ಕಲ್ಯಾಣ ಸಿರಿಹಾವು ಕಡಿತ ನಿಯಂತ್ರಣ ಜಾಗೃತಿ, ತಂಬಾಕು ನಿಯಂತ್ರಣ ಕಾರ್ಯಕ್ರಮ Last updated: July 2, 2026 2:08 pm H.Mallikarjun - Kalyanasiri Share 0 Min Read SHARE ಜಾಹೀರಾತುhttps://kalyanasiri.in/2026/06/23/snake-bite-control-awareness-tobacco-control-program/ಜಾಹೀರಾತು Total Views: 1Relatedಜಾಹೀರಾತು ಸರಕಾರಿ ಬಾಲಕರ ಬಾಲಮಂದಿರಕ್ಕೆ ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕರ ಭೇಟಿ — ಮಗುವಿಗೆ ಕುಟುಂಬದ ಪ್ರೀತಿ, ಶಿಕ್ಷಣ ಮುಖ್ಯ: ಎನ್.ಮಹೇಶಬಾಬು —- ಕೊಪ್ಪಳ ಸೆಪ್ಟೆಂಬರ್ 22 (ಕರ್ನಾಟಕ ವಾರ್ತೆ): ಮಗುವಿನ ಪೋಷಣೆ, ಬೆಳವಣಿಗೆ ಮತ್ತು ರಕ್ಷಣೆಯ ಪ್ರಾಥಮಿಕ ಜವಾಬ್ದಾರಿ ಜೈವಿಕ ಅಥವಾ ದತ್ತು ಪೋಷಕರದ್ದಾಗಿದೆ. ಪೋಷಣೆ ಮತ್ತು ರಕ್ಷಣೆ ಅಗತ್ಯವಿರುವ ಮಗುವನ್ನು ಸಾಂಸ್ಥಿಕ ಪೋಷಣೆಯಲ್ಲಿ (ಬಾಲಮಂದಿರ) ಇರಿಸುವುದು ಕೊನೆಯ ಆಯ್ಕೆಯಾಗಬೇಕೇ ಹೊರತು ಮೊದಲ ಆದ್ಯತೆಯಾಗಬಾರದು ಎಂದು ಬೆಂಗಳೂರಿನ ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕರಾದ ಎನ್.ಮಹೇಶಬಾಬು ಹೇಳಿದರು. ಅವರು ಇತ್ತೀಚೆಗೆ (ಸೆ. 19ರಂದು) ಕೊಪ್ಪಳದ ಸರಕಾರಿ ಬಾಲಕರ ಬಾಲಮಂದಿರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು. ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2015 (ತಿದ್ದುಪಡಿ-2021) ನಿಯಮಾವಳಿಗಳ ಕುರಿತು ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದ ಅವರು, “ಮಕ್ಕಳನ್ನು ದೀರ್ಘಕಾಲದವರೆಗೆ ಅನಾವಶ್ಯಕವಾಗಿ ಪಾಲನಾ ಸಂಸ್ಥೆಗಳಲ್ಲಿ ಇರಿಸಿಕೊಳ್ಳಬಾರದು. ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ, ವಸತಿ ಸಹಿತ ಶಾಲೆಗಳಿಗೆ ದಾಖಲಿಸುವುದು ಅಥವಾ ಪ್ರಾಯೋಜಕತ್ವ ಯೋಜನೆಯಡಿ ನೆರವು ನೀಡಿ ಮರಳಿ ಕುಟುಂಬಕ್ಕೆ ಸೇರ್ಪಡೆಗೊಳಿಸಬೇಕು. ಜತೆಗೆ ಮಕ್ಕಳು ಶಿಕ್ಷಣದ ಮುಖ್ಯವಾಹಿನಿಯಲ್ಲಿ ಮುಂದುವರಿಯುತ್ತಿರುವುದನ್ನು ಅಧಿಕಾರಿಗಳು ನಿಯಮಿತವಾಗಿ ಪರಿಶೀಲಿಸಬೇಕು ಎಂದರು. ಪರಿತ್ಯಜಿಸಿದ, ಒಪ್ಪಿಸಲ್ಪಟ್ಟ ಮಕ್ಕಳು ಹಾಗೂ ಪೋಷಕರಿಂದ ಪಾಲನೆ ಸಾಧ್ಯವಿಲ್ಲವೆಂದು ಮಕ್ಕಳ ಕಲ್ಯಾಣ ಸಮಿತಿಯಿಂದ ದೃಢಪಟ್ಟ ಮಕ್ಕಳನ್ನು ಕಾನೂನುಬದ್ಧ ‘ದತ್ತು ಪ್ರಕ್ರಿಯೆ’ಗೆ ಒಳಪಡಿಸಿ ಶಾಶ್ವತ ಕುಟುಂಬವನ್ನು ಕಲ್ಪಿಸಿಕೊಡಲು ಆದ್ಯತೆ ನೀಡಬೇಕು. ‘ಮಿಷನ್ ವಾತ್ಸಲ್ಯ’ ಯೋಜನೆಯಡಿ ಯಾವುದೇ ಮಗು ರಕ್ಷಣೆ ಮತ್ತು ಶಿಕ್ಷಣದಿಂದ ವಂಚಿತವಾಗಬಾರದು. ಬೀದಿ ಬದಿಯ ಮಕ್ಕಳು, ಭಿಕ್ಷಾಟನೆ ಹಾಗೂ ಬಾಲ ಕಾರ್ಮಿಕ ಪದ್ಧತಿಯಲ್ಲಿ ಸಿಲುಕಿರುವ ಸಂಕಷ್ಟಕ್ಕೀಡಾದ ಮಕ್ಕಳನ್ನು ಪತ್ತೆಹಚ್ಚಲು ಸಂಬಂಧಪಟ್ಟ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಿಯಮಿತವಾಗಿ ಅನಿರೀಕ್ಷಿತ ದಾಳಿಗಳನ್ನು ನಡೆಸಿ, ರಕ್ಷಿಸಿ, ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಅಮರೇಶ, ಜಿಲ್ಲಾ ನಿರೂಪಣಾಧಿಕಾರಿಗಳಾದ ನಟರಾಜ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳಾದ ಅನ್ನಪೂರ್ಣ ಹುಬಕಟ್ಟಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಸಿಂಧು ಅಂಗಡಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ರೋಹಿಣಿ ಕೊಟಗಾರ, ಸರಕಾರಿ ಬಾಲಕರ ಬಾಲಮಂದಿರದ ಅಧೀಕ್ಷಕರಾದ ಕೃಷ್ಣಾಸಾ ಬಾಕಳೆ, ಮಹಿಳಾ ಅಭಿವೃದ್ಧಿ ನಿಗಮದ ಅಭಿವೃದ್ಧಿ ನಿರೀಕ್ಷಕರಾದ ಪೂರ್ಣಿಮಾ ಏಳಬಾವಿ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳಾದ ವೆಂಕಟೇಶ ದೇಶಪಾಂಡೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಬಾಲಮಂದಿರದ ಸಿಬ್ಬಂದಿ ಉಪಸ್ಥಿತರಿದ್ದರು. ಎಸ್ಐಆರ್: ಕೊಪ್ಪಳ ಜಿಲ್ಲೆಯಲ್ಲಿ ಐದನೇ ದಿನಕ್ಕೆ10,58,609 ಗಣತಿ ನಮೂನೆ ವಿತರಣೆ ನರೇಗಾ ಕಾಮಗಾರಿಯಲ್ಲಿ ಎಲ್ಲಾ ಕೂಲಿಕಾರರು ಕೆಲಸಕ್ಕೆ ಹಾಜರಾಗಿರಿ: ಅಗಳಕೇರಾ ಪಿಡಿಒ ಬಸವರಾಜ ಬಳಿಗಾರ ಬಡವರ ಬದುಕಿನ ಕಾಳಜಿ ಇರಲಿ: ಆಹಾರ ಆಯೋಗದಅಧ್ಯಕ್ಷ ಡಾ.ಹೆಚ್.ಕೃಷ್ಣ ಅವರಿಂದ ಅಧಿಕಾರಿಗಳಿಗೆ ಪಾಠ ಕೇರಳದ ಕಾಸರಗೋಡಿನಲ್ಲಿ ವಿಶ್ವನಾಥ್ಗೆ ದತ್ತಿ ಪ್ರಶಸ್ತಿ ಪ್ರಧಾನ Sign Up For Daily NewsletterBe keep up! Get the latest breaking news delivered straight to your inbox.[mc4wp_form]By signing up, you agree to our Terms of Use and acknowledge the data practices in our Privacy Policy. You may unsubscribe at any time. Share This Article Facebook Whatsapp Whatsapp Telegram Copy Link Print Share Previous Article ವಿಧಾನಸೌಧದಲ್ಲಿ ನಗರಾಭಿವೃದ್ಧಿ ಸಚಿವರಸಚಿವಾಲಯದ ಕಚೇರಿ ಉದ್ಘಾಟನೆ Next Article ಸಚಿವರಾದ ಬಳಿಕ ಮೊದಲ ಬಾರಿಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಡಾ. ಯತೀಂದ್ರ ಸಿದ್ದರಾಮಯ್ಯ Stay Connected235.3KFollowersLike69.1KFollowersFollow11.6KFollowersPin56.4KFollowersFollow136KSubscribersSubscribe4.4KFollowersFollow - Advertisement -Latest News ಆರ್ಥಿಕ ಸಂಕಷ್ಟದಲ್ಲಿದ್ದ 183 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ₹34.84 ಲಕ್ಷ ನೆರವು ಕಲ್ಯಾಣಸಿರಿ ವಿಶೇಷ 10 hours ago ಡಾ. ಅನಿಲ್ ಕುಮಾರ್ ಕೆ.ವಿ. ಅವರಿಗೆ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಪ್ರಶಸ್ತಿ ಕಲ್ಯಾಣಸಿರಿ ವಿಶೇಷ 11 hours ago ಬರಪೀಡಿತ ಗಂಗಾವತಿಯಲ್ಲಿ ರೈತರ ಸಂಕಷ್ಟ: ಸಮರ್ಪಕ ಪರಿಹಾರಕ್ಕೆ ಆಗ್ರಹ ಕಲ್ಯಾಣಸಿರಿ ವಿಶೇಷ 12 hours ago ಬಿಎಂ ಕಾವಲ್ ಸರ್ಕಾರಿ ವಿದ್ಯಾರ್ಥಿ ನಿಲಯದಲ್ಲಿ ಅವ್ಯವಸ್ಥೆ: ಕಾವಲುಗಾರ ಗವಿರಾಜ್ ವಿರುದ್ಧ ತನಿಖೆಗೆ ಆಗ್ರಹ ಕಲ್ಯಾಣಸಿರಿ ವಿಶೇಷ ರಾಜಕೀಯ 12 hours ago