Bone and joint day celebration at ESIC
ಇಎಸ್ಐಸಿಯಲ್ಲಿ ಎಲುಬು, ಕೀಲು ದಿನ ಆಚರಣೆ
ಬೆಂಗಳೂರು: ಇಂಡಿಯನ್ ಆರ್ಥೋಪೆಡಿಕ್ ಅಸೋಸಿಯೇಷನ್ ನಿಂದ ಎಲುಬು ಮತ್ತು ಕೀಲು ದಿನವನ್ನು ರಾಜಾಜಿನಗರದ ಇಎಸ್ಐಸಿ ಆಸ್ಪತ್ರೆಯ ಎಂಸಿಆರ್ ನಲ್ಲಿ ಆಚರಿಸಲಾಯಿತು.
ಆಸ್ಪತ್ರೆಯ ಆವರಣದಲ್ಲಿ ನಡೆದ ಎಲುಬು ಮತ್ತು ಕೀಲು ಸಪ್ತಾಹದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಆಸ್ಪತ್ರೆಯ ಆವರಣದಲ್ಲಿ ನಡೆದ ಎಲುಬು ಮತ್ತು ಕೀಲು ಸಪ್ತಾಹದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮೊದಲ ಎರಡು ದಿನಗಳಲ್ಲಿ ಅಸ್ಥಿಚಿಕಿತ್ಸಾ (ಆರ್ಥೋಪೆಡಿಕ್ಸ್) ವಿಭಾಗದಿಂದ ಬಿಎಮ್‌ಡಿ ಶಿಬಿರ ಏರ್ಪಡಿಸಲಾಗಿತ್ತು. ವಿಭಾಗದ ಒಪಿಡಿಯಲ್ಲಿ ಪೋಸ್ಟರ್ ಪ್ರಸ್ತುತಿಗಳ ಮೂಲಕ ಸಾರ್ವಜನಿಕ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.
ನಂತರ “ಆಸ್ಟಿಯೋಸಿಸ್” ವಿಷಯದ ಕುರಿತು ಚರ್ಚಾಗೋಷ್ಠಿ ನಡೆಯಿತು.
ನಂತರ “ಆಸ್ಟಿಯೋಸಿಸ್” ವಿಷಯದ ಕುರಿತು ಚರ್ಚಾಗೋಷ್ಠಿ ನಡೆಯಿತು.
ಡೀನ್ ಡಾ. ಜಿತೇಂದ್ರ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಬಿಒಎಸ್ ಅಧ್ಯಕ್ಷ ಡಾ. ಭರತ್ ಕಡಾಡಿ ಮತ್ತು ಕೆಒಎ ನಿಯೋಜಿತ ಅಧ್ಯಕ್ಷ ಡಾ. ಭರತ್ ರಾಜು, ಸಂಘಟನಾ ಸಮಿತಿಯ ಅಧ್ಯಕ್ಷ ಡಾ. ನವೀನ್ ಕುಮಾರ್, ಸಂಘಟನಾ ಕಾರ್ಯದರ್ಶಿ ಡಾ. ಮೊನೇಶ್. ವಿಭಾಗದ ಪ್ರೊಫೆಸರ್ ಮತ್ತು ಮುಖ್ಯಸ್ಥರಾದ ಡಾ. ಪುರುಷೋತ್ತಮ್, ವಿವಿಧ ವಿಭಾಗಗಳ ಇತರ ಅಧ್ಯಾಪಕರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
Total Views:
0

