Tenders invited for the sale of cardboard boxes and broken furniture at the Principal District and Sessions Court
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ರಟ್ಟಿನ ಡಬ್ಬಿಗಳು,
ಮುರಿದ ಪೀಠೋಪಕರಣಗಳ ಮಾರಾಟಕ್ಕೆ ದರಪಟ್ಟಿ ಆಹ್ವಾನ

ಕೊಪ್ಪಳ ಆಗಸ್ಟ್ 06 (ಕರ್ನಾಟಕ ವಾರ್ತೆ): ಕೊಪ್ಪಳದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯ ಹಾಗೂ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯಗಳಲ್ಲಿ ಇರುವ ರಟ್ಟಿನ ಡಬ್ಬಿಗಳು (ಬಾಕ್ಸ್ಗಳು) ಮತ್ತು ಮುರಿದ ಪೀಠೋಪಕರಣಗಳನ್ನು ಹೆಚ್ಚಿನ ದರ ಸೂಚಿಸುವವರಿಗೆ ಮಾರಾಟ ಮಾಡಲು ನಿರ್ಧರಿಸಲಾಗಿದ್ದು, ಈ ಬಗ್ಗೆ ದರಪಟ್ಟಿ ಆಹ್ವಾನಿಸಲಾಗಿದೆ.
ಆಸಕ್ತರು ನ್ಯಾಯಾಲಯಕ್ಕೆ ಭೇಟಿ ನೀಡಿ ಮಾರಾಟಕ್ಕಿರುವ ರಟ್ಟಿನ ಬಾಕ್ಸ್ಗಳು ಹಾಗೂ ಪೀಠೋಪಕರಣಗಳನ್ನು ಪರಿಶೀಲಿಸಿ, ಅವುಗಳಿಗೆ ತಮ್ಮ ದರವನ್ನು ನಮೂದಿಸಿ ಮುಚ್ಚಿದ ಲಕೋಟೆಯಲ್ಲಿ ಆಗಸ್ಟ್ 18 ರೊಳಗಾಗಿ ಕಚೇರಿ ಅವಧಿಯೊಳಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಕೊಪ್ಪಳ ಇಲ್ಲಿಗೆ ಸಲ್ಲಿಸಬೇಕು.
ಸ್ವೀಕರಿಸಲಾದ ಮುಚ್ಚಿದ ಲಕೋಟೆಗಳನ್ನು ಆಗಸ್ಟ್ 20 ರಂದು ಸಂಜೆ 5 ಗಂಟೆಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕೊಠಡಿಯಲ್ಲಿ ತೆರೆಯಲಾಗುವುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಗೌರವಾನ್ವಿತ ಲತಾಕುಮಾರಿ ಎಂ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
