6th State-Level General Convention of the Karnataka State Shamiana Decorators, Sound, and Light Welfare Association
ಕರ್ನಾಟಕ ರಾಜ್ಯ ಶ್ಯಾಮಿಯಾನ ಡೆಕೋರೇಟರ್ಸ್ ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ಧಿ ಸಂಘದ 6ನೇ ರಾಜ್ಯ ಮಟ್ಟದ ಮಹಾಅಧಿವೇಶನ

ಗಂಗಾವತಿ: ಕರ್ನಾಟಕ ರಾಜ್ಯ ಶ್ಯಾಮಿಯಾನ ಡೆಕೋರೇಟರ್ಸ್ ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ಧಿ ಸಂಘ (ರಿ), ಆಲ್ ಇಂಡಿಯಾ ಟೆಂಟ್ ಅಂಡ್ ಡೆಕೋರೇಟರ್ಸ್ ವೆಲ್‌ಫೇರ್ ಅಸೋಸಿಯೇಷನ್ (ರಿ), ನವದೆಹಲಿ, ಕೊಪ್ಪಳ ಜಿಲ್ಲಾ ಸಂಘ ಹಾಗೂ ಗಂಗಾವತಿ ತಾಲೂಕು ಸಂಘದ ಸಂಯುಕ್ತಾಶ್ರಯದಲ್ಲಿ ‘ಭತ್ತದ ನಾಡು ಕಿಷ್ಕಿಂಧ ವೈಭವ’ ಶೀರ್ಷಿಕೆಯಡಿ 6ನೇ ರಾಜ್ಯ ಮಟ್ಟದ ಮಹಾಅಧಿವೇಶನವು ಜುಲೈ 11, 12 ಮತ್ತು 13, 2026 ರಂದು ಗಂಗಾವತಿಯ ಅಮರ ಗಾರ್ಡನ್, ವಿದ್ಯಾ ನಗರ (ಸಿಂಧನೂರು ರಸ್ತೆ)ದಲ್ಲಿ ಅದ್ಧೂರಿಯಾಗಿ ಆಯೋಜಿಸಲಾಗಿದೆ.
ಈ ಮೂರು ದಿನಗಳ ಅಧಿವೇಶನದಲ್ಲಿ ರಾಜ್ಯದಾದ್ಯಂತ ಇರುವ ಟೆಂಟ್ ಮತ್ತು ಡೆಕೋರೇಶನ್ ವೃತ್ತಿ ಬಾಂಧವರು ಭಾಗವಹಿಸಲಿದ್ದು, ವೃತ್ತಿಪರ ಅಭಿವೃದ್ಧಿ, ಸಂಘಟನಾ ಬಲವರ್ಧನೆ ಮತ್ತು ಕ್ಷೇಮಾಭಿವೃದ್ಧಿ ಕುರಿತು ಗಂಭೀರ ಚರ್ಚೆಗಳು ನಡೆಯಲಿವೆ.
ಈ ಬೃಹತ್ ಸಮಾವೇಶದ ಯಶಸ್ಸಿಗೆ ರಾಜ್ಯ ಸಮಿತಿಯ ಪದಾಧಿಕಾರಿಗಳು ಶ್ರಮಿಸುತ್ತಿದ್ದಾರೆ. ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಮಹೆಬೂಬ ಮುಲ್ಲಾ ಸಿದ್ದಾಪುರ,ರವರು ಮಾತನಾಡಿ ಧರ್ಮಗುರುಗಳು.ರಾಜಕಾರಣಿಗಳು. ಮತ್ತು ವಿವಿಧ ಗಣ್ಯರು ಸೇರಿದಂತೆ ಸಂಘದ ರಾಷ್ಟ್ರೀಯ ಅಧ್ಯಕ್ಷರು ರಾಷ್ಟ್ರೀಯ ಪದಾಧಿಕಾರಿಗಳು ಮೂರು ದಿನಗಳ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಕಾರ್ಯಕ್ರಮದ ಮೊದಲನೇ ದಿನದಂದು ಧ್ವಜ ಹಾರಿಸಿ ದೀಪ ಬೆಳಗುವುದರ ಮೂಲಕ ಚಾಲನೆ ನೀಡಲಿದ್ದಾರೆ ಎಂದು ಅವರು ಅಮರ್ ಗಾರ್ಡನ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಅಬ್ದುಲ್ ಕರೀಮ್ ಅ. ಅತ್ತಾರ್, ಗೌರವಾಧ್ಯಕ್ಷರಾದ ಆರ್. ಲಕ್ಷ್ಮಣ್, ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಗುಂದಯ್ಯಸ್ವಾಮಿ ಹಿರೇಮಠ, ಸಂಸ್ಥಾಪಕ ಖಜಾಂಚಿ ಮಂಜುನಾಥ ಎಸ್. ಕೋರಿ ಸೇರಿದಂತೆ ರಾಜ್ಯ ಸಮಿತಿಯ ಎಲ್ಲಾ ಪದಾಧಿಕಾರಿಗಳು ಮತ್ತು ಸಲಹಾ ಸಮಿತಿ ಸದಸ್ಯರು ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ.
ವೃತ್ತಿ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಈ ಅಧಿವೇಶನದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಘದ ರಾಜ್ಯ ಸಮಿತಿಯವರು ಕೋರಿದರು.


