ವಿಧಾನಸೌಧದಲ್ಲಿ ನಗರಾಭಿವೃದ್ಧಿ ಸಚಿವರಸಚಿವಾಲಯದ ಕಚೇರಿ ಉದ್ಘಾಟನೆ

H.Mallikarjun
H.Mallikarjun - Kalyanasiri
2 Min Read

ವಿಧಾನಸೌಧದಲ್ಲಿ ನಗರಾಭಿವೃದ್ಧಿ ಸಚಿವರ ಸಚಿವಾಲಯದ ಕಚೇರಿ ಉದ್ಘಾಟನೆ

Urban Development Minister Inaugurates Secretariat Office at Vidhana Soudha

ಬೆಂಗಳೂರು, ಜು. 2: ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಇಂದು ವಿಧಾನಸೌಧದಲ್ಲಿನ ಸಚಿವಾಲಯದ ತಮ್ಮ ನೂತನ ಕಚೇರಿಯನ್ನು ಉದ್ಘಾಟಿಸಿದರು.

ಬಳಿಕ ಕಚೇರಿಗೆ ಆಗಮಿಸಿದ್ದ ಸಾರ್ವಜನಿಕರನ್ನು ಭೇಟಿ ಮಾಡಿ, ಅವರ ಅಹವಾಲುಗಳು ಹಾಗೂ ಮನವಿಗಳನ್ನು ಆಲಿಸಿದ ಸಚಿವರು, ಸಂಬಂಧಿಸಿದ ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಜನಪರ, ಪಾರದರ್ಶಕ ಹಾಗೂ ಉತ್ತರದಾಯಿ ಆಡಳಿತಕ್ಕೆ ಬದ್ಧತೆಯೊಂದಿಗೆ ಕಾರ್ಯನಿರ್ವಹಿಸುವ ಸಂಕಲ್ಪವನ್ನು ಪುನರುಚ್ಚರಿಸಿದರು.

ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ವಿಷಯಗಳಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರೊಂದಿಗೆ ನಿರಂತರ ಸಮನ್ವಯ ಸಾಧಿಸಿ, ಸಮಸ್ಯೆಗಳಿಗೆ ತ್ವರಿತ ಹಾಗೂ ಪರಿಣಾಮಕಾರಿ ಸ್ಪಂದನೆ ನೀಡುವ ಉದ್ದೇಶದಿಂದ ಸಚಿವಾಲಯದ ಕಚೇರಿ ಸದಾ ಎಲ್ಲರಿಗೂ ಮುಕ್ತವಾಗಿರಲಿದೆ ಎಂದು ಸಚಿವರು ತಿಳಿಸಿದರು.

Urban Development Minister Inaugurates Secretariat Office at Vidhana Soudha

Bengaluru, July 2: Karnataka’s Urban Development Minister, Dr. Yathindra Siddaramaiah, today inaugurated his Secretariat office at Vidhana Soudha.

Following the inauguration, the Minister met public who had visited the office, heard their grievances and petitions, and directed the concerned officials to take necessary action for their timely resolution.

Speaking on the occasion, Dr. Yathindra Siddaramaiah reaffirmed his commitment to ensuring people-centric, transparent, and accountable governance.

He stated that his office would remain accessible to elected representatives, government officials, and the general public to facilitate continuous coordination on matters relating to the Urban Development Department and to ensure prompt and effective redressal of public issues.

Total Views: 0
Share This Article