ಕೋಟಿ ಸಂಪತ್ತುಗಿಂತ ಆರೋಗ್ಯ ಸಂಪತ್ತು ಮುಖ್ಯ : ಶರಣಬಸಪ್ಪ ದಾನಕೈ

H.Mallikarjun
H.Mallikarjun - Kalyanasiri
2 Min Read

Health is more important than a fortune of crores: Sharanabasappa Danakai

ಕೋಟಿ ಸಂಪತ್ತುಗಿಂತ ಆರೋಗ್ಯ ಸಂಪತ್ತು ಮುಖ್ಯ : ಶರಣಬಸಪ್ಪ ದಾನಕೈ

(ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ )

ಯಲಬುರ್ಗಾ: ಬೀಡಿ,ಸಿಗರೇಟ ಡ್ರಗ್ಸ ಇತರ ಮಾದಕ ವಸ್ತುಗಳ ದುಶ್ಚಟಗಳಿಗೆ ಯುವ ಸಮುದಾಯ ,ಸೇವನೆಗೆ ಅಂಟಿಕೊಂಡು ದಾಸರಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಂಡಿದ್ದಾರೆ, ದುಶ್ಚಟಗಳಿಂದ ದೂರವಿದ್ದು ಉತ್ತಮ ಆರೋಗ್ಯ, ಭವಿಷ್ಯವನ್ನು ರೂಪಿಸಿಕೊಳ್ಳಿ ,ಕೋಟಿ ಸಂಪತ್ತುಗಿಂತ ಆರೋಗ್ಯ ಸಂಪತ್ತು ಮುಖ್ಯವಾದದು ಎಂದು ಅಖಿಲ ಕರ್ನಾಟಕ ಕೊಪ್ಪಳ ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯ ಶರಣಬಸಪ್ಪ. ಕೆ.ದಾನಕೈ ಅವರು ಯಲಬುರ್ಗಾ ತಾಲೂಕಿನ ಬಂಡಿ ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ ಅಂಗವಾಗಿ ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಮಾತನಾಡಿದರು.
ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಿಸುವಲ್ಲಿ ಶ್ರಮಿಸಬೇಕು,ದುಶ್ಚಟಗಳಿಂದ ದೂರವಿದ್ದಾಗ ಉತ್ತಮ ಸಮಾಜ ನಿರ್ಮಿಸಲು ಸಾದ್ಯ ಎಂದು ಪ್ರಾಂಶುಪಾಲ ಶರಣಯ್ಯ ಎಚ್ ಅವರು ಹೇಳಿದರು. ಅಮುಲು ಬರುವಂತಹ ಮಾದಕ ಸೇವನೆ ಮಾಡುವದರಿಂದ ದೈಹಿಕವಾಗಿ, ಮಾನಸಿಕವಾಗಿ ಅನೇಕ ಕಾಯಿಲೆಗಳಿಗೆ ಒಳಗಾಗಿ ತಮ್ಮ ಜೀವನವನ್ನು ಕಳೆದುಕೊಳ್ಳುವದು ಬೇಡ ಉತ್ತಮರ ಸಂಘ ಮಾಡಿ ಸರಿ ದಾರಿಯಲ್ಲಿ ಸಾಗಬೇಕು ಎಂದು ಪ್ರೌಢ ಶಾಲೆ ಮುಖ್ಯ ಗುರು ಸಂಗನಗೌಡ ಪಾಟಿಲ್ ಹೇಳಿದರು. ದೇಶದಲ್ಲಿ ಮಾದಕ ವಸ್ತುಗಳ ಬಳಕೆಯಿಂದ ಶೆ 70 ರಷ್ಟು ಯುವಕರ ಭವಿಷ್ಯ ಮತ್ತು ಜೀವನ ಹಾಳಾಗುತ್ತಿದೆ ಮತ್ತು ಕುಟುಂಬಗಳು ಬೀದಿಗೆ ಬಂದಿರುವ ಘಟನೆಗಳನ್ನು ಕಾಣಬಹುದು, ಉತ್ತಮ ವಿದ್ಯಾಭ್ಯಾಸದ ಜೊತೆಗೆ ಮೂಲಕ ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ವಕೀಲರಾದ ನಾಗರಾಜ ಹವಲ್ದಾರ ಹೇಳಿದರು.
ಈ ವೇಳೆ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಗಣೇಶ ನಾಯಕ, ಮೇಲ್ವಿಚಾರಕಿ ಕಾವ್ಯ ಸಿರಿಗೇರಿ, ಸೇವಾ ಪ್ರತಿನಿದಿ ರತ್ನ ರಾಟಿ ಮತ್ತು ಕಾಲೇಜಿನ ಉಪನ್ಯಾಸಕರಾದ ಶರಣಬಸವ ಮಾಲಗಿತ್ತಿ,ವಿದ್ಯಾಶ್ರೀ,ಪೂಜಾ, ಶಿವಗಂಗಾ,ಯಮನಾಭಿ,ಯಮನಪ್ಪ ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಬಳಿಕ ಅಂತರಾಷ್ಟ್ರೀಯ ಮಾದಕ ವಸ್ತು ದಿನಾಚರಣೆ ಅಂಗವಾಗಿ ಶಾಲಾ ಕಾಲೇಜುಗಳಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಮಾದಕ ವಸ್ತುಗಳಿಂದಾಗುವ ದುಶ್ಚಪರಿಣಾಮಗಳ ಬಗ್ಗೆ ,ಆನ್ ಲೈನ ವಿಡಿಯೋ ಕಾರ್ಯಕ್ರಮ ಮುಖಾಂತರ ಶಾಲಾ ಕಾಲೇಜುಗಳ ಮಕ್ಕಳಿಗೆ ಮಾಹಿತಿ ಮಾರ್ಗದರ್ಶನವನ್ನು ಧರ್ಮಸ್ಥಳದ ಪೂಜ್ಯರು ,ಗಣ್ಯವ್ಯಕ್ತಿಗಳು ನೀಡಿದರು .ಮಕ್ಕಳ್ಲು ಆನ್ ಲೈನ್ ಮುಖಾಂತರ ಕಾರ್ಯಕ್ರಮವನ್ನು ವಿಕ್ಷೀಸಿದರು.

Total Views: 0
Share This Article