್ರೀ ಮಠವು ಸಹಕಾರ ನೀಡಲಾಗುವುದು ಎಂದು ಹೇಳಿದರು.
ಬಳಿಕ ಅಲಂಕೃತ ವಾಹನದಲ್ಲಿ ಶ್ರೀ ಹಡಪದ ಅಪ್ಪಣ್ಣ ಅವರ ಭಾವಚಿತ್ರ ಮೆರವಣಿಗೆಯೂ ಶ್ರೀ ಮಲೆ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ಹೊರ ಆವರಣ ಸೇರಿದಂತೆ ಮಾರ್ಕೆಟ್ ರಸ್ತೆ, ಬಸ್ ನಿಲ್ದಾಣ, ಆಸ್ಪತ್ರೆ ರಸ್ತೆ ಹಾಗೂ ಬ್ಯಾಂಕ್ ಸರ್ಕಲ್ ಮೂಲಕ ಸಾಗಿ ಶ್ರೀ ಮಹದೇಶ್ವರ ಕಲ್ಯಾಣ ಮಂಟಪ ಬಳಿ ಮೆರವಣಿಗೆ ಅಂತ್ಯಗೊಂಡಿತ್ತು. ಕೀಲುಗೊಂಬೆ ಕುಣಿತ ತಮಟೆ, ನಗರಿ ಸೇರಿದಂತೆ ಮಂಗಳ ವಾದ್ಯಗಳೊಂದಿಗೆ ಮೆರವಣಿಗೆ ಸಾಗಿತ್ತು. ಈ ವೇಳೆ ಸವಿತಾ ಸಮಾಜದ ಹೆಣ್ಣು ಮಕ್ಕಳು ಕಳಸವನ್ನು ಹೊತ್ತುಕೊಂಡು ಮುಂದೆ ಸಾಗಿದರು ಸವಿತಾ ಸಮಾಜದ ಮುಖಂಡರು, ಯುವಕರು, ಮಹಿಳೆಯರು, ಮಕ್ಕಳು ಭಾಗವಹಿಸಿ ತಮಟೆ ಸದ್ದಿಗೆ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಸಮಾಜದ ಮುಖಂಡರು ಸಹ ಭಾಗಿಯಾಗಿದ್ದರು
ಮಲೆ ಮಹದೇಶ್ವರ ಬೆಟ್ಟ ಸವಿತಾ ಸಂಘದ ನಿಕಟ ಪೂರ್ವ ತಾಲೂಕು ಅಧ್ಯಕ್ಷರಾದ ರಾಜು ರವರು ಮಾತನಾಡಿ 12ನೇ ಶತಮಾನದಲ್ಲಿ ಶಿವಶರಣ ಹಡಪದ ಅಪ್ಪಣ್ಣ ರವರು ಬಸವಣ್ಣ ರವರ ಅನುಭವ ಮಂಟಪದಲ್ಲಿ ಕಾರ್ಯದರ್ಶಿಯಾಗಿ ಬಸವಣ್ಣನವರಿಗೆ ಆತ್ಮೀಯರಾಗಿದ್ದರು 250ಕ್ಕೂ ಹೆಚ್ಚು ವಚನಗಳನ್ನು ಬರೆದರು ಮಹಾಜ್ಞಾನಿ ವಚನಕಾರ ಶಿವಶರಣ ಇನ್ನೂ ಅನೇಕ ವಚನಗಳನ್ನು ಬರೆದು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದರು ಅವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸಿಕೊಂಡು ಹೋಗಬೇಕು ಎಂದರು ನೂತನ ಸವಿತ ಸಮಾಜದ ಅಧ್ಯಕ್ಷರಾದ ಶಿವು ವಡಿವೇಲ್ ತಂಬಿರವರು ಮಾತನಾಡಿ ಹಡಪದ ಅಪ್ಪಣ್ಣನವರ ಶಿವಶರಣ ಅವರ ಆದರ್ಶಗಳೇ ನಮಗೆ ಸ್ಪೂರ್ತಿಯಾಗಿದೆ ನಮ್ಮ ಸವಿತಾ ಸಮಾಜದ ಕುಲಬಾಂಧವರು ಕುಲ ಕಸುಬು ಜೊತೆಗೆ ನಮ್ಮ ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸವನ್ನು ನೀಡಬೇಕು ಸಮಾಜದಲ್ಲಿ ದೊಡ್ಡ ವ್ಯಕ್ತಿಯಾಗಿ ಮುಂದೆ ಬರಬೇಕು. ವಿವಿಧ ಸಮಾಜದ ಜೊತೆ ಉತ್ತಮ ಬಾಂಧವ್ಯಗಳನ್ನು ಬೆಳೆಸಿ ಎಲ್ಲರ ಜೊತೆ ಸಹಬಾಳ್ವೆಯಿಂದರಬೇಕು ಎಂದರು
ಇದೇ ಸಂದರ್ಭದಲ್ಲಿ ಶ್ರೀ ಮಲೆ ಮಹದೇಶ್ವರ ಸವಿತಾ ಸಮಾಜ ಸಂಘದ ಅಧ್ಯಕ್ಷ ಶಿವವಡಿವೇಲು (ತಂಬಿ), ನಿಕಟಪೂರ್ವ ಅಧ್ಯಕ್ಷ ರಾಜು, ಮದ್ದೂರು ತಾಲೂಕು ಅಧ್ಯಕ್ಷರು ಹಾಗೂ ಮಾಧ್ಯಮ ಮಿತ್ರರು ಟಿ ರಾಜಶೇಖರ್,
ಮುಖಂಡ ಮಹದೇವು, ಉಪಾಧ್ಯಕ್ಷ ಸಿದ್ದರಾಜು, ಗೌರವಾಧ್ಯಕ್ಷ ಕುಮಾರ್, ಕಾರ್ಯದರ್ಶಿ ದೇವರಾಜು, ಶ್ರೀನಿವಾಸ್, ರಂಗಸ್ವಾಮಿ, ಯುವಕ ಸಂಘದ ಅಧ್ಯಕ್ಷ ನಾಗೇಶ್, ರಂಗಸ್ವಾಮಿ, ಆನಂದ್, ಮಹೇಶ್, ವಿಷ್ಣು ಸೇರಿದಂತೆ ಸದಸ್ಯರು, ಮುಖಂಡರು ಮತ್ತಿತರರು ಇದ್ದರು.

