ಚೈತನ್ಯ ಟೆಕ್ನೋ ಶಾಲೆಯಲ್ಲಿ ಶಾಲಾ ಸಂಸತ್ತಿನ ಪದಗ್ರಹಣ ಕಾರ್ಯಕ್ರಮ .

H.Mallikarjun
H.Mallikarjun - Kalyanasiri
1 Min Read

 

School Parliament Investiture Ceremony at Chaitanya Techno School.

ಚೈತನ್ಯ ಟೆಕ್ನೋ ಶಾಲೆಯಲ್ಲಿ ಶಾಲಾ ಸಂಸತ್ತಿನ ಪದಗ್ರಹಣ ಕಾರ್ಯಕ್ರಮ .

ಜಾಹೀರಾತು


ಗಂಗಾವತಿ: ಇಲ್ಲಿನ ಶ್ರೀ ಚೈತನ್ಯ ಟೆಕ್ನೋ ಶಾಲೆಯಲ್ಲಿ 2026–27ನೇ ಸಾಲಿನ ಶಾಲಾ ಸಂಸತ್ತಿನ ಪದಗ್ರಹಣ ಕಾರ್ಯಕ್ರಮ ಅತ್ಯಂತ ಸಡಗರ ಹಾಗೂ ಶಿಸ್ತಿನಿಂದ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಗಂಗಾವತಿಯ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಆದ ಪ್ರಕಾಶ್ ಯತ್ನೂರ್ ಸರ್ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ, “ವಿದ್ಯಾರ್ಥಿ ದೆಸೆಯಿಂದಲೇ ಶಿಸ್ತು ಮತ್ತು ಜವಾಬ್ದಾರಿಯನ್ನು ಬೆಳೆಸಿಕೊಂಡರೆ ಭವಿಷ್ಯದಲ್ಲಿ ಉತ್ತಮ ನಾಯಕರಾಗಲು ಸಾಧ್ಯ. ವಿದ್ಯಾರ್ಥಿಗಳು ಸಮಾಜಕ್ಕೆ ಮಾದರಿಯಾಗುವಂತೆ ಬೆಳೆಯಬೇಕು,” ಎಂದು ಕರೆ ನೀಡಿದರು. ಉತ್ತರ ಕರ್ನಾಟಕ ಚೈತನ್ಯ ಸಂಸ್ಥೆಗಳ ಎ.ಜಿ.ಎಂ ಆದಂತಹ ಡಾಕ್ಟರ್ ರಾಜಕುಮಾರ ಸರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಪ್ರೋತ್ಸಾಹಿಸುವಲ್ಲಿ ಶಾಲೆಯ ಪಾತ್ರ ಹಿರಿದಾದುದು ಎಂದರು. ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಪುನೀತಕುಮಾರಿ ಮೇಡಂ ಅವರು ನಾಯಕತ್ವದ ನಿಜವಾದ ಅರ್ಥ ಮತ್ತು ಜವಾಬ್ದಾರಿಗಳ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಇದೇ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾದ ಶಾಲಾ ಸಂಪುಟದ ನಾಯಕರಾದ ಹೆಡ್ ಬಾಯ್, ಹೆಡ್ ಗರ್ಲ್, ಡೆಪ್ಯುಟಿ ಹೆಡ್ ಬಾಯ್, ಡೆಪ್ಯುಟಿ ಹೆಡ್ ಗರ್ಲ್, ಕ್ರೀಡಾ ಮತ್ತು ಸಾಂಸ್ಕೃತಿಕ ನಾಯಕರು ಹಾಗೂ ಸ್ಪಾರ್ಟನ್ಸ್, ವೈಕಿಂಗ್ಸ್, ಸಮುರಾಯ್ಸ್ ಮತ್ತು ನೈಟ್ಸ್ ಹೌಸ್‌ಗಳ ನಾಯಕರುಗಳಿಗೆ ಮುಖ್ಯ ಅತಿಥಿಗಳು ಬ್ಯಾಡ್ಜ್ ಹಾಗೂ ಸ್ಯಾಶ್ ತೊಡಿಸಿ ಪದಗ್ರಹಣ ಮಾಡಿದರು. ಪ್ರಾಂಶುಪಾಲರು ನೂತನ ನಾಯಕರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ನಂತರ ವಿದ್ಯಾರ್ಥಿ ನಾಯಕರು ಆಕರ್ಷಕ ಪಥಸಂಚಲನ (March Past) ನಡೆಸಿ ಗಮನ ಸೆಳೆದರು. ಶಾಲೆಯ ವಿದ್ಯಾರ್ಥಿನಿಯರು ಪ್ರಸ್ತುತಪಡಿಸಿದ ಸ್ವಾಗತ ನೃತ್ಯ ಮನಸೂರೆಗೊಂಡಿತು. ನೂತನ ಹೆಡ್ ಗರ್ಲ್ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಶಾಲೆಯ ಉಪ ಪ್ರಾಂಶುಪಾಲರು, ವಲಯ ಡೀನ್, ವಿವಿಧ ವಿಭಾಗಗಳ ಮುಖ್ಯಸ್ಥರು, ಪಾಲಕರು , ಶಿಕ್ಷಕರು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Total Views: 0
Share This Article