ವೀರು ಗ್ರೂಪ್ ಕಚೇರಿಗೆ ಕೆ.ಎಸ್. ಮಹಾದೇವಪ್ರಸಾದ್ ಭೇಟಿ; ವಕೀಲರಿಗೆ ಕೃತಜ್ಞತೆ

H.Mallikarjun
H.Mallikarjun - Kalyanasiri
1 Min Read

K.S. Mahadevaprasad visits Veeru Group office; expresses gratitude to the lawyer.




ವೀರು ಗ್ರೂಪ್ ಕಚೇರಿಗೆ ಕೆ.ಎಸ್. ಮಹಾದೇವಪ್ರಸಾದ್ ಭೇಟಿ; ವಕೀಲರಿಗೆ ಕೃತಜ್ಞತೆ

ಜಾಹೀರಾತು


ಗಂಗಾವತಿ, ಆ.25: ಕರ್ನಾಟಕ ವಕೀಲರ ಪರಿಷತ್ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸಿ ಆಯ್ಕೆ ಮಾಡಿದ ಗಂಗಾವತಿಯ ವಕೀಲರಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಕರ್ನಾಟಕ ವಕೀಲರ ಪರಿಷತ್ ಸದಸ್ಯ ಕೆ.ಎಸ್. ಮಹಾದೇವಪ್ರಸಾದ್ ಅವರು ಮಂಗಳವಾರ ನಗರದ ವೀರು ಗ್ರೂಪ್ ಕಚೇರಿಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಹಾದೇವಪ್ರಸಾದ್, ಚುನಾವಣೆಯಲ್ಲಿ ತಮ್ಮ ಮೇಲೆ ವಿಶ್ವಾಸವಿಟ್ಟು ಬೆಂಬಲಿಸಿದ ಎಲ್ಲ ವಕೀಲರಿಗೆ ಹೃತ್ಪೂರ್ವಕ ಧನ್ಯವಾದ ಸಲ್ಲಿಸಿದರು. ವಕೀಲರ ಹಿತಾಸಕ್ತಿ, ಸಂಘದ ಅಭಿವೃದ್ಧಿ ಹಾಗೂ ವಕೀಲ ಸಮುದಾಯದ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದರು.


ವೀರು ಗ್ರೂಪ್ ಅಧ್ಯಕ್ಷ ಹಾಗೂ ವಕೀಲರಾದ ದೇವಾನಂದ್ ಆರ್. ಮಾತನಾಡಿ, ಕರ್ನಾಟಕ ವಕೀಲರ ಪರಿಷತ್ ಚುನಾವಣೆಯಲ್ಲಿ ಕೆ.ಎಸ್. ಮಹಾದೇವಪ್ರಸಾದ್ ಅವರು ಆಯ್ಕೆಯಾಗಿರುವುದು ಗಂಗಾವತಿಯ ವಕೀಲ ಸಮುದಾಯಕ್ಕೆ ಹೆಮ್ಮೆಯ ವಿಷಯವಾಗಿದೆ. ವಕೀಲರ ಸಮಸ್ಯೆಗಳಿಗೆ ಸಮರ್ಪಕವಾಗಿ ಸ್ಪಂದಿಸುವುದರ ಜೊತೆಗೆ ಅವರ ಹಕ್ಕು ಮತ್ತು ಹಿತಾಸಕ್ತಿಗಳ ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಆಶಿಸಿದರು.
ಬಳಿಕ ವೀರು ಗ್ರೂಪ್ ಕಚೇರಿ ವತಿಯಿಂದ ಕೆ.ಎಸ್. ಮಹಾದೇವಪ್ರಸಾದ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಗಂಗಾವತಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಎಂ. ಮಂಜುನಾಥ, ವಕೀಲರಾದ ಶರಣಪ್ಪ ಕಂದಕೂರು, ಪ್ರಕಾಶ್, ಮಲ್ಲಿಕಾರ್ಜುನ ಜಾಜಿ, ಶರಣಪ್ಪ ಸಜ್ಜಿವಾಲ್, ಶಿವಪ್ಪ ಯಲಬುರ್ಗಾ, ಗಂಗಾವತಿ ವಕೀಲರ ಸಂಘದ ಮಾಜಿ ಅಧ್ಯಕ್ಷ ಶರಣಗೌಡ ಎಂ. ಪಾಟೀಲ್ ಸೇರಿದಂತೆ ಹಲವಾರು ವಕೀಲರು ಉಪಸ್ಥಿತರಿದ್ದರು.

Total Views: 0
ಜಾಹೀರಾತು
Share This Article