Missing person: Request from Bevooru police station to help in locating
ವ್ಯಕ್ತಿ ಕಾಣೆ: ಪತ್ತೆಗೆ ಸಹಕರಿಸಲು ಬೇವೂರು ಪೊಲೀಸ್ ಠಾಣೆಯಿಂದ ಮನವಿ
ಕೊಪ್ಪಳ ಜುಲೈ 28 (ಕರ್ನಾಟಕ ವಾರ್ತೆ): ಕುಕನೂರು ತಾಲೂಕಿನ ಮಂಗಳೂರು ಗ್ರಾಮದ ನಿವಾಸಿಯಾದ ಮಂಜುನಾಥ ತಂದೆ ಶಂಕ್ರಪ್ಪ ನಡುಲಮನಿ ಈತನು ಕಾಣೆಯಾಗಿದ್ದು, ಪತ್ತೆಗೆ ಸಹಕರಿಸುವಂತೆ ಬೇವೂರು ಪೊಲೀಸ್ ಠಾಣೆಯ ಉಪ ನಿರೀಕ್ಷಕರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಮಂಜುನಾಥ ತಂದೆ ಶಂಕ್ರಪ್ಪ ನಡುಲಮನಿ ಎಂಬ ವ್ಯಕ್ತಿಯು 2026ರ ಫೆಬ್ರವರಿ 2 ರಂದು ಮದ್ಯಾಹ್ನ 3.30 ಗಂಟೆಗೆ ತಮ್ಮ ಮನೆಯಿಂದ ಯಾವುದೋ ಕಾರಣಕ್ಕೆ ಯಾರಿಗೂ ಹೇಳದೆ ಕೇಳದೆ ಹೋಗಿದ್ದು,ವಾಪಸ್ ಬಂದಿರದ ಕಾರಣ ಎಲ್ಲ ಕಡೆ ವಿಚಾರಿಸಿ ಹುಡುಕಿದರು ಸಿಗದೆ ಇದ್ದುದ್ದರಿಂದ ಕಾಣೆಯಾದ ವ್ಯಕ್ತಿಯ ತಮ್ಮನು ದೂರು ನೀಡಿದ್ದು, ಈ ಬಗ್ಗೆ ಬೇವೂರು ಪೊಲೀಸ್ ಠಾಣೆ ಗುನ್ನೆ ನಂ.12/2026 ಕಲಂ ಮನುಷ್ಯ ಕಾಣೆ ಪ್ರಕರಣ ದಾಖಲಾಗಿದ್ದು,ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ವ್ಯಕ್ತಿ ಚಹರೆ ವಿವರ: ಮಂಜುನಾಥ ತಂದೆ ಶಂಕ್ರಪ್ಪ ನಡುಲಮನಿ, ವಯಸ್ಸು 31 ವರ್ಷ, 5.6 ಅಡಿ ಎತ್ತರ, ಸಾಧಾರಣ ಮೈಕಟ್ಟು, ಉದ್ದನೆಯ ಮುಖ, ಉದ್ದನೆಯ ಮೂಗು, ಕಪ್ಪು ಮೈಬಣ್ಣ, ಕಪ್ಪು ಕೂದಲು ಇದ್ದು, ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಾನೆ. ವ್ಯಕ್ತಿಯು ಮನೆಯಿಂದ ಹೊರಡುವಾಗ ನಸಿಪುಡಿ ಬಣ್ಣದ ಕೆಂಪು ಮತ್ತು ಬಿಳಿ ಗೆರೆಯುಳ್ಳ ಟೀಶರ್ಟ್, ಚಾಕಲೇಟ್ ಬಣ್ಣದ ಪ್ಯಾಂಟ್ ಧರಿಸುತ್ತಾನೆ. ಈ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ಕೊಪ್ಪಳ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ದೂರವಾಣಿ ಸಂಖ್ಯೆ 08539-23011, ಕೊಪ್ಪಳ ಡಿ.ಎಸ್.ಪಿ. ಕಚೇರಿ ದೂರವಾಣಿ ಸಂಖ್ಯೆ: 08539-230432, ಅಥವಾ ಯಲಬುರ್ಗಾ ಸಿಪಿಐ ಕಚೇರಿ ದೂರವಾಣಿ ಸಂಖ್ಯೆ: 08534-220133 ಮತ್ತು ಬೇವೂರು ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ: 08534-227641 ಅಥವಾ ಮೊ.ಸಂ: 9480803751 ಗೆ ಸಂಪರ್ಕಿಸಿ ಮಾಹಿತಿ ನೀಡಲು ಬೇವೂರು ಪೊಲೀಸ್ ಠಾಣೆಯ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Total Views:
1