Organization of Taluk-level Pre-University College Sports Meet


ತಾಲೂಕು ಮಟ್ಟದ ಪದವಿ ಪೂವ೯ ಕಾಲೇಜುಗಳ ಕ್ರೀಡಾಕೂಟ ಆಯೋಜನೆ

ಗಂಗಾವತಿ : ನಗರದ ಕನಕಗಿರಿ ರಸ್ತೆಯಲ್ಲಿ ಇರುವ ತಾಲೂಕು ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಪದವಿ ಪೂವ೯ ಇಲಾಖೆ ಹಾಗೂ ಲಯನ್ಸ್ ಚಾರಿಟೇಬಲ್ ಟ್ರಸ್ಟ್ ಮತ್ತು ಲಯನ್ಸ್ ಸಂಯುಕ್ತ ಪದವಿ ಪೂವ೯ ಕಾಲೇಜು ಸಹಯೋಗದೊಂದಿಗೆ ಆ. 10 ಹಾಗೂ 11 ರಂದು ಎರಡು ದಿನಗಳ ತಾಲೂಕು ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ.
ಕ್ರೀಡಾಕೂಟದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿಯವರು ನೆರವೇರಿಸಲಿದ್ದಾರೆ. ಕ್ರೀಡಾ ಧ್ವಜಾರೋಹಣವನ್ನು ಸಚಿವರಾ ಬಸವರಾಜ ರಾಯರೆಡ್ಡಿಯವರು ನಡೆಸಲಿದ್ದಾರೆ. ಕ್ರೀಡಾಕೂಟದ ಪಥಸಂಚಲನ ಸ್ವೀಕಾರವನ್ನು ವಿರೋಧ ಪಕ್ಷದ ಮುಖ್ಯ ಸಚೇತಕರಾದ ದೊಡ್ಡನಗೌಡ ಪಾಟೀಲ್ ಅವರು ಮಾಡಲಿದ್ದಾರೆ. ಇನ್ನೂ ಕ್ರೀಡಾಕೂಟದ ಅಧ್ಯಕ್ಷತೆಯನ್ನು ಗಂಗಾವತಿ ಶಾಸಕರಾದ ಗಾಲಿ ಜನಾಧ೯ನ ರೆಡ್ಡಿಯವರು ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದರಾದ ರಾಜಶೇಖರ ಹಿಟ್ನಾಳ, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಪ್ರಮುಖರಾದ ಶಶೀಲ್ ಜಿ.ನಮೋಶಿ, ಡಾ.ಚಂದ್ರಶೇಖರ ಬಿ.ಪಾಟೀಲ್, ಶರಣಗೌಡ ಅನ್ನದಾನಗೌಡ ಪಾಟೀಲ್ ಬಯ್ಯಾಪೂರ, ಹಸನಸಾಬ್ ನಬೀಬಸಾಬ್ ದೋಟಿಹಾಳ, ರೆಡ್ಡಿ ಶ್ರೀನಿವಾರ ಇನ್ನೂ ವಿಶೇಷ ಆಹ್ವಾನಿತರಾಗಿ ಶಾಲಾ ಶಿಕ್ಷಣ ಪದವಿ ಪೂವ೯ ಇಲಾಖೆಯ ಉಪ ನಿದೇ೯ಶಕರಾದ ಜಗದೀಶ್.ಎಚ್, ತಹಸೀಲ್ದಾರ ವಸಂತಕುಮಾರಿ, ನಗರಸಭೆ ಪೌರಾಯುಕ್ತ ವಿರುಪಾಕ್ಷಮೂತಿ೯, ಡಿವೈಎಸ್ಪಿ ಜಯಪ್ಪ ನ್ಯಾಮಗೌಡರ್, ಕ್ಷೇತ್ರ ಶಿಕ್ಷಣಾಧಿಕಾರಿ ನಟೇಶ್ ಭಾಗವಹಿಸಲಿದ್ದಾರೆ. ಕ್ರೀಡಾಕೂಟದ ಸಮಾರೋಪ ಕಾಯ೯ಕ್ರಮವು ಆ.11 ರಂದು ನಡೆಯಲಿದ್ದು, ಸಮಾರೋಪದ ಅಧ್ಯಕ್ಷತೆಯನ್ನು ಲಯನ್ಸ್ ಚಾರಿಟೇಬಲ್ ಟ್ರಸ್ಟ್ ನ ಅಧಯಕ್ಷರಾದ ಡಾ.ಚಂದ್ರಪ್ಪ ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಟ್ರಸ್ಟ್ ನ ಕಾಯ೯ದಶಿ೯ಗಳಾದ ಡಾ.ಜಂಬುನಾಥಗೌಡ, ಖಜಾಂಚಿಗಳಾದ ಟೀಕಂದಾಸ್, ಲಯನ್ಸ್ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಗಳಾದ ಚಂದ್ರಗೌಡ ಪೊಲೀಸ್ ಪಾಟೀಲ್ ಭಾಗವಹಿಸಲಿದ್ದಾರೆ ಎಂದು ಲಯನ್ಸ್ ಸಂಯುಕ್ತ ಪದವಿ ಪೂವ೯ ಕಾಲೇಜಿನ ಪ್ರಾಂಶುಪಾಲರಾದ ವಿಜಯಲಕ್ಷ್ಮಿಯವರು ಪ್ರಕಟಣೆ ತಿಳಿಸಿದ್ದಾರೆ. ಪ್ರಕಟಣೆ ತಿಳಿಸಿದ್ದಾರೆ. *
