
Devara Dasimayya’s Diverse Contribution to Kannada Literature

ಕನ್ನಡ ಸಾಹಿತ್ಯಕ್ಕೆ ದೇವರ ದಾಸಿಮಯ್ಯನವರ ವೈವಿದ್ಯಮಯ ಕೊಡುಗೆ

ಕಂಪ್ಲಿ: ಇಲ್ಲಿನ ತಾಲೂಕು ಶರಣ ಸಾಹಿತ್ಯ ಪರಿಷತ್ ಮಡಿವಾಳ ಮಾಚಿದೇವರ ಸಮುದಾಯ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 196ನೇ ಮಹಾಮನೆ ಕಾರ್ಯಕ್ರಮ ನಡೆಯಿತು.
ಬಸಾಪಟ್ಟಣದ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಶಿವಾನಂದ ತಿಮ್ಮಾಪುರ ‘ದೇವರ ದಾಸಿಮಯ್ಯನವರ ಜೀವನ ಮತ್ತು ವಚನ’ ಕುರಿತು ಉಪನ್ಯಾಸ ನೀಡಿ, ಕನ್ನಡ ಸಾಹಿತ್ಯಕ್ಕೆ ದೇವರ ದಾಸಿಮಯ್ಯನವರು ಆದ್ಯ ವಚನಕಾರರಾಗಿ ವೈವಿಧ್ಯಮಯ ಕೊಡುಗೆ ನೀಡಿದ್ದಾರೆ. ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು. ದೇವರ ದಾಸಿಮಯ್ಯನವರು ಏಕದೇವೋಪಾಸನೆಯನ್ನು ತಮ್ಮ ವಚನಗಳಲ್ಲಿ ಸಾರಿದ್ದಾರೆ. ದಾಸಿಮಯ್ಯನವರು ಸ್ತ್ರೀ ಸಬಲೀಕರಣ, ಮೌಢ್ಯ ವಿರೋಧ, ಲಿಂಗ ಸಮಾನತೆ ಮೊದಲಾದ ಸಮಾಜ ಸಾಮರಸ್ಯ ಅಂಶಗಳನ್ನು ವಚನಗಳ ಮೂಲಕ ಪ್ರಸ್ತುತಪಡಿಸಿದ್ದಾರೆ. ಸಂಸಾರದಲ್ಲಿದ್ದುಕೊAಡೆ ಪಾರಮಾರ್ಥ ಸಾಧಿಸಬಹುದೆಂಬುದನ್ನು ಪ್ರಸ್ತುತಪಡಿಸಿದ್ದಾರೆ. ಆದಿ ವಚನಕಾರರಾಗುವ ಮೂಲಕ ವಚನ ಸಾಹಿತ್ಯಕ್ಕೆ ಭದ್ರ ಬುನಾದಿ ಹಾಕಿದ್ದಾರೆ. ಸಂಸಾರ ಮುಖ್ಯವೊ ಸನ್ಯಾಸವೊ ಎನ್ನುವ ಗೊಂದಲವನ್ನು ಸರಳವಾಗಿ ಪರಿಹರಿಸಿದ್ದಾರೆ. ಧಾರ್ಮಿಕ ಶೋಷಣೆಯನ್ನು ತಡೆಯುವಲ್ಲಿ ದೇವರ ದಾಸಿಮಯ್ಯನವರು ಕಟುವಾಗಿ ಟೀಕಿಸಿದ್ದಾರೆ ಎಂದರು.
ಷಾ.ಮಿಯಾಚಃದ್ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಡಾ.ಬಿ.ಸುನಿಲ್ ಅಧ್ಯಕ್ಷತೆವಹಿಸಿ ಮಾತನಾಡಿ, ದೇವರ ದಾಸಿಮಯ್ಯನವರ ವಚನಗಳು ಸರಳ ಮತ್ತು ಅರ್ಥಪೂರ್ಣ ಜೀವನ ಸಾಗಿಸುವಂತೆ ಪ್ರೇರೇಪಿಸುತ್ತವೆ. ಸಮಾಜವನ್ನು ಬಹು ಆಯಾಮಗಳ ಮೂಲಕ ಪರಿವೀಕ್ಷಿಸಿ ವಚನಗಳಲ್ಲಿ ಸಾಧರಪಡಿಸಿದ್ದಾರೆ. ದಾಸಿಮಯ್ಯ ಮತ್ತು ದುಗ್ಗಳೆಯವರ ದಾಂಪತ್ಯ ಜೀವನ ಸದಾ ಕಾಲ ಅನನ್ಯ ಮತ್ತು ಮಾದರಿಯಾಗಿದೆ ಎಂದರು.
ಗಂಗಾವತಿಯ ಕೆಕೆಆರ್‌ಟಿಸಿ ಬಸ್ ಡಿಪೋದ ತಾಂತ್ರಿಕ ಸಹಾಯಕ ಮಲ್ಲಿಕಾರ್ಜುನ ಕಡೂರು, ಮಡಿವಾಳ ಸಮಾಜದ ತಾಲೂಕು ಅಧ್ಯಕ್ಷ ಮಡಿವಾಳ ಹುಲುಗಪ್ಪ, ಪರಿಷತ್ ಕಾರ್ಯಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ, ಪದಾಧಿಕಾರಿಗಳಾದ ಕ.ಮ.ಹೇಮಯ್ಯಸ್ವಾಮಿ, ಎಸ್.ಡಿ.ಬಸವರಾಜ, ಎಲಿಗಾರ ವೆಂಕಟರೆಡ್ಡಿ, ರಾಘವೇಂದ್ರ ತಳವಾರ, ಕೆ.ಯಂಕಾರೆಡ್ಡಿ, ಕೆ.ಚಂದ್ರಶೇಖರ, ಎಸ್.ರಾಮು, ಜೀರ್ ಲೋಕೇಶ್, ಹನುಮಂತಪ್ಪ ಸೇರಿ ಇತರರಿದ್ದರು.
ಕಂಪ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ 196ನೇ ಮಹಾಮನೆ ಕಾರ್ಯಕ್ರಮದಲ್ಲಿ ಬಸಾಪಟ್ಟಣದ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಶಿವಾನಂದ ತಿಮ್ಮಾಪುರ ಉಪನ್ಯಾಸ ನೀಡಿದರು.
ಕಂಪ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ 196ನೇ ಮಹಾಮನೆ ಕಾರ್ಯಕ್ರಮದಲ್ಲಿ ಬಸಾಪಟ್ಟಣದ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಶಿವಾನಂದ ತಿಮ್ಮಾಪುರ, ಗಂಗಾವತಿಯ ಕೆಕೆಆರ್‌ಟಿಸಿ ಬಸ್ ಡಿಪೋದ ತಾಂತ್ರಿಕ ಸಹಾಯಕ ಮಲ್ಲಿಕಾರ್ಜುನ ಕಡೂರು ಇವರನ್ನು ಗೌರವಿಸಲಾಯಿತು.


