ಕಾರಟಗಿ ತಾಲೂಕಿನ ಮರ್ಲಾನಹಳ್ಳಿ ಗ್ರಾಮದಲ್ಲಿ
ಬೃಹತ್ ಉಚಿತ ಹೃದಯರೋಗ ಹಾಗೂ ನೇತ್ರ ತಪಾಸಣಾ ಶಿಬಿರ
ಕಾರಟಗಿ: ಶ್ರೀ ಶಿರಿಡಿ ಸಾಯಿಬಾಬಾ ದೇವಸ್ಥಾನ ಕಮಿಟಿ ಮರ್ಲಾನಳ್ಳಿ, ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ (ರಿ) ಶ್ರೀರಾಮನಗರ, ವಿಹಾನ್ ಹಾರ್ಟ್ ಮತ್ತು ಸುಪರ್ ಸ್ಪೆಷಾಲಿಟಿ ಆಸ್ಪತ್ರೆ, ಹುಬ್ಬಳ್ಳಿ ಮತ್ತು ಮಾರುತಿ ಕಣ್ಣಿನ ಮತ್ತು ಹಲ್ಲಿನ ಆಸ್ಪತ್ರೆ ಗಂಗಾವತಿ ಇವರುಗಳ ಸಂಯುಕ್ತಾಶ್ರಯದಲ್ಲಿ ಜುಲೈ-14 ಮಂಗಳವಾರ ಬೆಳಗ್ಗೆ 9:00 ರಿಂದ ಮಧ್ಯಾಹ್ನ 2:೦೦ ಗಂಟೆಯವರೆಗೆ ಕಾರಟಗಿ ತಾಲೂಕಿನ ಮರ್ಲಾನಹಳ್ಳಿ ಗ್ರಾಮದ ಶ್ರೀ ಶಿರಿಡಿ ಸಾಯಿಬಾಬಾ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.A huge free heart disease and eye check-up camp in Marlanahalli village of Karatagi taluk

ಈ ಶಿಬಿರದಲ್ಲಿ ತಜ್ಞ ವೈದ್ಯರ ಸಲಹೆ ಮೇರೆಗೆ ಶಿಬಿರದಲ್ಲಿ ಉಚಿತವಾಗಿ ಹೃದಯ ಸಂಬಂಧಿ ಕಾಯಿಲೆಗಳಿಗೆ ತಪಾಸಣೆ ಮಾಡುವುದಲ್ಲದೇ, ಇ.ಸಿ.ಜಿ/2ಡಿ ಎಕೋ ಸ್ಕ್ಯಾನಿಂಗ್ ಮಾಡಲಾಗುವುದು ಮತ್ತು ಕಣ್ಣಿನ ತಪಾಸಣೆ ಮಾಡಲಾಗುವುದು. ಸದರಿ ಶಿಬಿರದಲ್ಲಿ ಶಸ್ತ್ರಚಿಕಿತ್ಸೆಗೆ ಆಯ್ಕೆಯಾದವರು ಯಶಸ್ವಿನಿ ಕಾರ್ಡ್ ಅಥವಾ ಧರ್ಮಸ್ಥಳ ಸ್ವಸಹಾಯ ಸಂಘದ ಸದಸ್ಯತ್ವ ಗುರುತಿನ ಚೀಟಿ ಹೊಂದಿದ್ದಲ್ಲಿ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಲಾಗುವುದು. ಈ ಶಿಬಿರಕ್ಕೆ ಬರುವಾಗ ರೋಗಿಗಳು ಬಿ.ಪಿ.ಎಲ್. ಹಾಗೂ ಆಧಾರ್ ಕಾರ್ಡ್ ಜೊತೆಗೆ ಹಳೆಯ ವೈದ್ಯರ ಚೀಟಿ ಹಾಗೂ ವರದಿಗಳನ್ನು ತೆಗೆದುಕೊಂಡು ಬರಬೇಕು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಶಿಬಿರವನ್ನು ಯಶಸ್ವಿಗೊಳಿಸಲು ಶ್ರೀರಾಮನಗರದ ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಘದ ಅಧ್ಯಕ್ಷರಾದ ಜಿ. ರಾಮಕೃಷ್ಣ ಕೋರಿದ್ದಾರೆ.
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: 9448228738


