ಐಐಹೆಚ್ಎಂಆರ್ ಸಂಸ್ಥೆಯ 15ನೇ ಘಟಿಕೋತ್ಸವ

H.Mallikarjun
H.Mallikarjun - Kalyanasiri
1 Min Read

ಐಐಹೆಚ್ಎಂಆರ್ ಸಂಸ್ಥೆಯ 15ನೇ ಘಟಿಕೋತ್ಸವ

ವೈದ್ಯಕೀಯ ಲೋಕದ ವೃತ್ತಿಗೆ ಬದ್ಧತೆ ಬೇಕು ಡಾ. ಎಸ್. ಡಿ. ಗುಪ್ತಾ

15th Convocation of IIHMR




  ಬೆಂಗಳೂರು,ಜುಲೈ 25: ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳು ವೃತ್ತಿಪರ ಜಗತ್ತಿಗೆ ಪ್ರವೇಶಿಸುವಾಗ, ನಿಮ್ಮ ನಡವಳಿಕೆಯನ್ನು ಉತ್ತಮ ಪಡಿಸಿಕೊಂಡು, ಸಂವಹನ ಕೌಶಲ್ಯ ಮತ್ತು ನಿರಂತರ ಕಲಿಕೆಯನ್ನು ಹವ್ಯಾಸವಾಗಿಸಿಕೊಳ್ಳಬೇಕು. ಆ ಬದ್ಧತೆಯೇ ನಿಮ್ಮನ್ನು ಉದ್ಯೋಗ ಮಾರುಕಟ್ಟೆಯಲ್ಲಿ ಸ್ಥಿರವಾಗಿರುವಂತೆ ರೂಪಿಸುತ್ತದೆ ಎಂದು ಬೆಂಗಳೂರಿನ ಐಐಹೆಚ್ಎಂಆರ್ ಸಂಸ್ಥೆಯ ಅಧ್ಯಕ್ಷ ಎಸ್. ಡಿ. ಗುಪ್ತಾ ಹೇಳಿದರು.
ಅವರು 15ನೆಯ ಘಟಿಕೋತ್ಸವದಲ್ಲಿ ಉತ್ತೀರ್ಣ ಆದವರಿಗೆ ಪದವಿ ಪ್ರಧಾನ ಮಾಡಿ ಮಾತನಾಡಿ
ಶೈಕ್ಷಣಿಕ ಪಯಣದಲ್ಲಿ ಪದವಿ ಮಹತ್ವದ ಮೈಲಿಗಲ್ಲಾಗಿದ್ದು ಭವಿಷ್ಯ ಜೀವನಕ್ಕೆ ಭದ್ರ ಅಡಿಪಾಯವಾಗಲಿದೆ. ಪ್ರಸ್ತುತ ವಿಶ್ವದ ಬಹುತೇಕ ಸೇವಾ ಮತ್ತು ಉತ್ಪದನಾ ವಲಯದಲ್ಲಿ
ಆಸ್ಪತ್ರೆ ಮತ್ತು ಆರೋಗ್ಯ ನಿರ್ವಹಣೆ ಅನಿವಾರ್ಯ ವಾಗಿದೆ. ಪೋಸ್ಟ್ ಗ್ರಾಜುಯೇಟ್ ಡಿಪ್ಲೊಮಾ ಇನ್ ಮ್ಯಾನೇಜ್‌ಮೆಂಟ್ ಪಡೆದವರು ಆಸ್ಪತ್ರೆ ನಿರ್ವಹಣೆ, ಫಾರ್ಮಾಸ್ಯುಟಿಕಲ್ ನಿರ್ವಹಣೆ ವಿಶೇಷೀಕರಣಗಳು ಕೃತಕ ಬುದ್ಧಿಮತ್ತೆ ಮತ್ತು ಡೇಟಾ ಸೈನ್ಸ್‌ ವಿಭಾಗಗಳಿಗೆ ಅಪಾರ ಬೇಡಿಕೆ ಇದೆ. ಉದ್ಯೋಗಾವಕಾಶಗಲೂ ವಿಪುಲವಾಗಿವೆ ಎಂದರು.
ವಿಶ್ವ ಮಧುಮೇಹ ಪ್ರತಿಷ್ಠಾನ, ಕೋಪನ್‌ಹೇಗನ್,
ಅಧ್ಯಕ್ಷರಾದ ಡಾ. ಅನಿಲ್ ಕಪೂರ್, ಮಾತನಾಡಿ ಚಿಕಿತ್ಸಾ ವಿಭಾಗದ ಸೇವೆಗೆ ಕೌಶಲ್ಯ ಭರಿತ ಜ್ಞಾನ, ಡಿಜಿಟಲ್ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯನ್ನು ಮೇಳೖಸಿಕೊಂಡು ಅರ್ಥಪೂರ್ಣ ಪರಿವರ್ತನೆ ತರಬೇಕು. ರೋಗಗಳಿಗೆ ಚಿಕಿತ್ಸೆ ನೀಡುವುದಷ್ಟೇ ಅಲ್ಲದೆ, ತಡೆಗಟ್ಟುವ ಮತ್ತು ಗುಣಮುಖರಾಗಿ ಜೀವನಪರ್ಯಂತ ನೆಮ್ಮದಿ ಬಯಸಿ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ನಿರ್ದೇಶಕರಾದ ಡಾ. ಉಷಾ ಮಂಜುನಾಥ್ ಲಭ್ಯವಿರುವ ಕೋರ್ಸ್ ಮಾಹಿತಿ ನೀಡಿದರು.
ಸಮಾರಂಭದಲ್ಲಿ PHANA ಫಾನ ಅಧ್ಯಕ್ಷೆ ಸ್ತ್ರೀರೋಗ ತಜ್ಞರಾದ ಡಾ. ಶೋಭಾ ಪ್ರಕಾಶ್, ಡಾ. ಸಿ. ಎಸ್. ಕೇದಾರ್, ಸೈಂಟಿಸ್ಟ್ ಡಾ. ನಚಿಕೇತ್ ಮೋರ್ ಇತರ ಗಣ್ಯರು ಉಪಸ್ಥಿತರಿದ್ದರು.

ಇಲೆಕ್ಟ್ರಾನಿಕ್ ಸಿಟಿ ಯಲ್ಲಿನ ಐಐಹೆಚ್ಎಂಆರ್ ಸಂಸ್ಥೆಯ 15ನೆಯ ಘಟಿಕೋತ್ಸವದಲ್ಲಿ 125 ವಿದ್ಯಾರ್ಥಿಗಳಿಗೆ ಅಧ್ಯಕ್ಷ ಎಸ್. ಡಿ. ಗುಪ್ತಾ
ಪದವಿ ಪ್ರಧಾನ ಮಾಡಿದರು. ಗಣ್ಯರಿದ್ದಾರೆ

Total Views: 0
Share This Article