Anonymous person dead: Munirabad police request to trace the heirs

ಅನಾಮಧೇಯ ವ್ಯಕ್ತಿ ಮೃತ: ವಾರಸುದಾರರ ಪತ್ತೆಗೆ ಮುನಿರಾಬಾದ್ ಪೊಲೀಸರ ಮನವಿ
—-
ಕೊಪ್ಪಳ ಜುಲೈ 03 (ಕರ್ನಾಟಕ ವಾರ್ತೆ): ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದ ಅನಾಮಧೇಯ ವ್ಯಕ್ತಿಯು ಮೃತಪಟ್ಟಿದ್ದು, ವಾರಸುದಾರರ ಪತ್ತೆಗಾಗಿ ಮುನಿರಾಬಾದ್ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಹುಲಗಿಯ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನದ ಹತ್ತಿರದಲ್ಲಿ ಜೂನ್ 1 ರಂದು ಮದ್ಯಾಹ್ನ 1.30 ಗಂಟೆಗೆ ಸುಮಾರು 60 ರಿಂದ 65 ವರ್ಷ ವಯಸ್ಸಿನ ಅನಾಮಧೇಯ ವ್ಯಕ್ತಿಯು ಅಸ್ವಸ್ಥನಾಗಿದ್ದರಿಂದ 108 ಅಂಬುಲೆನ್ಸ ಮೂಲಕ ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ವ್ಯಕ್ತಿಯು ಜೂನ್ 10 ರಂದು ಮೃತಪಟ್ಟಿದ್ದು, ಈ ಅನಾಮಧೇಯ ವ್ಯಕ್ತಿಯ ಹೆಸರು, ವಿಳಾಸ ಮತ್ತು ವಾರಸುದಾರರು ಪತ್ತೆಯಾಗಿರುವುದಿಲ್ಲ.
ಈ ಮೃತನ ವ್ಯಕ್ತಿ ಬಗ್ಗೆ ಯಾರಿಗಾದರು ಮಾಹಿತಿ ಇದ್ದಲ್ಲಿ ಅಥವಾ ಯಾರಾದರು ವಾರಸುದಾರರಿದ್ದಲ್ಲಿ ಕೊಪ್ಪಳ ಎಸ್.ಪಿ ದೂ.ಸಂ: 08539-230111, ಕೊಪ್ಪಳ ಡಿ.ಎಸ್.ಪಿ ದೂ.ಸಂ: 08539-222433, ಕೊಪ್ಪಳ ಸಿ.ಪಿ.ಐ ದೂ.ಸಂ: 08539221333 ಅಥವಾ ಮುನಿರಾಬಾದ್ ಪಿ.ಎಸ್.ಐ ದೂ.ಸಂ: 08539-270333 ಗೆ ಸಂರ್ಪಕಿಸುವAತೆ ಮುನಿರಾಬಾದ್ ಪೋಲಿಸ್ ಠಾಣೆಯ ಪೋಲಿಸ್ ಸಬ್ ಇನ್ಸಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

**


