Tiptur – Contesting the 2028 election is certain: Former Zilla Panchayat member G. Narayan announces.
ತಿಪಟೂರು -2028ರ ಚುನಾವಣೆಯಲ್ಲಿ ಸ್ಪರ್ಧೆ ಖಚಿತ: ಮಾಜಿ ಜಿ.ಪಂ. ಸದಸ್ಯ ಜಿ. ನಾರಾಯಣ್ ಘೋಷಣೆ.
“ಮುಂದಿನ 2028ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿ ರಾಷ್ಟ್ರೀಯ ಪಕ್ಷಗಳಿಂದ ಟಿಕೆಟ್ ಸಿಕ್ಕರೆ ಪಕ್ಷದ ಪರವಾಗಿ, ಇಲ್ಲವಾದರೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ನೂರಕ್ಕೆ ನೂರರಷ್ಟು ಖಚಿತ” ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಜಿ. ನಾರಾಯಣ್ ಅವರು ಸ್ಪಷ್ಟಪಡಿಸಿದ್ದಾರೆ.
ನಗರದ ಹುಳಿಯಾರು ರಸ್ತೆಯ ಟಿ.ಎಂ. ಮಂಜುನಾಥ ನಗರದಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ‘ಪತ್ರಿಕಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಪತ್ರಕರ್ತರನ್ನು ಸನ್ಮಾನಿಸಿ, ಸಿಹಿ ಹಂಚಿ ಅವರು ಮಾತನಾಡಿದರು.
“ಕಳೆದ 18-19 ವರ್ಷಗಳಿಂದ ತಾಲೂಕಿನ ಜನತೆಯೊಂದಿಗೆ ನಿರಂತರ ಒಡನಾಟ ಹೊಂದಿದ್ದೇನೆ. ಈ ಬಾರಿ ಅಭಿಮಾನಿಗಳ ಆಸೆಯಂತೆ ಜುಲೈ 27ರಂದು ನನ್ನ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ,” ಎಂದು ಜಿ. ನಾರಾಯಣ್ ತಿಳಿಸಿದರು.
ಜನ್ಮದಿನದ ಅಂಗವಾಗಿ ತಾಲೂಕಿನಾದ್ಯಂತ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ:
ತಾಲೂಕಿನ ಎಲ್ಲಾ 288 ಸರ್ಕಾರಿ ಶಾಲೆಗಳ ಒಟ್ಟು 13,000 ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ ಮಾಡಲಾಗುವುದು
ಕ್ಷೇತ್ರದ 10,000 ಹೆಣ್ಣು ಮಕ್ಕಳಿಗೆ ಜನ್ಮದಿನದ ಅಂಗವಾಗಿ ಬಾಗಿನ ಸಮರ್ಪಣೆ.
ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ 95% ಕ್ಕಿಂತ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವಧನ ನೀಡಿಕೆ.
ತಾಲೂಕಿನ ಪತ್ರಕರ್ತರು, ವಕೀಲರು ಹಾಗೂ ಅಂಗವಿಕಲರಿಗೆ ವಿಶೇಷ ಸನ್ಮಾನ ಸಮಾರಂಭ.
ತಾಲೂಕಿನ ಹಿರಿಯರು, ಕಿರಿಯರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಜನ್ಮದಿನೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ, ಆಶೀರ್ವದಿಸಬೇಕೆಂದು ಅವರು ಇದೇ ವೇಳೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ವಿರೂಪಾಕ್ಷ, ತಾಲೂಕು ರೈತ ಸಂಘದ ಅಧ್ಯಕ್ಷ ಬಸ್ತಿಹಳ್ಳಿ ರಾಜಣ್ಣ, ಮುಖಂಡರಾದ ಮಂಜುನಾಥ್, ಚಿದಾನಂದ, ಓಂಕಾರ, ಸುಗಂಧರಾಜು, ಗಂಗಾಧರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.


