One-day training for farmers from Agricultural Extension Education Center

ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಿಂದ ರೈತರಿಗೆ ಒಂದು ದಿನದ ತರಬೇತಿ

ಕೊಪ್ಪಳ ಆಗಸ್ಟ್ 25, (ಕರ್ನಾಟಕ ವಾರ್ತೆ): ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ ವತಿಯಿಂದ ಮಂಗಳವಾರದಂದು ಶ್ರೀ ಶರಣ ಶಿಕ್ಷಣ ಕೇಂದ್ರ, ಕೊಪ್ಪಳದಲ್ಲಿ ರಾಮದುರ್ಗ ತಾಲೂಕಿನಿಂದ ಆಗಮಿಸಿದ ರೈತರಿಗೆ ಒಂದು ದಿನದ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ತರಬೇತಿಯಲ್ಲಿ ಸಮಗ್ರ ಕೃಷಿ ಕುರಿತು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾಧಿಕಾರಿ ಡಾ. ಬಿ.ಆರ್. ಬದ್ರಿ ಪ್ರಸಾದ್ ಅವರು ಮಾಹಿತಿ ನೀಡುತ್ತಾ ಅನೇಕ ಪ್ರಗತಿಪರ ರೈತರ ಉದಾಹರಣೆ ಮೂಲಕ ಸಮಗ್ರ ಕೃಷಿ ಮೌಲ್ಯವರ್ಧನೆ ಮತ್ತು ನಿರಂತರ ಆದಾಯದ ಕುರಿತು ಹಾಗೂ ಜೇನು ಸಾಕಾಣಿಕೆ ಕುರಿತು ಸಮಗ್ರ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಶ್ರೀನಿವಾಸ ಕುಲಕರ್ಣಿರವರು ಮೀನು ಸಾಕಣೆ ಮತ್ತು ಇಲಾಖೆಯಲ್ಲಿನ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ನಿವೃತ್ತ ತೋಟಗಾರಿಕಾ ತಜ್ಞ ವಾಮನ ಮೂರ್ತಿ ಹಾಗೂ ಕೃಷಿ ತಂತ್ರಜ್ಞಾನ ಸಂಸ್ಥೆ ಕೊಪ್ಪಳ ಸದಸ್ಯರು ಸಮಗ್ರ ತೋಟಗಾರಿಕೆ ಕುರಿತು ಮಾಹಿತಿ ನೀಡಿದರು. ರಾಮದುರ್ಗ ತಾಲ್ಲೂಕಿನ ಕೃಷಿ ಇಲಾಖೆ ಆತ್ಮಯೋಜನೆಯ ರವಿ ಲಮಾಣಿ ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರವೀಣ್ ವಂದಿಸಿದರು.

