Construction of a new 50-bed 'Sukanya' Old Age Home building in Athani: Appeal for generous support from donors.

ಅಥಣಿಯಲ್ಲಿ 50 ಹಾಸಿಗೆಗಳ ನೂತನ ಸುಕನ್ಯಾ ವೃದ್ಧಾಶ್ರಮ ಕಟ್ಟಡ ನಿರ್ಮಾಣ: ದಾನಿಗಳ ಉದಾರ ನೆರವಿಗೆ ಮನವಿ
ಅಥಣಿ:ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಮಕೇರಿ ರಸ್ತೆಯಲ್ಲಿರುವ ‘ಸುಕನ್ಯಾ ವೃದ್ಧಾಶ್ರಮ’ದಲ್ಲಿ ಹಿರಿಯ ನಾಗರಿಕರು, ನಿರ್ಗತಿಕರು, ನೊಂದವರು ಹಾಗೂ ಅನಾಥರ ಬದುಕಿಗೆ ಆಸರೆ ನೀಡುವ ಉದ್ದೇಶದಿಂದ 50 ಹಾಸಿಗೆಗಳುಳ್ಳ ನೂತನ ಕಟ್ಟಡ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ.
ಸಮಾಜದಲ್ಲಿ ಆಸರೆಯಿಲ್ಲದೆ ಕಷ್ಟಪಡುತ್ತಿರುವ ಹಿರಿಯರಿಗೆ ಸೂಕ್ತ ವಸತಿ, ಆಹಾರ ಮತ್ತು ಆರೈಕೆ ಒದಗಿಸುವುದು ಈ ನೂತನ ಯೋಜನೆಯ ಮುಖ್ಯ ಗುರಿಯಾಗಿದೆ. “ಸೇವೆಯೇ ಮಹಾ ದಾಸೋಹ” ಎಂಬ ತತ್ತ್ವದೊಂದಿಗೆ ಆರಂಭವಾಗಿರುವ ಈ ಪುಣ್ಯ ಕಾರ್ಯವು ಶೀಘ್ರವಾಗಿ ಪೂರ್ಣಗೊಳ್ಳಲು ದಯಾಶೀಲರು, ಸಮಾಜಸೇವಕರು, ಉದ್ಯಮಿಗಳು ಹಾಗೂ ಸಾರ್ವಜನಿಕರು ಮುಕ್ತ ಮನಸ್ಸಿನಿಂದ ಧನಸಹಾಯ ಅಥವಾ ಸಾಮಗ್ರಿ ರೂಪದಲ್ಲಿ ಸಹಾಯ ಹಸ್ತ ನೀಡಬೇಕಾಗಿ ವಿನಂತಿಸಲಾಗಿದೆ.
ದಾನಿಗಳು ಮತ್ತು ನೆರವು ನೀಡಬಯಸುವವರು ಸಂಪರ್ಕಿಸಬೇಕಾದ ವಿಳಾಸ ಹಾಗೂ ಮಾಹಿತಿ:
ಸ್ಥಳ: ಸುಕನ್ಯಾ ವೃದ್ಧಾಶ್ರಮ, ಅಥಣಿ – ಚಮಕೇರಿ ರಸ್ತೆ, ಅಥಣಿ.
ಸಂಪರ್ಕ ಸಂಖ್ಯೆ: 9880635268
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆಸರೆಯಾಗುವ ಈ ಯೋಜನೆಗೆ ಪ್ರತಿಯೊಬ್ಬರೂ ಕೈಜೋಡಿಸಿ ಪುಣ್ಯಕಾರ್ಯದಲ್ಲಿ ಭಾಗಿಯಾಗಬೇಕಾಗಿ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸಂಘಟಕರು ಮನವಿ ಮಾಡಿದ್ದಾರೆ.
ವರದಿ ಮಹೇಶ್ ಶರ್ಮಾ

