ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಹೋಟೆಲ್‌ಗಳ ತಪಾಸಣೆ ಕಡ್ಡಾಯ: ಡಾ.ಸುರೇಶ ಬಿ.ಇಟ್ನಾಳ

H.Mallikarjun
H.Mallikarjun - Kalyanasiri
3 Min Read

 

Inspection of hotels mandatory in the interest of public health: Dr. Suresh B. Itna

 

ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಹೋಟೆಲ್‌ಗಳ ತಪಾಸಣೆ ಕಡ್ಡಾಯ: ಡಾ.ಸುರೇಶ ಬಿ.ಇಟ್ನಾಳ

ಜಾಹೀರಾತು

ಕೊಪ್ಪಳ ಆಗಸ್ಟ್ 27, (ಕರ್ನಾಟಕ ವಾರ್ತೆ): ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಜಿಲ್ಲೆಯ ಎಲ್ಲ ಹೋಟೆಲ್‌ಗಳು, ಖಾನಾವಳಿ, ಬೀದಿಬದಿ ಆಹಾರ ಬಂಡಿಗಳು ಸೇರಿದಂತೆ ಆಹಾರ ಉತ್ಪಾದನಾ ಮತ್ತು ಮಾರಾಟ ಅಂಗಡಿಗಳ ಮೇಲೆ ದಿಢೀರ್ ದಾಳಿ ನಡೆಸಿ, ಪರಿಶೀಲನೆ ನಡೆಸುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆಗಸ್ಟ್ 25 ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಧಿಕಾರಿಗಳು ಆಗಾಗ ಜಿಲ್ಲೆಯ ದೊಡ್ಡ ಹೋಟೆಲ್ ಗಳಿಂದ ಬೀದಿ ಬದಿ ಮಾರುವ ಪಾನಿಪೂರಿ, ಗೋಬಿ, ಎಗ್ಗ್ರೈಸ್ ಮುಂತಾದ ಆಹಾರ ಬಂಡಿಗಳಲ್ಲಿ ನೀಡುವ ಆಹಾರಗಳ ಗುಣಮಟ್ಟ, ಸ್ವಚ್ಛತೆ ಪರಿಶೀಲಿಸಬೇಕು. ಆಹಾರ ಮಾತ್ರವಲ್ಲದೆ ಆಹಾರಕ್ಕೆ ಬಳಸುವ ಸಾಮಗ್ರಿ, ಅವುಗಳ ಬಳಕೆ ಯೋಗ್ಯದ ದಿನಾಂಕ, ಅವಧಿ ಮುಕ್ತಾಯದ ದಿನಾಂಕ, ಅದರಲ್ಲಿರುವ ಸುರಕ್ಷಿತ ಆಹಾರ ತಯಾರಿಕಾ ಅಂಶಗಳು, ಬಳಸುವ ಎಣ್ಣೆ, ಅಡುಗೆಗೆ ಬಳಸುವ ಬಣ್ಣ, ಅಡುಗೆ ಮನೆ, ಸ್ಟೋರ್ ರೂಂ ಸ್ವಚ್ಛತೆ, ಅಡುಗೆ ಕಾರ್ಮಿಕರ ಸ್ವಚ್ಛತೆ ಮುಂತಾದವುಗಳನ್ನು ಪರಿಶೀಲಿಸಬೇಕು. ಹೋಟೆಲ್ ಅಥವಾ ಆಹಾರ ಉತ್ಪದನಾ, ಮಾರಾಟ ಅಂಗಡಿಗಳು ಸರ್ಕಾರದಿಂದ ನಿಷೇಧಿಸಲ್ಪಟ್ಟ ಯಾವುದೇ ಸಾಮಗ್ರಿಯನ್ನು ಅಡುಗೆಗೆ ಬಳಸುವಂತಿಲ್ಲ ಹಾಗೂ ಮಿತಿ ಮೀರಿದ ಬಳಕೆ ಮಾಡುವಂತಿಲ್ಲ. ಈ ವಿಷಯದಲ್ಲಿ ಯಾವುದೇ ಒತ್ತಡಕ್ಕೆ ಒಳಗಾಗದೆ ಪಾರದರ್ಶಕ ಕರ್ತವ್ಯ ನಿರ್ವಹಿಸಬೇಕು. ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಇಂತಹ ಕಠಿಣ ಕ್ರಮಗಳು ಅನಿವಾರ್ಯ ಎಂದು ಅವರು ಹೇಳಿದರು.
ಇದಲ್ಲದೆ, ಕಿರಾಣಿ ಅಂಗಡಿಗಳು, ಸೂಪರ್ ಮಾರ್ಕೆಟ್‌ಗಳಲ್ಲಿನ ಆಹಾರ ಸಾಮಾಗ್ರಿಗಳ ಪರಿಶೀಲನೆ ನಡೆಸಬೇಕು. ಎಲ್ಲ ಪ್ಯಾಕಿಂಗ್ ಉತ್ಪನ್ನಗಳ ಮೇಲಿನ ವಿವರಗಳನ್ನು ಪರಿಶೀಲಿಸಬೇಕು. ಅವಧಿ ಮೀರಿದ ಉತ್ಪನ್ನಗಳು, ನಿಷೇಧಿತ ವಸ್ತು ಬಳಸಿದ ಉತ್ಪನ್ನಗಳು, ಮಕ್ಕಳ ತಿನಿಸುಗಳು ಮುಂತಾದವುಗಳನ್ನು ಕಡ್ಡಾಯವಾಗಿ ನಿಯಮಾನುಸಾರ ಪರಿಶೀಲಿಸಬೇಕು. ತಪ್ಪು ಕಂಡುಬAದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಮಾಂಸಾಹಾರಿ ಹೋಟೆಲ್‌ಗಳಲ್ಲಿ ಕೊಳೆತ ಅಥವಾ ಬಳಕೆಗೆ ಯೋಗ್ಯವಲ್ಲದ ಮಾಂಸವನ್ನು ಬಳಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ಯಾವುದೇ ರಾಜೀ ಇಲ್ಲದೆ ಜಿಲ್ಲೆಯ ಎಲ್ಲ ಸಣ್ಣ ಕಿರಾಣಿ ಅಂಗಡಿಗಳಿAದ ದೊಡ್ಡ ಸೂಪರ್ ಮಾರ್ಕೆಟ್‌ಗಳ ವರೆಗೆ ಹಾಗೂ ಬೀದಿ ಬದಿ ಪಾನಿಪೂರಿ ಅಂಗಡಿಯಿAದ ದೊಡ್ಡ ಪ್ರಮುಖ ಹೋಟೆಲ್‌ಗಳ ವರೆಗೆ ಅಧಿಕಾರಿಗಳು ಕಡ್ಡಾಯವಾಗಿ ದಾಳಿ ಮಾಡಿ, ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು. ತಪ್ಪಿತಸ್ಥ ಹೋಟೆಲ್‌ಗಳನ್ನು ಬಂದ್ ಮಾಡಿಸಿ, ಸಂಬAಧಿಸಿದವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರ ಆರೋಗ್ಯವೇ ನಮ್ಮ ಆದ್ಯತೆ ಆಗಿರಬೇಕು ಎಂದು ಅವರು ತಿಳಿಸಿದರು.
ಕಲುಷಿತ ಆಹಾರ, ನೀರು, ನಿಯಮ ಬಾಹಿರ ಆಹಾರ ಸಾಮಗ್ರಿ ಬಳಕೆ ಕಂಡುಬAದಲ್ಲಿ ಅವುಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿ, ಸೂಕ್ತ ವರದಿಯೊಂದಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಬೇಕರಿಗಳಲ್ಲಿಯೂ ತಪಾಸಣೆ ನಡೆಸಬೇಕು. ಮಕ್ಕಳ ಸಿಹಿ ತಿನಿಸು, ಕ್ಯಾಂಡಿ, ಚಾಕೋಲೆಟ್‌ಗಳನ್ನು ಪರಿಶೀಲಿಸಿ, ಅಗತ್ಯವಿದ್ದಲ್ಲಿ ಪ್ರಯೋಗಾಲಯಕ್ಕೆ ಕಳುಹಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಂಕಿತ ಅಧಿಕಾರಿ ಮಹಮ್ಮದ್ ಜೀಲಾನಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಈಶ್ವರ ಸವಡಿ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳಾದ ಡಾ. ಪ್ರಕಾಶ ವಿ., ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರವೀಂದ್ರನಾಥ ಎಂ.ಎಚ್., ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಪ್ರಕಾಶ ಎಚ್., ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಗೋನಾಳ ಕುಮಾರಸ್ವಾಮಿ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಪರ್ವತಗೌಡ ಹಿರೇಗೌಡ್ರ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ತಾಲ್ಲೂಕುಗಳ ಆರೋಗ್ಯಾಧಿಕಾರಿಗಳು, ಕೊಪ್ಪಳ ಕಿಮ್ಸ್ ತಜ್ಞ ವೈದ್ಯರು, ವಿವಿಧ ಆರೋಗ್ಯ ಸಂಸ್ಥೆಗಳ ವೈದ್ಯಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಇತರೆ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
Total Views: 0
ಜಾಹೀರಾತು
Share This Article