ಮಾದಿಗ ಸಮಾಜದ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲು ಆಗ್ರಹಿಸಿ ದಂಡೋರ ಸಂಘದಿಂದ ಒತ್ತಾಯ

H.Mallikarjun
H.Mallikarjun - Kalyanasiri
2 Min Read
ಜಾಹೀರಾತು
Dandora Sangha demands acquisition of Madiga community's land

ಮಾದಿಗ ಸಮಾಜದ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲು ಆಗ್ರಹಿಸಿ ದಂಡೋರ ಸಂಘದಿಂದ ಒತ್ತಾಯ

ಜಾಹೀರಾತು


ಗಂಗಾವತಿ,.. ಜೂನ್ 29:… ಸಮೀಪದ ಚಿಕ್ಕ ಬೆಣ ಕಲ್ ಗ್ರಾಮದಲ್ಲಿ ಮಾದಿಗ ಸಮಾಜಕ್ಕೆ ಮೀಸಲು ನಿವೇಶನದಲ್ಲಿ ಸ್ವಚ್ಛಗೊಳಿಸಲಾದ ಜಾಗದಲ್ಲಿ ಸರ್ಕಾರದ ಸ್ವಾಮ್ಯದ ಗುಡಿಸಲುಗಳನ್ನು ಅನಧಿಕೃತವಾಗಿ ಹಂಚಿಕೆ ಮಾಡುತ್ತಿರುವುದನ್ನು ತಕ್ಷಣ ನಿಲ್ಲಿಸಿ, ಜಾಗವನ್ನು ಸರ್ಕಾರದ ವಶಕ್ಕೆ ಪಡೆದುಕೊಳ್ಳುವಂತೆ ಆಗ್ರಹಿಸಿ ದಂಡೋರ (ಮಾದಿಗ ಮೀಸಲಾತಿ ಹೋರಾಟ ಸಮಿತಿ) ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷ ಹುಸೇನಪ್ಪ ಸ್ವಾಮಿ ಮಾದಿಗ. ತಿಳಿಸಿದರು .

ಅವರ ಸೋಮವಾರದಂದು ಪತ್ರಿಕೆ ಯೊಂದಿಗೆ ಮಾತನಾಡಿ, ಈ ಕುರಿತಂತೆ ಇಂದು ತಹಶೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು
ಮನವಿಯಲ್ಲಿ, ಗಂಗಾವತಿ ತಾಲೂಕಿನ ಚಿಕ್ಕಬೆಣಕಲ್ ಗ್ರಾಮದ ಸರ್ವೇ ಸಂಖ್ಯೆ 244 ಮತ್ತು 241ರ ಸರ್ಕಾರಿ ಜಾಗವನ್ನು ಕೆಲವು ವ್ಯಕ್ತಿಗಳು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿದ್ದು, ಅದನ್ನು ಬಡ ಜನರಿಗೆ ಮನೆ ನಿರ್ಮಾಣದ ಹೆಸರಿನಲ್ಲಿ ಹಂಚಿಕೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಎಂದು ತಿಳಿಸಿದವರು.

ಈ ಕುರಿತಂತೆ ಮಾತನಾಡಿ
ಈ ಹಿಂದೆ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದ್ದರೂ, ಇದುವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ .
ಫೆಬ್ರವರಿ 13, 2026ರಂದು ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಬಂಧಿಸಿದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ಆದರೆ, ಇದುವರೆಗೆ ವರದಿ ಸಲ್ಲಿಕೆಯಾಗದ ಕಾರಣ ಒತ್ತೋವ ರಿ ಮಾಡಿಕೊಂಡ ನಿವೇಶನವನ್ನು ತೆರವುಗೊಳಿಸದೆ ಇರುವುದನ್ನು ಗಮನಿಸಿದರೆ ಅಧಿಕಾರಿಗಳ ದಿವ್ಯ ನಿರ್ಲಕ್ಷತೆ ಗೆ ಹಿಡಿದ ಕನ್ನಡಿಯಾಗಿದೆ
ಆದ್ದರಿಂದ, ಸರ್ವೇ ಸಂಖ್ಯೆ 244 ಹಾಗೂ 241ರ ಸರ್ಕಾರಿ ಜಾಗವನ್ನು ತಕ್ಷಣ ಅತಿಕ್ರಮಣದಿಂದ ಮುಕ್ತಗೊಳಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಸಾರ್ವಜನಿಕ ಆಸ್ತಿಯನ್ನು ಸಂರಕ್ಷಿಸಬೇಕು ಮಾದಿ ಗ ಸಮಾಜಕ್ಕೆ ಮೀಸಲಿಟ್ಟ ಜಾಗದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ 50 ಲಕ್ಷ ರೂ ಅನುದಾನ ಕಲ್ಪಿಸಬೇಕೆಂದು ಎಂದು ತಿಳಿಸಿದರು .
ಸದರಿ ನಿವೇಶನವನ್ನು ರಾತ್ರಿ ಓ ತ್ತು ಓದಿ ಮಾಡಿಕೊಂಡ ಮಹಿಳೆಗೆ ಪರ್ಯಾಯ ವ್ಯವಸ್ಥೆಯನ್ನು ಗ್ರಾಮ ಪಂಚಾಯತಿ ಕಲ್ಪಿಸಬೇಕು. ಪಿಡಿಒ ಹಾಗೂ ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ಹಣದ ಆಮೀಷಕ್ಕಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಆದೇಶವನ್ನು ಗಾಳಿಗೆ ತೋರಿದ್ದಾರೆ ಸದರಿ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ ಇನ್ನೂ ಜೀವಂತವಾಗಿದೆ ಸಂಬಂಧಪಟ್ಟ ಅಧಿಕಾರಿಗಳು ಸಭೆ ನಡೆಸಿದರು ಇದುವರೆಗೆ ಯಾವುದೇ ಸಾರ್ವಜನಿಕ ಸಭೆಗಳಿಗೆ ಕಿರಾಣಿ ಸಲೂನ್ ಮತ್ತಿತರ ಕಡೆಗೆ ಪ್ರವೇಶ ಇಲ್ಲದೆ ಇರುವುದು ದೊಡ್ಡ ದುರಂತವಾಗಿದೆ ಯಾವುದೇ ಸಮಯದಲ್ಲಿ ಕೋಮು ಗಲಭೆ ಜರುಗಿದಲ್ಲಿ ಇದಕ್ಕೆ ಪಿಡಿಒ ಹಾಗೂ ಕಾರ್ಯನಿರ್ವಕ ಅಧಿಕಾರಿಗಳು ತಾಲೂಕ ಪಂಚಾಯತ್ ಹೊಣೆಗಾರರು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಯಂಕಪ್ಪ ದೊಡ್ಡಮನಿ ತಾಲೂಕ ಅಧ್ಯಕ್ಷರು ಹಾಗೂ ಉಪಾಧ್ಯಕ್ಷ ದುರ್ಗಪ್ಪ ಉಪಸ್ಥಿತರಿದ್ದರು

Total Views: 1
Share This Article