Higher Education Minister Basavaraj Rayareddy’s tour of Koppal district from August 30 to September 2.
ಆ. 30 ರಿಂದ ಸೆಪ್ಟೆಂಬರ್ 02ರವರೆಗೆ ಕೊಪ್ಪಳ ಜಿಲ್ಲೆಯಲ್ಲಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರ ಪ್ರವಾಸ
ಕೊಪ್ಪಳ ಆಗಸ್ಟ್ 27 (ಕರ್ನಾಟಕ ವಾರ್ತೆ): ಉನ್ನತ ಶಿಕ್ಷಣ ಸಚಿವರಾದ ಬಸವರಾಜ ರಾಯರಡ್ಡಿ ಅವರು ಆಗಸ್ಟ್ 30 ರಿಂದ ಸೆಪ್ಟೆಂಬರ್ 02 ರವರೆಗೆ ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಸಚಿವರು ಆ. 30ರಂದು ಬೆಳಿಗ್ಗೆ 10 ಗಂಟೆಗೆ ಹೊಸಪೇಟೆಯಿಂದ ರಸ್ತೆ ಮೂಲಕ ನಿರ್ಗಮಿಸಿ 10.30ಕ್ಕೆ ಕೊಪ್ಪಳಕ್ಕೆ ಆಗಮಿಸಿ, ಯಲಬುರ್ಗಾ ಮತ್ತು ಕುಕನೂರು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ 1.30ಕ್ಕೆ ಕೊಪ್ಪಳದಿಂದ ನಿರ್ಗಮಿಸಿ, ಮಧ್ಯಾಹ್ನ 2 ಗಂಟೆಗೆ ಕುಕನೂರಿಗೆ ಆಗಿಮಿಸಿ, ಮುಸ್ಲಿಂ ಸಮುದಾಯದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸುವವರು. 4 ಗಂಟೆಗೆ ಮುಖ್ಯ ಮಾರುಕಟ್ಟೆ ಪ್ರಾಂಗಣಕ್ಕೆ ‘ಮುಂಡರಗಿ ಶ್ರೀ ಜಗದ್ಗುರು ಅನ್ನದಾನೀಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣ’ ನಾಮಕರಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಬಳಿಕ 4.30ಕ್ಕೆ ಅಲ್ಲಿಂದ ನಿರ್ಗಮಿಸಿ, ಸಂಜೆ 4.45 ಗಂಟೆಗೆ ಯಲಬುರ್ಗಾಕ್ಕೆ ಆಗಮಿಸಿ ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರೊಂದಿಗೆ ಯಲಬುರ್ಗಾ ನಗರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದು, ಯಲಬುರ್ಗಾ ತಹಶೀಲ್ದಾರ ಕಛೇರಿ/ ತಾಲೂಕು ಆಡಳಿತ ಕೇಂದ್ರ (ಪ್ರಜಾ ಸೌಧ) ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ, ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಸಮುದಾಯ ಭವನದ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ, ಸಂಗೊಳ್ಳಿ ರಾಯಣ್ಣ ಕ್ರೀಡಾಂಗಣದ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ, ಜಗದ್ಗುರು ಶ್ರೀ ಬಸವೇಶ್ವರ ಪುತ್ಥಳಿ ಸ್ಥಾಪನೆಗೆ ಶಂಕುಸ್ಥಾಪನೆ, ಯಲಬುರ್ಗಾ ಪಟ್ಟಣದ ಸರ್ಕಾರಿ ಉರ್ದು ಪ್ರೌಢಶಾಲೆ ಕಟ್ಟಡ ಮತ್ತು ಪೀಠೋಪಕರಣಗಳ ಪೂರೈಸುವ ಕಾಮಗಾರಿಯ ಉದ್ಘಾಟನೆ, ಸರ್ಕಾರಿ ಪದವಿ ಪೂರ್ವ ಕಾಲೇಜು 4 ಕೊಠಡಿಗಳ ಉದ್ಘಾಟನೆ, ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು 4 ಕೊಠಡಿಗಳ ಉದ್ಘಾಟನೆ, ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು 2 ಕೊಠಡಿಗಳ ಉದ್ಘಾಟನೆ ನೆರವೇರಿಸುವರು. ನಂತರ ಅಂದು ರಾತ್ರಿ 9 ಗಂಟೆಗೆ ಯಲಬುರ್ಗಾದಿಂದ ನಿರ್ಗಮಿಸಿ ಹೊಸಪೇಟೆಯಲ್ಲಿ ವಾಸ್ತವ್ಯ ಹೂಡುವರು.
ಆ. 31ರಂದು ಬೆಳಿಗ್ಗೆ 9ಕ್ಕೆ ಹೊಸಪೇಟೆಯಿಂದ ನಿರ್ಗಮಿಸಿ, 10 ಗಂಟೆಗೆ ಯಲಬುರ್ಗಾ ತಾಲ್ಲೂಕಿನ ಚಿಕ್ಕವಂಕಲಕುಂಟಾ ಗ್ರಾಮಕ್ಕೆ ಆಗಮಿಸಿ, ಅಲ್ಲಿನ ಶ್ರೀ ಮಾರುತೇಶ್ವರ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮ ನೆರವೇರಿಸುವರು. 10.30ಕ್ಕೆ ಗಾಣದಾಳ ಗ್ರಾಮದಲ್ಲಿ ಜನಸಂದರ್ಶನ ಕಾರ್ಯಕ್ರಮ ನಡೆಸಿ, ತಾಳಕೇರಿ–ಗಾಣದಾಳ ಜಿಲ್ಲಾ ಪ್ರಮುಖ ರಸ್ತೆಯಲ್ಲಿ ಬರುವ ಹಳ್ಳಕ್ಕೆ ಸೇತುವೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 11.30ಕ್ಕೆ ಬೋದೂರ ಗ್ರಾಮದಲ್ಲಿ ಜನಸಂದರ್ಶನ ಕಾರ್ಯಕ್ರಮ ಕೈಗೊಳ್ಳಲಿದ್ದಾರೆ. ಮಧ್ಯಾಹ್ನ 12.30ಕ್ಕೆ ಮಾಟಲದಿನ್ನಿ ಗ್ರಾಮದಲ್ಲಿ ಜನಸಂದರ್ಶನ ಕಾರ್ಯಕ್ರಮ ನಡೆಸಿ, ಬುದ್ಧ-ಬಸವ-ಅಂಬೇಡ್ಕರ್ ಸಮುದಾಯ ಭವನಕ್ಕೆ ಶಂಕುಸ್ಥಾಪನೆ ಮಾಡುವರು. ಮಧ್ಯಾಹ್ನ 2.30ಕ್ಕೆ ಹಿರೇಅರಳಿಹಳ್ಳಿ ಗ್ರಾಮದಲ್ಲಿ ಮತ್ತು 3.30ಕ್ಕೆ ವಜ್ರಬಂಡಿ ಗ್ರಾಮದಲ್ಲಿ ಜನಸಂದರ್ಶನ ಕಾರ್ಯಕ್ರಮ ಕೈಗೊಳ್ಳಲಿದ್ದಾರೆ. ನಂತರ 4.30ಕ್ಕೆ ಮುರಡಿ ಗ್ರಾಮದಲ್ಲಿ ಜನಸಂದರ್ಶನ ಕಾರ್ಯಕ್ರಮ ನಡೆಸಿ, ಮುರಡಿ–ಗೆದಗೇರಿ ಗ್ರಾಮಗಳ ಮಧ್ಯದಲ್ಲಿ ಹರಿಯುವ ಹಳ್ಳಕ್ಕೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಯ ಉದ್ಘಾಟನೆ ನೆರವೇರಿಸುವರು. ನಂತರ ಸಂಜೆ 5.15ಕ್ಕೆ ಅಲ್ಲಿಂದ ನಿರ್ಗಮಿಸಿ ಹೊಸಪೇಟೆಗೆ ತೆರಳಿ ವಾಸ್ತವ್ಯ ಮಾಡುವರು.
ಸೆಪ್ಟೆಂಬರ್ 01ರಂದು ಬೆಳಿಗ್ಗೆ 9ಕ್ಕೆ ಹೊಸಪೇಟೆಯಿಂದ ನಿರ್ಗಮಿಸಿ, 10.30 ಗಂಟೆಗೆ ಯಲಬುರ್ಗಾ ತಾಲ್ಲೂಕಿನ ಬಂಡಿ ಗ್ರಾಮಕ್ಕೆ ಆಗಮಿಸಿ, ಅಲ್ಲಿ ಜನಸಂದರ್ಶನ ಕಾರ್ಯಕ್ರಮ ಕೈಗೊಳ್ಳುವರು. 11.30ಕ್ಕೆ ತುಮ್ಮರಗುದ್ದಿ ಗ್ರಾಮದಲ್ಲಿ ಜನಸಂದರ್ಶನ ಕಾರ್ಯಕ್ರಮ ನಡೆಸಿ, ತುಮ್ಮರಗುದ್ದಿ ಮತ್ತು ದಮ್ಮೂರು ಗ್ರಾಮಗಳ ಸರ್ಕಾರಿ ಪ್ರೌಢಶಾಲೆಗಳ ನೂತನ ತರಗತಿ ಕೊಠಡಿಗಳ ಹಾಗೂ ಪೀಠೋಪಕರಣಗಳ ಉದ್ಘಾಟನೆ ನೆರವೇರಿಸುವರು. ಮಧ್ಯಾಹ್ನ 12.30ಕ್ಕೆ ಗೆದಗೇರಿ ಗ್ರಾಮದಲ್ಲಿ ಜನಸಂದರ್ಶನ ಕಾರ್ಯಕ್ರಮ ಕೈಗೊಂಡು, ಹುಲೇಗುಡ್ಡ ಶಾಲಾ ಕೊಠಡಿಗಳಿಗೆ ಶಂಕುಸ್ಥಾಪನೆ ಮತ್ತು ಕುದ್ರಿಕೋಟಗಿ–ಗೆದಗೇರಿ ಹಳ್ಳಕ್ಕೆ ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿ ಉದ್ಘಾಟಿಸುವರು. 2.30ಕ್ಕೆ ಸಂಕನೂರು ಗ್ರಾಮದಲ್ಲಿ ಜನಸಂದರ್ಶನ ಕಾರ್ಯಕ್ರಮ ನಡೆಸುವರು. 3.30ಕ್ಕೆ ಹಿರೇಮ್ಯಾಗೇರಿ ಗ್ರಾಮದಲ್ಲಿ ಜನಸಂದರ್ಶನ ಕಾರ್ಯಕ್ರಮ ಕೈಗೊಂಡು, ಹಿರೇಮ್ಯಾಗೇರಿಯಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘದ ಮತ್ತು ಗ್ರಾಮದ ಎಸ್.ಸಿ. ಕಾಲೋನಿಯ ಸಿಸಿ ರಸ್ತೆ ಉದ್ಘಾಟನೆ ನೆರವೇರಿಸಿಲಿದ್ದಾರೆ. 4.30ಕ್ಕೆ ಮುಧೋಳ ಗ್ರಾಮದಲ್ಲಿ ಜನಸಂದರ್ಶನ ಕಾರ್ಯಕ್ರಮ ನಡೆಸಿ, ಅಲ್ಲಿನ ಸರ್ಕಾರಿ ಐಟಿಐ ವರ್ಕ್ಶಾಪ್ ಕಟ್ಟಡ ಉದ್ಘಾಟಿಸಿ ಬಳಿಕ ಅಂದು ಸಂಜೆ 5.15ಕ್ಕೆ ಮುಧೋಳದಿಂದ ನಿರ್ಗಮಿಸಿ ಹೊಸಪೇಟೆಗೆ ತೆರಳಿ ವಾಸ್ತವ್ಯ ಹೂಡುವರು.
ಸೆ. 02ರಂದು ಬೆಳಿಗ್ಗೆ 9ಕ್ಕೆ ಹೊಸಪೇಟೆಯಿಂದ ನಿರ್ಗಮಿಸಿ, 10.30 ಗಂಟೆಗೆ ಯಲಬುರ್ಗಾ ತಾಲ್ಲೂಕಿನ ಚಿಕ್ಕಮ್ಯಾಗೇರಿಗೆ ಆಗಮಿಸಿ, ಈ ಗ್ರಾಮದಲ್ಲಿ ಮತ್ತು 11.30ಕ್ಕೆ ಕಲ್ಲೂರ ಗ್ರಾಮದಲ್ಲಿ ಜನಸಂದರ್ಶನ ಕಾರ್ಯಕ್ರಮ ನಡೆಸುವರು. ನಂತರ ಮಧ್ಯಾಹ್ನ 12.30ಕ್ಕೆ ರಾಜೂರು ಗ್ರಾಮದಲ್ಲಿ ಜನಸಂದರ್ಶನ ಕಾರ್ಯಕ್ರಮ ಕೈಗೊಂಡು, ರಾಜೂರು-ಆಡೂರು ಪದವಿ ಪೂರ್ವ ಕಾಲೇಜು ಕಟ್ಟಡ ನಿರ್ಮಾಣ ಹಾಗೂ ಪೀಠೋಪಕರಣಗಳ ಕಾಮಗಾರಿಯ ಉದ್ಘಾಟನೆ, ರಾಜೂರು ಸ.ಮಾ.ಹಿ.ಪ್ರಾ. ಶಾಲೆ ಮತ್ತು ದ್ಯಾಂಪೂರು ಸ.ಹಿ.ಪ್ರಾ ಶಾಲೆಗಳ ತಲಾ 2 ತರಗತಿ ಕೊಠಡಿಗಳ ಉದ್ಘಾಟನೆ ನೆರವೇರಿಸುವರು. ನಂತರ 1.30ಕ್ಕೆ ಸಂಗನಾಳ ಗ್ರಾಮದಲ್ಲಿ ಜನಸಂದರ್ಶನ ಕಾರ್ಯಕ್ರಮ ನಡೆಸಿದ ಬಳಿಕ ಸಚಿವರು ಅಂದು ಮಧ್ಯಾಹ್ನ 2.15ಕ್ಕೆ ಸಂಗನಾಳ ಗ್ರಾಮದಿಂದ ಹುಬ್ಬಳ್ಳಿ ಕಡೆಗೆ ಪ್ರಯಾಣ ಬೆಳಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Total Views:
0
ಜಾಹೀರಾತು